ಹೊಸನಗರ ತಾಲೂಕಿನ ಈ ವ್ಯಾಪ್ತಿಯ ಶಾಲೆಗಳಿಗೆ ನಾಳೆ ರಜೆ ಘೋಷಣೆ

0 21

ಹೊಸನಗರ : ತಾಲೂಕಿನಲ್ಲಿ ಭಾರಿ ಮಳೆ ಮುಂದುವರೆದಿರುವ ಹಿನ್ನೆಲೆಯಲ್ಲಿ ನಗರ ಹೋಬಳಿ ಮತ್ತು ನಿಟ್ಟೂರು ಕ್ಲಸ್ಟರ್ ವ್ಯಾಪ್ತಿಯಲ್ಲಿ ಮಂಗಳವಾರ ಸಹ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಹೊಸನಗರ ಬಿಇಒ ತಿಳಿಸಿದ್ದಾರೆ.

ತಾಲ್ಲೂಕಿನ‌ ನಗರ ಹೋಬಳಿ ಮತ್ತು ನಿಟ್ಟೂರು ಕ್ಲಸ್ಟರ್ ವ್ಯಾಪ್ತಿಯಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿರುವ ಕಾರಣ ಅಲ್ಲಲ್ಲಿ ಜೋರಾಗಿ ಗಾಳಿ ಸಹ ಬೀಸುತಿದೆಲ ಈ ಬಗ್ಗೆ ಜಿಲ್ಲಾ ಉಪನಿರ್ದೇಶಕರೊಂದಿಗೆ ಚರ್ಚಿಸಿದ್ದು, ಅವರ ಸೂಚನೆಯಂತೆ, ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ ರಜೆ ನೀಡುವುದು ಸೂಕ್ತ ಎಂದು ಭಾವಿಸಿ ಮುಂದೆ ಶಾಲಾ ದಿನಗಳನ್ನು ಸರಿದೂಗಿಸುವ ಷರತ್ತಿಗೆ ಒಳಪಟ್ಟ ಮಂಗಳವಾರ ರಜೆ ಘೋಷಣೆ ಮಾಡಲು ಅನುಮತಿ ನೀಡಿದೆ.

ತಾಲ್ಲೂಕಿನ ಇತರೆ ಭಾಗದಲ್ಲೂ ಹೆಚ್ಚು ಮಳೆ ಕಾರಣದಿಂದ ರಜೆ ನೀಡಬೇಕಾದಲ್ಲಿ ಎಸ್.ಡಿ.ಎಂ.ಸಿ ಯವರ ಜೊತೆ ಸಮಾಲೋಚಿಸಿ ರಜೆ ನೀಡಲು ತಿಳಿಸಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಅರ್. ಕೃಷ್ಣಮೂರ್ತಿ ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!