ಹೊಸನಗರ ತಾಲ್ಲೂಕಿನ 30 ಗ್ರಾ.ಪಂ.ಗಳಿಗೂ ಆಧಾರ್ ಕೇಂದ್ರ ಸ್ಥಾಪಿಸಿ ಸಾರ್ವಜನಿಕರ ಗೋಳು ತಪ್ಪಿಸಿ

0 0


ಹೊಸನಗರ: ತಾಲ್ಲೂಕಿನಲ್ಲಿ ಒಟ್ಟು 30 ಗ್ರಾಮ ಪಂಚಾಯತಿಗಳಿವೆ ಆದರೆ ಮೂರು ಕ್ಷೇತ್ರಗಳಲ್ಲಿ ನಗರ ಮತ್ತು ರಿಪ್ಪನ್‌ಪೇಟೆ ನಾಡ ಕಛೇರಿಗಳಲ್ಲಿ ಆಧಾರ್ ಕಾರ್ಡ್ ನೋಂದಣಿ ಮತ್ತು ಲೋಪಗಳನ್ನು ಸರಿಪಡಿಸುತ್ತಿದ್ದರೂ ನೆಟ್‌ವರ್ಕ್ ಸೇವೆ ಇಲ್ಲದೆ ಹೊಸನಗರ ತಾಲ್ಲೂಕು ಕಛೇರಿಗೆ ಜನರು ಬರುತ್ತಿದ್ದಾರೆ.

ತಾಲ್ಲೂಕು ಕಛೇರಿಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಆಧಾರ್ ಕಾರ್ಡ್ ಲೋಪ ಸರಿಪಡಿಸುತ್ತಿದ್ದರೂ ಸಂಜೆಯವರೆಗೆ 25 ಆಧಾರ್ ಕಾರ್ಡ್ ಲೋಪ ಸರಿಪಡಿಸುವುದು ಕಷ್ಟಕರವಾಗಿದೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಸುಮಾರು ನೂರಾರು ಜನ ಆಧಾರ್ ಕಾರ್ಡ್ ಸರಿಪಡಿಸಲು ಜನರು ಕಾದು-ಕಾದು ಸುಸ್ತಾಗಿ ಮನೆಗೆ ಮರಳುತ್ತಿದ್ದಾರೆ‌. ಇದರಿಂದ ಜನರಿಗೆ ಬಹಳ ತೊಂದರೆಯಾಗುತ್ತಿದೆ ಆದ್ದರಿಂದ ಈ ಸಮಸ್ಯೆಯನ್ನು ಬಗೆಹರಿಸಬೇಕಾದರೆ ಹೊಸನಗರ ತಾಲ್ಲೂಕಿನ 30 ಗ್ರಾಮ ಪಂಚಾಯತಿ ಮಟ್ಟದಲ್ಲಿ 30 ಆಧಾರ್ ನೋಂದಣಿ ಆರಂಭಿಸಿ ತಾಲ್ಲೂಕಿನ ಜನರ ಕಷ್ಟಗಳನ್ನು ಬಗೆ ಹರಿಸಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ‌.ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿರುವ ಸಿಂಧೂ:
ಹೊಸನಗರ ತಾಲ್ಲೂಕು ಕಛೇರಿಯಲ್ಲಿ ಆಧಾರ್ ಕಾರ್ಡ್ ನೋಂದಣಿ ನಡೆಸುತ್ತಿರುವ ಸಿಂಧೂರವರು ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಒಂದೊಂದು ದಿನ ಮಧ್ಯಾಹ್ನದ ಊಟವನ್ನು ಸಹ ಮಾಡದೆ ಬಂದವರಿಗೆ ತಾಳ್ಮೆಯಿಂದ ಉತ್ತರ ನೀಡುತ್ತಾ ಸೇವೆ ಸಲ್ಲಿಸುತ್ತಿದ್ದಾರೆ ಇವರ ತಾಳ್ಮೆ ಪರೀಕ್ಷೆಗೆ ಸಾರ್ವಜನಿಕರು ಮೆಚ್ಚಲೇಬೇಕಾಗಿದೆ.

Leave A Reply

Your email address will not be published.

error: Content is protected !!