ಹೊಸನಗರ ತಾಲ್ಲೂಕು ದಸಂಸ ಬೆಂಬಲ ಕಾಂಗ್ರೆಸ್ ಅಭ್ಯರ್ಥಿಗೆ

0 0


ಹೊಸನಗರ: ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಬೇಕಾದರೆ ಸರ್ವಾಧಿಕಾರಿ ಸರ್ಕಾರವಾದ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕಾಗಿದೆ ಗೆಲ್ಲಲ್ಲು ಸಮೀಪವಿರುವ ಹೊಸನಗರ-ಸಾಗರ ಕ್ಷೇತ್ರದ ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣರವರನ್ನು ಹಾಗೂ ತೀರ್ಥಹಳ್ಳಿ-ಹೊಸನಗರ ಕ್ಷೇತ್ರದ ಅಭ್ಯರ್ಥಿ ಕಿಮ್ಮನೆ ರತ್ನಾಕರ್‌ರವರನ್ನು ದಲ್ಲಿತ ಸಂಘರ್ಷ ಸಮಿತಿಯ ಬೆಂಬಲಿಸಲಿದೆ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ನಾಗರಾಜ್ ಅರಳಸುರಳಿಯವರು ಹೇಳಿದರು.


ಹೊಸನಗರದ ಶೀತಾಲ್ ಹೋಟಲ್ ಆವರಣದಲ್ಲಿ ಸುದ್ಧಿಗೋಷ್ಟಿ ನಡೆಸಿ ಮಾತನಾಡಿ, ಸಂವಿಧಾನ ಬದಲಿಸುತ್ತೇವೆ ಎಂದವರನ್ನೇ ನಾವು ಗೆಲ್ಲಿಸಿದರೆ ಅದಕ್ಕೆ ಅರ್ಥವೇ ಇರುವುದಿಲ್ಲ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ದಲಿತ ಸಂಘರ್ಷ ಸಮಿತಿಯ ಒಟ್ಟು ಇಪ್ಪತ್ತು ಸಂಘಟನೆಗಳು ಬಿಜೆಪಿಯ ಅಭ್ಯರ್ಥಿಗಳ ವಿರುದ್ಧ ಬೆಂಬಲಿಸಲಿದೆ ಎಂದರು.


ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ದಲಿತರ ಮೇಲಿನ ದೌರ್ಜನ್ಯ ಹೆಚ್ಚಳವಾಗಿದೆ ಬಿಜೆಪಿ ಸರ್ಕಾರ ಅಂಬೇಡ್ಕರ್ ವಿರೋಧಿ ನೀತಿ ಅನುಸರಿಸುತ್ತಿದೆ,ಎಸ್‌ಸಿಎಸ್‌ಪಿ, ಟಿಎಸ್ಪಿ ಲೆಕ್ಕಕ್ಕುಂಟು ಆಟಕಿಲ್ಲ, ದಲಿತ ಮಕ್ಕಳ ಸ್ಕಾಲರ್ ಶಿಪ್‌ ಕಡಿತ, ಒಳಮೀಸಲಾತಿ ಮಹಾಮೋಸ, ದಲಿತರು ಅಪ್ರಾಪ್ತರಂತೆ ಹಾಗೂ ಮಾನಸಿಕ ಅಸ್ವಸ್ಥರಂತೆ ಮಾಡಿರುವುದು, ಕೋವಿಡ್ ಸಂಕಷ್ಟದಲ್ಲಿದ್ದಾಗ ನೆರವಿಗೆ ಬರದಿರುವುದು ದಲಿತರಿಗೆ ನರೇಗಾ ಉದ್ಯೋಗ ನೀಡದಿರುವುದು, ದೇಶದಲ್ಲಿ ರಾಜ್ಯದಲ್ಲಿ ಭಯಂಕರ ಬೆಲೆ ಏರಿಕೆಯಾಗಿದೆ ಬಡವರು ಹಾಗೂ ಮಧ್ಯಮ ವರ್ಗದವರು ಬದುಕುವುದೇ ಕಷ್ಟಕರವಾಗಿದ್ದು ಇದರಿಂದ ಕೆಟ್ಟ ಆಡಳಿಯ ನಡೆಸುತ್ತಿರುವ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ಕಾಂಗ್ರೆಸ್ ಸರ್ಕಾರವನ್ನು ಕರ್ನಾಟಕ ರಾಜ್ಯದಲ್ಲಿ ತರಬೇಕಾಗಿರುವುದರಿಂದ ನಮ್ಮ ಸಂಘಟನೆ ಕಾಂಗ್ರೆಸ್ ಅಭ್ಯರ್ಥಿಗಳ ಬೆಂಬಲಕ್ಕೆ ನಿಂತಿದ್ದೇವೆ ಎಂದರು.


ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕರಾದ ಮಂಜುನಾಥ್ (ಬಾಬಣ್ಣ) ಜಿಲ್ಲಾ ಸಂಘಟಕರಾದ ಹಾದಿಗಲ್ಲು ಮಂಜುನಾಥ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!