ಹೊಸನಗರ ತಾಲ್ಲೂಕು ಬಿಸಿಯೂಟ ಕಾರ್ಯಕರ್ತೆಯರಿಂದ ಜೂ.16 ರಂದು ಪ್ರತಿಭಟನೆ, ಬಿಇಒ ಕಛೇರಿಯ ಮುಂದೆ ಧರಣಿ ; ಪರಮೇಶ್ವರ್

0 0


ಹೊಸನಗರ: ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕೊರತೆ ಕಂಡು ಬಂದಿರುವ ಶಾಲೆಗಳಲ್ಲಿ ಬಿಸಿಯೂಟ ಕಾರ್ಯಕರ್ತೆಯರನ್ನು ಕಿತ್ತು ಹಾಕುವುದು ಮತ್ತು ಬಿಸಿಯೂಟ ಕಾರ್ಯಕರ್ತೆಯರೊಂದಿಗೆ ಅಸಭ್ಯವಾಗಿ ಕೆಲವು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಸದಸ್ಯರುಗಳು ನಡೆದುಕೊಳ್ಳುತ್ತಿದ್ದು ಇದರ ವಿರುದ್ಧವಾಗಿ ಜೂನ್ 16 ರಂದು ಹೊಸನಗರ ತಾಲ್ಲೂಕಿನ ಬಿಸಿಯೂಟ ಕಾರ್ಯಕರ್ತೆಯರು ಶಾಲೆಯಲ್ಲಿ ಮಕ್ಕಳಿಗೆ ಬಿಸಿಯೂಟ ತಯಾರಿಸದೇ ಪ್ರತಿಭಟಿಸಲಿದ್ದಾರೆಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕೆ. ಪರಮೇಶ್ವರ ಹೊಸಕೊಪ್ಪ ಇವರು ತಿಳಿಸಿದ್ದಾರೆ.

ಪಟ್ಟಣದ ನೆಹರು ಮೈದಾನದ ಆವರಣದಲ್ಲಿ ಸುದ್ಧಿಗೋಷ್ಟಿ ನಡೆಸಿ ಮಾತನಾಡಿ, ತಾಲ್ಲೂಕಿನ ಹಿರೇಮೈಥೆ ಶಾಲೆಯಲ್ಲಿ ಶಾಲಾ ಮಕ್ಕಳ ದಾಖಲಾತಿ ಕಡಿಮೆ ಆಗಿದ್ದಕ್ಕೆ ಬಿಸಿಯೂಟ ಕಾರ್ಯಕರ್ತೆಯ ಮಕ್ಕಳ ಜೊತೆ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದೀರಿ ಹಾಗೂ ಪೋಷಕರೊಂದಿಗೆ ಸೌಹಾರ್ದತೆಯಿಂದ ಇಲ್ಲವೆಂದು ಪೋಷಕರ ಅರ್ಜಿಯ ಅನುಮೋದನೆ ಮೇರೆಗೆ ಜೂ.01 ರಿಂದ ಬಿಸಿಯೂಟ ಕಾರ್ಮಿಕ ಹುದ್ದೆಯಿಂದ ವಜಾ ಮಾಡಲಾಗಿದ್ದು ಇದರಿಂದ ಅವರ ಕುಟುಂಬದ ಜೀವನ ನಡೆಸುವುದು ಕಷ್ಟಕರವಾಗಿರುತ್ತದೆ ಅದು ಅಲ್ಲದೇ ಹೊಸನಗರ ತಾಲ್ಲೂಕಿನಲ್ಲಿ ಬಿಸಿಯೂಟ ಕಾರ್ಮಿಕರನ್ನು ಸರಿಯಾಗಿ ನಡೆಸಿಕೊಳ್ಳದೇ ಎಸ್‌ಡಿಎಂಸಿಯವರು ಹಾಗೂ ಶಿಕ್ಷಕರ ವರ್ಗದವರು ಅಸಭ್ಯವಾಗಿ ನಡೆಸಿಕೊಳ್ಳುತ್ತಿದ್ದು ಇದರಿಂದ ಹೊಸನಗರ ತಾಲ್ಲೂಕಿನ ಬಿಸಿಯೂಟ ನೌಕರರಿಗೆ ಕೆಲಸ ಮಾಡುವುದೆ ಕಷ್ಟಕರವಾಗಿದೆ ಎಂದು ಹೇಳಿದರಲ್ಲದೇ ಶಾಲೆಯಿಂದ ತೆಗೆದಿರುವ ಬಿಸಿಯೂಟ ಕಾರ್ಮಿಕರನ್ನು ಪುನಃ ಕರೆದುಕೊಳ್ಳುವ ಉದ್ದೆಶದಿಂದ ಜೂ. 16 ಬೆಳಿಗ್ಗೆ ನೆಹರು ಮೈದಾನದಿಂದ ಹೊಸನಗರ ತಾಲ್ಲೂಕು ಶಿಕ್ಷಣಾಧಿಕಾರಿಗಳ ಕಛೇರಿಯವರೆಗೆ ಬಿಸಿಯೂಟ ಕಾರ್ಮಿಕರು ಪ್ರತಿಭಟನೆ ನಡೆಸಿ ನಂತರ ಶಿಕ್ಷಣಾಧಿಕಾರಿಗಳ ಕಛೇರಿಯ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ತಿಳಿಸಿದರು.


ಈ ಪತ್ರಿಕಾಘೋಷ್ಠಿಯಲ್ಲಿ ಅಕ್ಷರ ದಾಸೋಹ ತಾಲ್ಲೂಕು ಸಂಘದ ಅಧ್ಯಕ್ಷೆ ಸುಶೀಲ, ಖಜಾಂಚಿ ವನಜಾಕ್ಷಿ ಬೇಳೂರು, ಭಾಗ ಎರಡರ ಅಧ್ಯಕ್ಷೆ ಕಮಲಮ್ಮ, ತಾಲ್ಲೂಕು ಕಾರ್ಯದರ್ಶಿ ಮಂಜುಳಾ, ಆಕಾಶ ಮಕ್ಕಿ, ಉಪಾಧ್ಯಕ್ಷೆ ವಜ್ರಾವತಿ, ಯಶೋಧ, ಜ್ಯೋತಿ, ಶಕೀಲ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!