ಹೊಸನಗರ ಪಿಕಾರ್ಡ್ ಬ್ಯಾಂಕ್‌ಗೆ 7ನೇ ಬಾರಿ ಅಧ್ಯಕ್ಷರಾಗಿ ಎಂ.ವಿ. ಜಯರಾಮ್ ಆಯ್ಕೆ

0 35


ಹೊಸನಗರ: ಇಲ್ಲಿನ ಸಹಕಾರಿ ಬ್ಯಾಂಕ್‌ಗಳಲ್ಲಿ ಅತ್ಯುತಮ ಸಾರ್ವಜನಿಕರ ರೈತರಿಗೆ ಉತ್ತಮ ಮಟ್ಟದಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ಎಂ.ವಿ ಜಯರಾಮ್ ಅಧ್ಯಕ್ಷರಾಗಿ ಹಾಗೂ ಬೆನ್ನಟ್ಟೆ ಗುರುಮೂರ್ತಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಹೊಸನಗರದ ಪಿಕಾರ್ಡ್ ಬ್ಯಾಂಕ್ ಆವರಣದಲ್ಲಿ ಬುಧವಾರ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ನಡೆದಿದ್ದು ಅಧ್ಯಕ್ಷ, ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಚುನಾವಣಾಧಿಕಾರಿಯಾಗಿ ಶ್ರೀಪತಿ ಹಳಗುಂದ ಹಾಗೂ ಕೆಸಿನಮನೆ ರತ್ನಾಕರ್‌ರವರು ಕಾರ್ಯನಿರ್ವಹಿಸಿದರು.
ನಾನು 7ನೇ ಬಾರಿಗೆ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಂತೋಷ ತಂದಿದೆ. ಈ ಬ್ಯಾಂಕ್‌ನ ಆಡಳಿತ ವರ್ಗ ಸಿಬ್ಬಂದಿಗಳ ಸಹಕಾರ ಹಾಗೂ ರೈತರ ಬ್ಯಾಂಕ್‌ನ ಸದಸ್ಯರ ಸಾರ್ವಜನಿಕರ ಸಹಕಾರದಿಂದ ಬ್ಯಾಂಕನ್ನು ಈ ಮಟ್ಟಕ್ಕೆ ತಂದಿದ್ದೇವೆ. ಮುಂದಿನ ದಿನದಲ್ಲಿ ಇನ್ನೂ ಹೆಚ್ಚಿನ ಗುಣಮಟ್ಟದ ಸಹಕಾರ ನಿಮ್ಮಿಂದ ಬಯಸುತ್ತೇವೆ, ಸಹಕರಿಸಬೇಕೆಂದ ಅವರು, ಸಾಲ ಪಡೆದವರು ಸರಿಯಾದ ಸಮಯಕ್ಕೆ ಹಿಂತಿರುಗಿಸಬೇಕೆಂದು ಈ ಸಂದರ್ಭದಲ್ಲಿ ಎಂ.ವಿ.ಜಯರಾಮ್‌ರವರು ಮನವಿ ಮಡಿದರು.

ನಿರ್ದೇಶಕರಾಗಿ 10 ಸದಸ್ಯರು ಆಯ್ಕೆಯಾಗಿದ್ದು ನಾಗೇಶ ಕೆ.ಟಿ, ಮಹೇಂದ್ರ ಪಿ.ಸಿ, ವೇದಾಂತಪ್ಪ, ಹೆಚ್.ಆರ್ ದೇವೇಂದ್ರಪ್ಪ, ಹೇಮಾವತಿ, ಹೂವಮ್ಮ, ನರೇಂದ್ರ, ನಾಗೇಶ ಕೆ.ಎಸ್, ಸತೀಶ ಎಂ.ಟಿ ಈಶ್ವರಪ್ಪ ಬಿ, ಪಿಕಾರ್ಡ್ ಬ್ಯಾಂಕ್‌ನ ಎಲ್ಲ ಸಿಬ್ಬಂದಿಗಳು ಹಾಗೂ ವಿವಿಧ ಸಹಕಾರಿ ಸಂಘಗಳ ಅಧ್ಯಕ್ಷ, ಉಪಾಧ್ಯಕ್ಷರು, ಸಿಬ್ಬಂದಿಗಳು ಹಾಗೂ ಬ್ಯಾಂಕ್‌ನ ಮಾಜಿ ಅಧ್ಯಕ್ಷ, ನಿರ್ದೇಶಕರು ಇನ್ನೂ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!