ಹೊಸನಗರ ಪ.ಪಂ.ಗೆ ಸೇರಿದ ಸಾವಿರಾರು ರೂ. ಮೌಲ್ಯದ ಕಲ್ಲುಗಳು ಅಕ್ರಮ ಮಾರಾಟ ; ಮಾಜಿ ಅಧ್ಯಕ್ಷ ಚಂದ್ರಪ್ಪ ಗಂಭೀರ ಆರೋಪ

0 0


ಹೊಸನಗರ: ಪಟ್ಟಣದ 11 ವಾರ್ಡ್‌ಗಳಲ್ಲಿ ಕೆಲವು ವಾರ್ಡ್‌ಗಳ ಚರಂಡಿ ಕೆಲಸ ನಡೆಯುತ್ತಿದ್ದು ಈ ಚರಂಡಿಯ ನೂರಾರು ವರ್ಷದ ಹಳೆಯ ಕಲ್ಲುಗಳನ್ನು ಕಿತ್ತು ಸಿಮೆಂಟ್ ಚರಂಡಿ ಮಾಡುತ್ತಿದ್ದಾರೆ ಆದರೆ ನೂರಾರು ವರ್ಷದ ಹಳೆಯ ಚರಂಡಿಯ ಕಲ್ಲುಗಳು ಕೆಲವರ ಮನೆಯ ಬೇಲಿಗಳಿಗೆ ಬಳಕೆ ಹಾಗೂ ಕೆಲವು ಕಡೆಗಳಲ್ಲಿ ಸ್ಟಾಕ್ ಮಾಡಿಕೊಂಡು ಮಾರಾಟ ದಂಧೆ ನಡೆಯುತ್ತಿದ್ದರೂ ಪಟ್ಟಣ ಪಂಚಾಯತಿಯ ಅಧಿಕಾರಿಗಳು ಕಣ್ಮುಚ್ಚಿ ಕುಳಿತುಕೊಂಡಿದ್ದಾರೆ ಎಂದು ಪಟ್ಟಣ ಪಂಚಾಯತಿಯ ಮಾಜಿ ಸ್ಥಾಯಿ ಸಮಿತಿಯ ಅಧ್ಯಕ್ಷರು ಹಾಗೂ ಪಟ್ಟಣ ಪಂಚಾಯತಿಯ ಮಾಜಿ ಅಧ್ಯಕ್ಷ ಚಂದ್ರಪ್ಪನವರು ಪಟ್ಟಣ ಪಂಚಾಯತಿಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.


ಹೊಸನಗರ ಪಟ್ಟಣ ಪಂಚಾಯತಿಗೆ ಸುಮಾರು 5 ಕೋಟಿ ರೂ.ನಷ್ಟು ಅನುದಾನವನ್ನು ಶಾಸಕರಾದ ಹರತಾಳು ಹಾಲಪ್ಪನವರು ನೀಡಿದ್ದಾರೆ. ಹೊಸನಗರ ಪಟ್ಟಣ ಸುಂದರವಾಗಬೇಕು ಇಲ್ಲಿನ ನಿವಾಸಿಗಳು ಸ್ವಚ್ಚತೆಯಿಂದ ಸ್ವಚ್ಚ ಪಟ್ಟಣವಾಗಿ ರೂಪುಗೊಳ್ಳಬೇಕು ಎಂಬ ಅಭಿಲಾಷೆ ಶಾಸಕರದ್ದು ಆದರೆ ಪಟ್ಟಣ ಪಂಚಾಯತಿಯ ಆಡಳಿತ ವರ್ಗ ಮತ್ತು ಅಧಿಕಾರಿಗಳ ವರ್ಗ ಸುಮಾರು ವರ್ಷಗಳ ಹಿಂದೆ ಕಲ್ಲುಗಳಿಂದ ನಿರ್ಮಿಸಿದ ಕಲ್ಲು ಚಪ್ಪಡಿಗಳನ್ನು ಕಿತ್ತು ಸಿಮೆಂಟ್ ಚರಂಡಿ ಮಾಡುತ್ತಿದ್ದಾರೆ ಮಾಡುವುದಕ್ಕೆ ನಮ್ಮದೆನೂ ಅಭ್ಯಂತರವಿಲ್ಲ ಆದರೆ ಪಟ್ಟಣ ಪಂಚಾಯತಿಗೆ ಲಕ್ಷಗಟ್ಟಲೇ ಆದಾಯ ಬರುವ ಕಲ್ಲು ಚಪ್ಪಡಿಗಳು ಗುತ್ತಿಗೆ ಹಿಡಿದಿರುವವರ ಹಾಗೂ ಚರಂಡಿ ಕೆಲಸ ಮಾಡುತ್ತಿರುವವರ ಪಾಲಾಗುತ್ತಿರುವುದು ಖಂಡನೀಯ. ಕಿತ್ತ ಚರಂಡಿಯ ಚಪ್ಪಡಿಗಳನ್ನು ವಾಪಸ್ ಪಟ್ಟಣ ಪಂಚಾಯತಿಯವರು ತರಿಸಿದರೆ ಲಕ್ಷಗಟ್ಟಲೇ ಹಣ ಪಟ್ಟಣ ಪಂಚಾಯತಿಗೆ ಆದಾಯವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಆದರೆ ಪಟ್ಟಣ ಪಂಚಾಯತಿ ವ್ಯಾಪ್ತಿಯ 11ನೇ ವಾರ್ಡ್‌ನ ಹೆಲಿಪ್ಯಾಡ್ ಬಳಿ ಪಟ್ಟಣ ಪಂಚಾಯತಿಯ ಚರಂಡಿಯ ಕಿತ್ತ ಚಪ್ಪಡಿಗಳನ್ನು ಸ್ಟಾಕ್ ಮಾಡಿಕೊಂಡು ಅಕ್ರಮ ಮಾರಾಟವಾಗುತ್ತಿದೆ. ತಕ್ಷಣ ಪಟ್ಟಣ ಪಂಚಾಯತಿ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಹಾಗೂ ಸಂಬಂಧಪಟ್ಟ ಮೇಲಾಧಿಕಾರಿಗಳು ತನಿಖೆ ನಡೆಸಿ ಗುತ್ತಿಗೆದಾರರ ಕೆಲಸಗಾರರ ವಿರುದ್ದ ಕ್ರಮ ಕೈಗೊಳ್ಳಲಿ, ಪಟ್ಟಣ ಪಂಚಾಯತಿಯ ಆದಾಯ ಹೆಚ್ಚಿಸಿಕೊಳ್ಳಲಿ ನಾನು ಅಧ್ಯಕ್ಷರಾದ ಸಂದರ್ಭದಲ್ಲಿ ಕಿತ್ತ ಚಪ್ಪಡಿಗಳನ್ನು ಬಹಿರಂಗ ಹರಾಜು ಮುಖಾಂತರ ಲಕ್ಷಗಟ್ಟಲೇ ಆದಾಯವನ್ನು ಪಟ್ಟಣ ಪಂಚಾಯತಿಗೆ ಒದಗಿಸಿಕೊಟ್ಟಿದ್ದೇವೆ ಆದರೆ ಇತ್ತಿಚಿನ ದಿನದಲ್ಲಿ ಚರಂಡಿಯ ಕಿತ್ತ ಚಪ್ಪಡಿಗಳು ಬಲಾಢ್ಯರ ಪಾಲಾಗುತ್ತಿದೆ ಎಂದರು.

Leave A Reply

Your email address will not be published.

error: Content is protected !!