ಹೊಸನಗರ ರಾಮಕೃಷ್ಣ ವಿದ್ಯಾಲಯದಲ್ಲಿ ಶುಲ್ಕ ಕಟ್ಟಲಿಲ್ಲ ಎಂದು ತಡೆ ಹಿಡಿದ ವಿದ್ಯಾರ್ಥಿಗಳ ಫಲಿತಾಂಶ !
ಹೊಸನಗರ: ಇಲ್ಲಿನ ಖಾಸಗಿ ಶಾಲೆಗಳಲ್ಲಿ ಒಂದಾಗಿರುವ ರಾಮಕೃಷ್ಣ ವಿದ್ಯಾಲಯ ಶಾಲೆಯಲ್ಲಿ ವಿದ್ಯಾರ್ಥಿಗಳು ಶುಲ್ಕ ಕಟ್ಟಲಿಲ್ಲ ಎಂದು ವಿದ್ಯಾರ್ಥಿಗಳ ಫಲಿತಾಂಶ ತಡೆ ಹಿಡಿದ ಆಡಳಿತ ಮಂಡಳಿ ಮಕ್ಕಳ ಮನಸ್ಸಿನ ಮೇಲೆ ದೌರ್ಜನ್ಯ ಎಸಗಿದ ಘಟನೆ ನಡೆದಿದ್ದು ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಿದ ಘಟನೆ ವರದಿಯಾಗಿದೆ.
ಹೊಸನಗರದ ರಾಮಕೃಷ್ಣ ವಿದ್ಯಾಲಯದಲ್ಲಿ 3ನೇ ತರಗತಿ ಸಿಬಿಸಿಎಸ್ ಓದುತ್ತಿರುವ ನಿರಂಜನ ಎಸ್ ಮತ್ತು ಎಲ್ ಕೆ.ಜಿ ಓದುತ್ತಿರುವ ನರೇಂದ್ರ ನನ್ನ ಮಕ್ಕಳ ಫಲಿತಾಂಶವನ್ನು ಬೊರ್ಡ್ ಮೇಲೆ ಹಾಕಿ ನಂತರ ಮಾರ್ಕರ್‌ಗಳಿಂದ ಅಳಿಸಿ ಹಾಕಿದ್ದಾರೆ ಇದರಿಂದ ನನ್ನ ಮಕ್ಕಳ ಮನಸ್ಸಿನ ಮೇಲೆ ದೌರ್ಜನ್ಯ ರಾಮಕೃಷ್ಣಯ ದೇವರಾಜ್ ಹಾಗೂ ಶಾಲೆಯ ಆಡಳಿತ ಮಂಡಳಿ ಎಸಗಿದೆ ಎಂದು ಹೊಸನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವಿದ್ಯಾರ್ಥಿ ಪೋಷಕರಾದ ಸುಧಾಕರ್‌ರವರು ದೂರು ಸಲ್ಲಿಸಿದ್ದಾರೆ.

ಶಿಕ್ಷಣ ಸಂಸ್ಥೆ ಮಾಡುವ ತಪ್ಪಿಗೆ ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ:
ನಮ್ಮ ಮಕ್ಕಳು ಖಾಸಗಿ ಶಾಲೆಯಲ್ಲಿ ಓದಿದರೆ ಮುಂದೆ ಉತ್ತಮ ಈ ದೇಶದ ಪ್ರಜೆಯಾಗುತ್ತಾರೆ ಉನ್ನತ್ತ ಸ್ತಾನಕ್ಕೆ ಹೋಗುತ್ತಾರೆ ನಮಗೆ ಆಸರೆಯಾಗಿರುತ್ತಾರೆ ಎಂದು ತಿಳಿದ ಅನೇಕ ವಿದ್ಯಾರ್ಥಿಗಳ ಪೋಷಕರು ಖಾಸಗಿ ಶಾಲೆಗಳಲ್ಲಿ ಓದಿಸಲು ಪ್ರಯತ್ನ ಮಾಡುತ್ತಾರೆ ಕೆಲವೊಂದು ಸಲ ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಯಲ್ಲಿ ದುಬಾರಿ ಶುಲ್ಕ ಕಟ್ಟಲು ಸಾಧ್ಯವಾಗದೇ ಇದ್ದಾಗ ಕಷ್ಟಗಳನ್ನು ಅನುಭವಿಸುತ್ತಾರೆ ಈ ರೀತಿ ವಿದ್ಯಾರ್ಥಿಗಳ ಫೀಜ್ ಕಟ್ಟಲಿಲ್ಲ ಎಂದು ವಿದ್ಯಾರ್ಥಿಗಳ ಫಲಿತಾಂಶ ತಡೆ ಹಿಡಿಯುವುದು ಎಷ್ಟು ಸರಿ? ಇದು ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರಿದರೆ ಮಕ್ಕಳ ಮನಸ್ಸು ಮೊದಲೇ ಮೃದು ಮುಂದೆ ಯಾವ ಪರಿಣಾಮ ಬೀರಬಹುದು ಎಂದು ಶಿಕ್ಷಣ ಸಂಸ್ಥೆ ಆಲೋಚಿಸಿದರೆ ತುಂಬಾ ಒಳ್ಳೆಯದು.
ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಆಡಳಿತ ಮಂಡಳಿಯ ದರ್ಬಾರು ಶಿಕ್ಷಣ ಇಲಾಖೆ ನೆಪ ಮಾತ್ರಕ್ಕೆ
ಹೊಸನಗರ ತಾಲ್ಲೂಕಿನಲ್ಲಿ ಬೆರಳೆಣಿಕೆಯಷ್ಟು ಖಾಸಗಿ ಶಿಕ್ಷಣ ಸಂಸ್ಥೆಗಳಿವೆ ಅದರೆ ಅವರು ವಿದ್ಯಾರ್ಥಿಗಳ ಮೇಲೆ ವಿದ್ಯಾರ್ಥಿ ಪೋಷಕರ ಮೇಲೆ ಪ್ರತಿ ವರ್ಷ ಡೋನೇಷನ್ ರೂಪದಲ್ಲಿ ಸಾಕಷ್ಟು ಸೂಲಿಗೆ ಮಾಡುತ್ತಿದ್ದರೂ ಹೊಸನಗರದ ಶಿಕ್ಷಣಾಧಿಕಾರಿಗಳಗಲಿ ಅಥವಾ ಶಿಕ್ಷಣ ಇಲಾಖೆಯಾಗಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಯಾರಾದರೂ ದೂರು ನೀಡಿದರೆ ಖಾಸಗಿ ಶಿಕ್ಷಣ ಸಂಸ್ಥೆಗೆ ಭೇಟಿ ನೀಡುವುದು ಅವರ ಹೇಳುವ ರೀತಿಯಲ್ಲಿ ವರದಿ ತಯಾರಿಸಿ ಕಳುಹಿಸುವ ಕೆಲಸ ಮಾಡುತ್ತಿದೆ ಎಂದು ವಿದ್ಯಾರ್ಥಿ ಪೋಷಕರ ವರ್ಗ ದೂರುತ್ತಿದ್ದು ಹೊಸನಗರ ಶಿಕ್ಷಣ ಇಲಾಖೆ ಖಾಸಗಿ ಶಿಕ್ಷಣ ಸಂಸ್ಥೆಯ ಪಾಲಾಗಿದೆ ಎನ್ನುತ್ತಿದ್ದಾರೆ.
ಮುಂದಾದರೂ ಕ್ರಮ ಕೈಗೊಳ್ಳುವರೇ?
2022-23ನೇ ಸಾಲಿನ ಶೈಕ್ಷಣಿಕ ವರ್ಷ ಪೂರ್ಣಗೊಂಡಿದೆ ಇನ್ನೂ ಮೇ, ಜೂನ್ ತಿಂಗಳಲ್ಲಿ ಹೊಸ ಶೈಕ್ಷಣಿಕ ವರ್ಷ ಆರಂಭವಾಗಲಿದೆ ಈ ವರ್ಷವಾದರೂ ಹೊಸನಗರ ಶಿಕ್ಷಣ ಇಲಾಖೆ ಆರಂಭದಲ್ಲಿಯೇ ಖಾಸಗಿ ಶಿಕ್ಷಣ ಇಲಾಖೆಯ ಡೊನೇಶನ್‌ಗೆ ಕಡಿವಾಣ ಹಾಕಲಿದೆಯೇ ಕಾದು ನೋಡಬೇಕಾಗಿದೆ.
ವಿದ್ಯಾರ್ಥಿಗಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿ ದುಬಾರಿ ಡೋನೇಶನ್‌ಗೆ ಮುಕ್ತಿಗೊಳಿಸಿ
ಸರ್ಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕ ವರ್ಗವಿದೆ ವಿದ್ಯಾರ್ಥಿಗಳಿಗೆ ಓದಿನ ಜೊತೆಗೆ ಅನ್ನದಾಸೋಹ ಕ್ಷೀರಭಾಗ್ಯ ಪಠ್ಯಪುಸ್ತಕಗಳ ಜೊತೆಗ ಬಟ್ಟೆಯನ್ನು ನೀಡುವ ಸೌಲಭ್ಯವಿದೆ ಆದರೆ ವಿದ್ಯಾರ್ಥಿಗಳ ಪೋಷಕ ವರ್ಗ ತಮ್ಮ ಪ್ರತಿಷ್ಟೆಗಾಗಿ ಖಾಸಗಿ ಶಾಲೆಗಳ ಮೊರೆ ಹೋಗುತ್ತಿದ್ದು ಇದರಿಂದ ಕುಟುಂಬದ ಜೀವನ ಕಷ್ಟಕರವಾಗಿ ಮಾಡಿಕೊಳ್ಳದೆ ಎಲ್ಲರೂ ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಓದಿಸುವ ಕಾರ್ಯಕ್ಕೆ ಮುಂದಾದರೇ ಖಾಸಗಿ ಶಾಲೆಯ ಪರಿಸ್ಥಿತಿ ಯಾವ ಮಟ್ಟಕ್ಕೆ ಬರುತ್ತದೆ ಎಂದು ಆಲೋಚಿಸಿ ಸಕಾರಿ ಶಾಲೆಗಳಿಗೆ ಮಕ್ಕಳನ್ನು ಕಳಿಸಿ.