ಹೊಸನಗರದ ವ್ಯಕ್ತಿ ಕಾಣೆ ; ಮಾಹಿತಿ ನೀಡಲು ಕೋರಿಕೆ

0 0

ಹೊಸನಗರ : ತಾಲೂಕಿನ ಹರಿದ್ರಾವತಿಯ ಹೀಲಗೋಡು ಗ್ರಾಮ ವಾಸಿ ಹುಚ್ಚಪ್ಪ ಎಂಬ 60 ವರ್ಷದ ವ್ಯಕ್ತಿ ಜೂನ್ 21 ರಂದು ಬೆಳಗ್ಗೆ ಕೂಲಿ ಕೆಲಸಕ್ಕೆಂದು ಹೇಳಿ ಮನೆಯಲ್ಲಿಟ್ಟಿದ್ದ ಅಷ್ಟು ಹಣವನ್ನು ತೆಗೆದುಕೊಂಡು ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ.

ಈ ವ್ಯಕ್ತಿಯ ಚಹರೆ 5.4 ಅಡಿ ಎತ್ತರ, ಗೋಧಿ ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಗುಲಾಬಿ ಬಣ್ಣದ ಗೆರೆಯುಳ್ಳ ಶರ್ಟ್ ಮತ್ತು ನೀಲಿ ಬಣ್ಣದ ಪಂಚೆ ಧರಿಸಿರುತ್ತಾನೆ.

ಈತನ ಸುಳಿವು ಯಾರಿಗಾದರೂ ಸಿಕ್ಕಲ್ಲಿ ಹೊಸನಗರ ಪೊಲೀಸ್ ಠಾಣೆ ಶಿವಮೊಗ್ಗ, ದೂರವಾಣಿ ಸಂಖ್ಯೆ : ಶಿವಮೊಗ್ಗ ಜಿಲ್ಲೆ ಎಸ್‍ಪಿ 08182-261400, ತೀರ್ಥಹಳ್ಳಿ ಡಿವೈಎಸ್‍ಪಿ 08181-220388, ಹೊಸನಗರ ಸಿಪಿಐ 08185-221544, ಹೊಸನಗರ ಪಿಎಸ್‍ಐ 08185-221244 ನ್ನು ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

Leave A Reply

Your email address will not be published.

error: Content is protected !!