ಹೊಸನಗರ ; ಶಾಸಕರ ಮಾದರಿ ಶಾಲೆಯ ಮೂಲ ಸೌಕರ್ಯ ಅಭಿವೃದ್ಧಿಗೆ ಸಚಿವರು ಗಮನ ಹರಿಸಲಿ – ಅಶ್ವಿನಿಕುಮಾರ್

0 0

ಹೊಸನಗರ : ಮೂಲಸೌಕರ್ಯ ಕೊರತೆ, ಶಿಕ್ಷಕರ ಕೊರತೆಯ ನಡುವೆಯೂ ಪಟ್ಟಣದ ಶಾಸಕರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಉತ್ತಮ ಸಾಧನೆ ಮಾಡುತ್ತಿದೆ. ಪೋಷಕರ ಹಾಗೂ ಶಾಲಾ ಸಮಿತಿಯ ಸಂಘಟನಾತ್ಮಕ ಹೋರಾಟದಿಂದ ಇದು ಸಾಧ್ಯವಾಗಿದೆ. ಸರಕಾರ ಶಾಲೆಗೆ ಅಗತ್ಯಅನುದಾನ ನೀಡಿದಲ್ಲಿ ಶಾಲೆ ಇನ್ನಷ್ಟು ಉತ್ತಮವಾಗಿ ಬೆಳೆಯಬಲ್ಲದು ಎಂದು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಅಶ್ವಿನಿಕುಮಾರ ಹೇಳಿದ್ದಾರೆ.


ಅವರು ಶಾಲೆಯ ಆವರಣದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದರು. ಹತ್ತು ವರ್ಷಗಳ ಹಿಂದೆ ಈ ಶಾಲೆಯಲ್ಲಿ ಕೇವಲ 130 ವಿದ್ಯಾರ್ಥಿಗಳಿದ್ದರು. ಈಗ ಎಲ್‌ಕೆಜಿ, ಯುಕೆಯಲ್ಲಿ 50 ಹಾಗೂ ಒಂದರಿಂದ ಏಳನೇ ತರಗತಿ ವರೆಗೆ 386 ಮಕ್ಕಳು ಓದುತ್ತಿದ್ದಾರೆ. ಪ್ರತಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಶಾಲೆಯ ವಿದ್ಯಾಭ್ಯಾಸದ ಗುಣಮಟ್ಟ ನೋಡಿ ಜನಸಾಮಾನ್ಯರು ತಮ್ಮ ಮಕ್ಕಳನ್ನು ದಾಖಲಿಸುತ್ತಿದ್ದಾರೆ. ಶಾಲೆಯ ಈ ಸಾಧನೆಗೆ ಪೋಷಕರು, ದಾನಿಗಳು ಹಾಗೂ ಶಾಲಾಸಮಿತಿಯ ನಿರಂತರ ಸ್ಪಂದನೆಯಿಂದ ಸಾಧ್ಯವಾಗಿದೆ ಎಂದು ಅವರು ಹೇಳಿದರು.


ಶಾಲೆಯಲ್ಲಿ ಒಟ್ಟು 8 ಕೊಠಡಿಗಳು ಕೊರತೆಯಿದೆ. ಮಕ್ಕಳಿಗೆ ಕೂಳಿತುಕೊಳ್ಳಲಲು ಡೆಸ್ಕ್ ಇಲ್ಲದೇ ನೆಲದ ಮೇಲೆ ಕೂರವಂಥಾಗಿದೆ. 50 ವಿದ್ಯಾರ್ಥಿಗಳು ಬಳಸಬಹುದಾದ ಶೌಚಾಲಯವನ್ನು 400 ವಿದ್ಯಾರ್ಥಿಗಳು ಬಸಳಸುವಂತಾಗಿದೆ. ಬಿಸಿಯೂಟ ತಯಾರಿಕೆ ಸಹಾ ಇಕ್ಕಟ್ಟಿನ ಜಾಗದಲ್ಲಿ ನಿರ್ವಹಸಿಬೇಕಾಗಿದೆ. ವರ್ಷದಿಂದ ವರ್ಷಕ್ಕೆ ಶಾಲೆ ಪ್ರಗತಿ ಸಾಧಿಸಿದರೆ ಸರಕಾರ ಹಾಗೂ ಇಲಾಖೆ ಅಧಿಕಾರಿಗಳು ಸಹಾ ಅದಕ್ಕೆ ತಕ್ಕಂತೆ ಸೌಲಭ್ಯಗಳನ್ನು ಒದಗಿಸಬೇಕು. ಇನ್ನೂ ನಮ್ಮ ಶಾಲೆಯ ಐವತ್ತಕ್ಕೂ ಹೆಚ್ಚು ಮಕ್ಕಳಿಗೆ ಪಠ್ಯ ಪುಸ್ತಕವನ್ನೇ ಇಲಾಖೆ ಒದಗಿಸಿಲ್ಲ. ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಶಾಲೆಯಕೊರತೆಕುರಿತು ಮನವರಿಕೆ ಮಾಡಲಾಗಿದೆ. ಆದರೆ ಶಾಲೆಯ ಪ್ರಗತಿಗೆ ಅರ‍್ಯಾರೂ ತಲೆಕಡಿಸಿಳ್ಳುತ್ತಿಲ್ಲ ಎಂದು ಆರೋಪಿಸಿದರು.


ಶಾಲಾ ಸಮಿತಿ, ಪೋಷಕರು ಹಾಗೂ ದಾನಿಗಳ ನಿರಂತರ ಕಾಳಜಿಯಿಂದ ಶಾಲೆಯಲ್ಲಿ ನಿರೀಕ್ಷೆಗೂ ಮೀರಿ ಮಕ್ಕಳ ದಾಖಲಾತಿ ಆಗುತ್ತಿದ್ದು ಸೀಮಿತ ಸೌಲಭ್ಯಗಳ ನಡುವೆಯೂ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದಿದೆ. ಎರಡು ಶಾಲಾ ವಾಹನಗಳು ಕಾರ‍್ಯನಿರ್ವಹಿಸುತ್ತಿದ್ದು ಇದರ ಸಂಪೂರ್ಣ ಖರ್ಚು ವೆಚ್ಚವನ್ನು ಪೋಷಕರೇ ಭರಿಸುತ್ತಿದ್ದಾರೆ. ಶಾಸಕರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ.ಆದರೆಇದಕ್ಕೆ ಪೂರಕವಾಗಿ ಸ್ಪಂದಿಸಬೇಕಾದ ಶಿಕ್ಷಣ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಿದೆ ಎಂದು ದೂರಿದರು.


ಈ ಹಿಂದಿನ ಸರಕಾರದ ಅವಧಿಯಲ್ಲಿಯೂ ಗಮನ ಸೆಳೆದಿದ್ದೇವೆ. ಏನೂ ಉಪಯೋಗ ಆಗಿಲ್ಲ. ಈಗ ಮತ್ತೊಮ್ಮೆ 1 ಕೋಟಿ ರೂ. ಅನುದಾನ ನೀಡುವಂತೆ ಸರಕಾರಕ್ಕೆ ಮನವಿ ಸಲ್ಲಿಸಲಿದ್ದೇವೆ ಎಂದು ಅವರು ಹೇಳಿದರು.


ಗೋಷ್ಠಿಯಲ್ಲಿ ಶಾಲಾ ಸಮಿತಿ ಸದಸ್ಯರಾದ ಪ್ರದೀಪ್, ನಾಸೀರ್, ರಮಲತ್, ಶೈಲಜಾ ಸತ್ಯ ನಾರಾಯಣ, ರಾಘವೇಂದ್ರ, ಪವಿತ್ರಾ ಮತ್ತಿತರರು ಇದ್ದರು.

Leave A Reply

Your email address will not be published.

error: Content is protected !!