ಹೊಸನಗರ-ಸಾಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರು ? ಕಾರ್ಯಕರ್ತರಲ್ಲಿ ಗೊಂದಲ ; ಚಿಕ್ಕನಕೊಪ್ಪ ಶ್ರೀಧರ್

0 0


ಹೊಸನಗರ: ಸುಮಾರು 15 ದಿನಗಳಿಂದ ಹೊಸನಗರ-ಸಾಗರ ಕ್ಷೇತ್ರದ ವಿಧಾನಸಭೆಯ ಬಿಜೆಪಿ ಚುನಾವಣೆಯ ಅಭ್ಯರ್ಥಿ ಯಾರು? ಎಂಬುವುದರ ಬಗ್ಗೆ ಬಿಜೆಪಿ ಕಾರ್ಯಕರ್ತರು ಗೊಂದಲದಲ್ಲಿದ್ದಾರೆ ಎಂದು ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿಯ ಸದಸ್ಯ ಚಿಕ್ಕನಕೊಪ್ಪ ಶ್ರೀಧರ್‌ರವರು ವರಿಷ್ಠರ ಬಳಿ ಕೇಳಿಕೊಂಡಿದ್ದು ತಕ್ಷಣ ಅಭ್ಯರ್ಥಿಯನ್ನು ಘೋಷಿಸಬೇಕೆಂದು ಒತ್ತಾಯಿಸಿದ್ದಾರೆ‌.


ಅವರು ಸುದ್ಧಿಗಾರರೊಂದಿಗೆ ಮಾತನಾಡಿ, ಹೊಸನಗರ, ಸಾಗರ ಕ್ಷೇತ್ರದಲ್ಲಿ ಬಿಜೆಪಿಯಿಂದ ಶಾಸಕರಾದ ಹರತಾಳು ಹಾಲಪ್ಪನವರೇ ಬಿಜೆಪಿ ಅಭ್ಯರ್ಥಿ ಎಂದು ಅವರ ಅಭಿಮಾನಿಗಳು ಕೆಲವು ಬಿಜೆಪಿ ಕಾರ್ಯಕರ್ತರು ಪ್ರಚಾರ ಪಡಿಸುತ್ತಿದ್ದರೂ ಕೆಲವು ಕಾರ್ಯಕರ್ತರು ಕೆ.ಜಿ ಶಿವಪ್ಪನವರ ಪುತ್ರ ಪ್ರಶಾಂತ್ ಬಿಜೆಪಿ ಅಭ್ಯರ್ಥಿ ಎಂದು ಪ್ರಚಾರ ಮಾಡುವುದರ ಜೊತೆಗೆ ಇನ್ನೂ ಕೆಲವು ಬಿಜೆಪಿ ಕಾರ್ಯಕರ್ತರು ಪ್ರಸನ್ನ ಕರೆಕೈಯವರು ಬಿಜೆಪಿ ಅಭ್ಯರ್ಥಿ ಎಂದು ಪ್ರಚಾರ ಆರಂಭಿಸಿದ್ದಾರೆ ಇದರಿಂದ ಬಿಜೆಪಿ ಕಾರ್ಯಕರ್ತರಿಗೆ ಮುಜುಗರ ಉಂಟಾಗುತ್ತಿದೆ.


ಮಲ್ಲಿಕಾರ್ಜುನ ಹಕ್ರೆ ಬಿಜೆಪಿಗೆ?

ಸಾಗರ ಹೊಸನಗರ ಕ್ಷೇತ್ರದ ಕೆಲವು ಹಿರಿಯ ಬಿಜೆಪಿ ಮುಖಂಡರು ಕಾಂಗ್ರೆಸ್ ಪಕ್ಷದಿಂದ ಬಂಡಾಯ ಹೊಂದಿರುವ ಮಲ್ಲಿಕಾರ್ಜುನ ಹಕ್ರೆಯವರು ಬಿಜೆಪಿಗೆ ಬರುತ್ತಾರಂತೆ ಅವರನ್ನು ವರಿಷ್ಠರು ಸಾಗರ-ಹೊಸನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂದು ಘೋಷಿಸುತ್ತಾರಂತೆ ಎಂದು ಸುದ್ದಿ ಮಾಡುತ್ತಿದ್ದಾರೆ ಇದರಿಂದ ನಮ್ಮ ಕ್ಷೇತ್ರದ ಜನರಿಗೆ ತಲೆ ನೋವಾಗಿ ಪರಿಣಮಿಸಿದೆ. ಯಾರೆ ಬಿಜೆಪಿ ಅಭ್ಯರ್ಥಿಯಾಗಲಿ ಬಿಜೆಪಿ ಪಕ್ಷ ಹೊಸನಗರ-ಸಾಗರ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಿಸಬೇಕು ಚುನಾವಣೆಯ ಪ್ರಚಾರಕ್ಕೆ ಅನುವು ಮಾಡಿಕೊಟ್ಟರೆ ಒಳ್ಳೆಯದು. ತಡವಾದರೆ ನಮ್ಮ ಕ್ಷೇತ್ರ ಬಿಜೆಪಿ ತೆಕ್ಕೆಯಿಂದ ಕೈ ತಪ್ಪುವ ಸಂಭವ ಹೆಚ್ಚು ಆದ್ದರಿಂದ ತಕ್ಷಣ ಬಿಜೆಪಿ ಅಭ್ಯರ್ಥಿಯನ್ನು ಘೋಷಿಸಲಿ ಎಂದು ರಾಜ್ಯ ಬಿಜೆಪಿ ಘಟಕಕ್ಕೆ ಒತ್ತಾಯಿಸಿದ್ದಾರೆ.

Leave A Reply

Your email address will not be published.

error: Content is protected !!