ಹೊಸನಗರ ; ಸಾರ್ವಜನಿಕರ ವಿರೋಧದ ನಡುವೆಯೂ ಅವೈಜ್ಞಾನಿಕವಾಗಿ ನಡೆಯುತ್ತಿರುವ ಆಟೋ ಸ್ಟ್ಯಾಂಡ್

0 2

ಹೊಸನಗರ : ಪಟ್ಟಣದ ಬಸ್ ನಿಲ್ದಾಣದ ಪಾರ್ಶ್ವದಲ್ಲಿ ಚೌಡಮ್ಮ ರಸ್ತೆಗೆ ಹೊಂದಿಕೊಂಡಂತೆ ಇರುವ ಚೌಡಮ್ಮ ಆಟೋ ನಿಲ್ದಾಣಕ್ಕಾಗಿ ಪಟ್ಟಣ ಪಂಚಾಯಿತಿಯವರು ನಡೆಸುತ್ತಿರುವ ಆಟೋ ಸ್ಟ್ಯಾಂಡ್ ಕಾಮಗಾರಿಗೆ ಪಟ್ಟಣದ ನಾಗರಿಕರು ತೀವ್ರ ವಿರೋಧಿಸಿದ್ದರು ಕಾಮಗಾರಿ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚೌಡಮ್ಮ ರಸ್ತೆಯಿಂದ ಬಸ್ ನಿಲ್ದಾಣಕ್ಕೆ ಹೋಗಲು ಈ ಆಟೋ ನಿಲ್ದಾಣ ಅವಜ್ಞಾನಿಕವಾದ ನಿರ್ಮಿಸುತ್ತಿರುವ ಕಾರಣ ಸಾರ್ವಜನಿಕರಿಗೆ ಕಂಟಕ ಪ್ರಾಯವಾಗಿದ್ದು ನಿಲ್ದಾಣದ ಒಂದು ಪಾಶ್ವದಲ್ಲಿ ಬಸ್ ನಿಲ್ದಾಣದ ಹೋಟೆಲ್, ಸಾರ್ವಜನಿಕ ಶೌಚಾಲಯಗಳಿಗೆ ಹಾಗೂ ಸಾರ್ವಜನಿಕರಿಗೆ ಉಪಯೋಗಿಸುವ ನೀರಿನ ಟ್ಯಾಂಕ್ ಚೇಂಬರ್ ಇದ್ದು ಅಲ್ಲಿಗೆ ನೀರಿನ ಟ್ಯಾಂಕರ್ ಹೋಗಲು ಸ್ಥಳಾವಕಾಶದ ಕೊರತೆ ಆಗುತ್ತದೆ.

ಈ ಜಾಗದಲ್ಲಿ ಆಟೋ ನಿಲ್ದಾಣ ಸ್ಥಾಪಿಸಿದಲ್ಲಿ ಚೌಡಮ್ಮ ರಸ್ತೆಯ ವ್ಯಾಪಾರಸ್ಥರಿಗೂ ಬಸ್‌ನಲ್ಲಿ ಹೋಗಿ ಬರುವ ಪ್ರಯಾಣಿಕರಿಗೂ ಕಂಟಕ ಪ್ರಾಯವಾಗಿರುವುದರಿಂದ ಆಟೋ ನಿಲ್ದಾಣದ ಸ್ಥಳ ಬದಲಾಯಿಸುವಂತೆ ಸಾರ್ವಜನಿಕರಾಗ್ರಹಿಸಿದ್ದಾರೆ.

ಶಾಸಕರು ಈ ನಿಟ್ಟಿನಲ್ಲಿ ಸ್ಥಳ ಪರಿಶೀಲಿಸಿ ಆಟೋ ನಿಲ್ದಾಣಕ್ಕೆ ಬದಲಿ ಜಾಗ ಕಲ್ಪಿಸಿಕೊಡುವಂತೆ ಸಾರ್ವಜನಿಕರ ಆಗ್ರಹಿಸಿದ್ದಾರೆ

Leave A Reply

Your email address will not be published.

error: Content is protected !!