ತಪ್ಪು ಉತ್ತರ ನೀಡುವ ವಿದ್ಯಾರ್ಥಿಗಳಿಂದಲೇ ಶಿಕ್ಷಕನಿಗೆ ಛಡಿ ಏಟು…! ಮಕ್ಕಳ ಉತ್ತಮ ಕಲಿಕೆಗೆ ಸರ್ಕಾರಿ ಶಾಲೆ ಶಿಕ್ಷಕನಿಂದ ವಿಭಿನ್ನ ಮಾರ್ಗ

ರಿಪ್ಪನ್‌ಪೇಟೆ : ಶಿಕ್ಷೆಯೇ ಶಿಕ್ಷಣದ ಮಾನದಂಡ ಎಂಬಂತೆ ವರ್ತಿಸುವ ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಮರುಳಾಗಿ, ದೂರದಿಂದಲೇ ಸರ್ಕಾರಿ ಶಾಲೆಗಳ ಕಾರ್ಯವೈಖರಿಯ ಬಗ್ಗೆ ಅಸಡ್ಡೆ ತೋರುವವರೆ ಹೆಚ್ಚು , ಇದಕ್ಕೆ ಅಪವಾದ ಎಂಬಂತೆ ಹೊಸನಗರ ತಾಲೂಕಿನ ಅಮೃತ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಗ್ರಾಮ ಹಾಲಂದೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಾಕ್ಷಿಕರಿಸಿದೆ.

ಇಲ್ಲಿನ ಶಿಕ್ಷಕ ಗೋಪಾಲ್ ಹೆಚ್. ಎಸ್. ಅವರ ವಿನೂತನ ಪ್ರಯೋಗ ಶಾಲಾ ಮಕ್ಕಳ ಮೇಲೆ ಗಾಢ ಪರಿಣಾಮ ಬೀರಿದೆ. ತಪ್ಪು ಉತ್ತರ ಕೊಡುವ ವಿದ್ಯಾರ್ಥಿಗಳಿಂದಲೇ ಶಿಕ್ಷೆ ಪಡೆದು, ಅವರನ್ನು ಜಾಣರನ್ನಾಗಿಸಿದ ಪರಿ ಇದು.

ಪುಟಾಣಿ ಮಕ್ಕಳ ಕಲಿಕೆಗೆ ಪ್ರೇರಣೆಯಾಗುವಂತೆ ಪಠ್ಯವನ್ನು ವಿವಿಧ ರೀತಿಯಲ್ಲಿ ಅರ್ಥ ಮಾಡಿಸಿ ಹೇಳಿ ಕೊಡುವ ಇವರು, ಬಾಲ್ಯದಲ್ಲಿ ಮಕ್ಕಳಿಗೆ ಸಂಸ್ಕೃತಿ ಹಾಗೂ ಸನ್ನಡತೆಯ ಶಿಕ್ಷಣ ಧಾರೆ
ಎರೆದಿದ್ದಾರೆ.

ಉತ್ತಮ ಪ್ರತಿಫಲ ಸಿಗಲೇಬೇಕಾದರೆ, ಹೊಸ ಪ್ರಯೋಗಕ್ಕೆ ಅಣಿಯಾಗಬೇಕು. ಆ ನಿಟ್ಟಿನಲ್ಲಿ ನಾನು ತಪ್ಪು ಉತ್ತರ ನೀಡಿದ ವಿದ್ಯಾರ್ಥಿಯಿಂದಲೇ ಪೆಟ್ಟು ತಿನ್ನುವ ಪರಿಪಾಠ ಬೆಳೆಸಿಕೊಂಡೆ ಎನ್ನುತ್ತಾರೆ ಶಿಕ್ಷಕ ಗೋಪಾಲ್.

ನನ್ನನ್ನು ದಂಡಿಸಬೇಕೆ…? ಎನ್ನುವ ಅಳುಕಿನಿಂದ ಅವರು ಕ್ರಿಯಾಶೀಲರಾಗಿ ಕಲಿಯಲ್ಲಿ ಹೆಚ್ಚು ಆಸಕ್ತಿ ತೋರಿದರು. ಈ ಪ್ರಯೋಗ ಮಕ್ಕಳ ನಡವಳಿಕೆಯಲ್ಲಿ ಬಹಳಷ್ಟು ಬದಲಾವಣೆ ತಂದಿದೆ ಎಂದು ಶಿಕ್ಷಕ ಗೋಪಾಲ್ ಹೇಳುತ್ತಾರೆ.

ಈಗಾಗಲೇ ವಯೋ ನಿವೃತ್ತಿಯ ಅಂಚಿನಲ್ಲಿರುವ ಇವರು ಇದೇ ಜೂನ್ ಅಂತ್ಯದಲ್ಲಿ ತಮ್ಮ ಕರ್ತವ್ಯದಿಂದ ಬಿಡುಗಡೆ ಹೊಂದಲಿದ್ದಾರೆ. ಈಗ ಕಲಿಯುತ್ತಿರುವ ಮಕ್ಕಳ ತಂದೆ-ತಾಯಿಯರಿಗೂ ಇವರೇ ಅಕ್ಷರ ಕಲಿಸಿದ ಗುರು. ಆ ಒಂದು ಅಭಿಮಾನವೇ ಮುಚ್ಚುವ ಹಂತಕ್ಕೆ ತಲುಪಿದ ಸರ್ಕಾರಿ ಶಾಲೆಯೊಂದು ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಸಹಕಾರಿಯಾಗಿದೆ.

ಇದೇ ಶಾಲೆಯಲ್ಲಿ ಕಲಿತ ಹಳೆ ವಿದ್ಯಾರ್ಥಿನಿ ಹೊಳೆಕೇವಿ ಇಂಪನಾ ಅಮೃತ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ತನ್ನ ಬಿಡುವಿನ ಸಮಯದಲ್ಲಿ ಇಲ್ಲಿನ ಮಕ್ಕಳ ಕಲಿಕೆಗೆ ಸಹಕರಿಸುತ್ತಿದ್ದಾರೆ.

ದೇಶದ ಭವಿಷ್ಯದ ರೂಪಿಸುವ ನಿಟ್ಟಿನಲ್ಲಿ ಎಲೆಮರೆಯ ಕಾಯಿಯಂತೆ ಕಾರ್ಯ ನಿರ್ವಹಿಸುವ ಇಂತಹ ಮಾದರಿ ಶಿಕ್ಷಕರನ್ನು ಸರ್ಕಾರ ಅಥವಾ ಸಂಘ-ಸಂಸ್ಥೆಗಳು ಗುರುತಿಸಿ ಗೌರವಿಸಿದಲ್ಲಿ ಅವರ ಸೇವಾಕಾರ್ಯಕ್ಕೆ ಸಾರ್ಥಕತೆ ಸಿಗಲಿದೆ.

ಇಂದು 1-5ನೇ ತರಗತಿಯವರೆಗೆ ಕೇವಲ ಎಂಟು ಮಕ್ಕಳನ್ನು ಹೊಂದಿರುವ ಈ ಸರ್ಕಾರಿ ಶಾಲೆ, ಊರಿನ ಹೆಮ್ಮೆಯ ಆಸ್ತಿ. ಊರಿನ ಹಿರಿಯರ ಪರಿಶ್ರಮದ ಫಲ, ನನ್ನ ಸೇವಾ ಅವಧಿ ಪೂರ್ಣಗೊಳಿಸಿದೆ. ಇಲಾಖೆ ಹಾಗೂ ಸ್ಥಳೀಯರ ಸಹಕಾರಕ್ಕೆ ನನ್ನ ಧನ್ಯವಾದ.
– ಗೋಪಾಲ್ ಹೆಚ್. ಎಸ್, ಶಿಕ್ಷಕ.

ಅಮೃತ ಮಹೋತ್ಸವದ ಅಂಚಿನಲ್ಲಿರುವ ಈ ಶಾಲೆ, ಊರಿನ ಅನೇಕರಿಗೆ ಪ್ರಾಥಮಿಕ ಜ್ಞಾನ ಕಲಿಸಿದೆ. ಎಲ್ಲಾ ಪೋಷಕರು ತಮ್ಮ ಮಕ್ಕಳನ್ನು ಇಲ್ಲಿಯೇ ಕಲಿಯಲು ಕಳುಹಿಸುವ ನಿರ್ಧಾರ ಮಾಡಬೇಕು.
– ಪ್ರೇಮ, ಹೊಳೆಕೇವಿ ಅಂಗನವಾಡಿ ಕಾರ್ಯಕರ್ತೆ

Malnad Times

Recent Posts

ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೇ. 75.02 ರಷ್ಟು ಮತದಾನ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಶುಕ್ರವಾರ ನಡೆದ ಲೋಕಸಭಾ ಚುನಾವಣೆಯಲ್ಲಿ ಶೇ.75.02 ರಷ್ಟು ಮತದಾನ ನಡೆದಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ…

4 hours ago

ಏ.30 ರಂದು ಶಿವಮೊಗ್ಗಕ್ಕೆ ಬರಲಿದ್ದಾರೆ ನಡ್ಡಾ ; ಬಿವೈಆರ್

ಶಿವಮೊಗ್ಗ : ಏ.30ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಶಿವಮೊಗ್ಗ ಆಗಮಿಸಲಿದ್ದು ರಾಷ್ಟ್ರೀಯತೆಯ ಬಗ್ಗೆ ಕಾರ್ಯಕರ್ತರಲ್ಲಿ ಹುಮ್ಮಸ್ಸು…

14 hours ago

10 ಜನ ಈಶ್ವರಪ್ಪನಂತವರು ಸ್ಪರ್ಧಿಸಿದರು ಬಿ.ವೈ.ರಾಘವೇಂದ್ರ ಗೆಲುವು ತಡೆಯಲು ಸಾಧ್ಯವಿಲ್ಲ

ರಿಪ್ಪನ್‌ಪೇಟೆ: ಮೇ 7 ರಂದು ನಡೆಯುವ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ 10 ಜನ ಈಶ್ವರಪ್ಪನಂತವರು ಸ್ಪರ್ಧಿಸಿದರೂ ಬಿಜೆಪಿ ಜೆಡಿಎಸ್ ಬೆಂಬಲಿತ…

20 hours ago

ಮೋದಿ ಹೆಸರಿನಲ್ಲಿ ರಶೀದಿ ಪಡೆದು ಅಭಿಮಾನಿಯಿಂದ ಸಹಸ್ರನಾಮ ಅರ್ಚನೆ

ಮೋದಿ ಹೆಸರಿನಲ್ಲಿ ರಶೀದಿ ಪಡೆದು ಅಭಿಮಾನಿಯಿಂದ ಸಹಸ್ರನಾಮ ಅರ್ಚನೆ..... ಶೃಂಗೇರಿ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಫಿನಾಡು ವಿಶೇಷತೆಗಳಿಗೆ…

1 day ago

Arecanut Today Price | ಏಪ್ರಿಲ್ 26ರ ಅಡಿಕೆ ರೇಟ್

ಹೊಸನಗರ : ಏ. 26 ಶುಕ್ರವಾರ ನಡೆದ ಹೊಸನಗರ ಮಾರುಕಟ್ಟೆಯ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ.

2 days ago

ಮೇ 02 ರಂದು ಶಿವಮೊಗ್ಗಕ್ಕೆ ರಾಹುಲ್ ಗಾಂಧಿ ಆಗಮನ

ಶಿವಮೊಗ್ಗ : ಮೇ 2ರಂದು ಕಾಂಗ್ರೆಸ್ ನಾಯಕ ರಾಹುಲ್‍ಗಾಂಧಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಗೀತಾಶಿವರಾಜ್‍ಕುಮಾರ್ ಬಹಿರಂಗ ಪ್ರಚಾರ ಮಾಡಲಿದ್ದಾರೆ ಎಂದು…

2 days ago