ಧಾರ್ಮಿಕ ಆಚರಣೆಗಳಿಂದ ಭಾಂದವ್ಯ ವೃದ್ಧಿ ; ಮಳಲಿ ಶ್ರೀಗಳು

ರಿಪ್ಪನ್‌ಪೇಟೆ: ಇಂದಿನ ಯುವಜನಾಂಗ ಹಬ್ಬ ಹರಿದಿನಗಳ ಆಚರಣೆಯಿಂದ ದೂರವಾಗುತ್ತಿದ್ದಾರೆ. ಹಿಂದಿನ ತಲೆಮಾರಿನವರು ಈ ಸಂಬಂಧವನ್ನು ಬೆಸೆಯುವ ಮೂಲಕ ಸಂಬಂಧಿಕರಲ್ಲಿ ಭಾಂದವ್ಯವನ್ನು ಬೆಳೆಸಲು ಕೂಳೆ ಪಂಚಮಿ ಹಬ್ಬದಂತಹ ಹಲವು ಹಬ್ಬದ ಆಚರಣೆಗಳಿಂದಾಗಿ ನಮ್ಮ ಸಂಸ್ಕೃತಿ ಸಂಸ್ಕಾರ ಉಳಿಸುವಲ್ಲಿ ಸಾಧ್ಯವಾಗಿದೆ ಎಂದು ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಜಿ ಹೇಳಿದರು.

ರಿಪ್ಪನ್‌ಪೇಟೆ ಸಮೀಪದ ಕುಕ್ಕಳಲೇ ಗ್ರಾಮದಲ್ಲಿ ಕೂಳೆ ಪಂಚಮಿಯ ಅಂಗವಾಗಿ ಆಯೋಜಿಸಲಾದ ವಿಶೇಷ ಕೂಳೆ ಪಂಚಮಿ ಹಬ್ಬದ ಶಿವಪೂಜಾನುಷ್ಟಾನ ಮತ್ತು ಧಾರ್ಮಿಕ ಧರ್ಮಸಭೆಯ ದಿವ್ಯಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿ, ಕೂಳೆಪಂಚಮಿ ಅಂದರೆ ರೈತರು ಬೆಳೆದ ಫಸಲು ಬೆಳೆದು ಕಟಾವು ಮಾಡಿದ ನಂತರದಲ್ಲಿ ಫಸಲ ಬುಡದಲ್ಲಿ ಬೆಳೆ ಪುನಃ ಚಿಗುರುತ್ತದೆ ಹಾಗೆ ಕುಟುಂಬದಲ್ಲಿ ವಂಶ ವೃದ್ಧಿಯಾಗುವುದೆಂಬ ನಂಬಿಕೆಯೇ ಈ ಕೂಳೆ ಪಂಚಮಿ ಆಚರಣೆ ಪ್ರತೀತಿಯಾಗಿದೆ. ಇಂದಿನ ಒತ್ತಡದ ಬದುಕಿನಿಂದಾಗಿ ಧಾರ್ಮಿಕ ಆಚರಣೆಯಂತಹ ಕಾರ್ಯದಲ್ಲಿ ತೊಡಗಿಕೊಳ್ಳುವುದು ಕಡಿಮೆಯಾಗುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿ, ಇಂದಿನ ಯುವಜನಾಂಗ ದುಡಿಮೆ ಕಾರ್ಯದಲ್ಲಿ ಮಗ್ನರಾಗಿದ್ದು ಇದರಿಂದಾಗಿ ಧಾರ್ಮಿಕ ಕಾರ್ಯದಿಂದ ದೂರವಾಗುತ್ತಿದ್ದಾರೆ. ದುಡಿಮೆಯೊಂದಿಗೆ ಧಾರ್ಮಿಕ ಆಚರಣೆಯಲ್ಲಿ ಅಲ್ಪ ಸಮಯವನ್ನು ನಿಗದಿಪಡಿಸಿಕೊಂಡು ಭಾಗವಹಿಸುವಂತೆ ಕರೆ ನೀಡಿದರು.

ಈ ಕೂಳೆ ಪಂಚಮಿಯ ಧಾರ್ಮಿಕ ಕಾರ್ಯಕ್ರಮದಲ್ಲಿ 75 ವರ್ಷ ಮೇಲ್ಪಟ್ಟ ಹಿರಿಯರಾದ ನಿವೃತ್ತ ಶಿಕ್ಷಕ ತಾತೇಶ್ವರಪ್ಪಗೌಡ, ಜಿ.ಎಂ.ದುಂಡರಾಜ್‌ಗೌಡ, ಡಿ.ಎಸ್.ಸುಶೀಲಮ್ಮ ದೊಡ್ಡಿನಕೊಪ್ಪ, ಕುಬೇರಪ್ಪ ಯಾನೆ ಪುಟ್ಟಸ್ವಾಮಿಗೌಡ, ಷಣ್ಮುಖಪ್ಪಗೌಡ, ಹಾಲೇಶಪ್ಪಗೌಡ ಆಲವಳ್ಳಿ, ಪಾರ್ವತಮ್ಮ ಆಚಾಪುರ, ದೇವಿರಮ್ಮ ಆಲವಳ್ಳಿ, ಮುರಿಗಮ್ಮ ಚಂದ್ರಶೇಖರಪ್ಪಗೌಡ ಖೈರಾ, ಹೆರಳಮ್ಮ ರೇವಪ್ಪಗೌಡರು ಕೆರೆಹಿತ್ತಲು, ಓಂಕಾರಮ್ಮ ಚಂದ್ರಮುಖಿ, ಜಯಮ್ಮ ಹಾಲುಗುಡ್ಡೆ, ಸೋಮೇಶ್ವರಮ್ಮ ಹಾಗೂ ರಾಷ್ಟ್ರೀಯ ಮಟ್ಟಕ್ಕೆ ಕಬ್ಬಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ ನಮ್ಮೂರು ಮೊಮ್ಮಗಳಾದ ಚಿಕ್ಕವಯಸ್ಸಿನಲ್ಲಿ ಹಿರಿಯ ಸಾಧನೆ ಮಾಡಿದ ಕು.ಜ್ಞಾನ ಎನ್.ಮತ್ತು ಗ್ರೀಷ್ಮಾ ಸುಧಾ ರೇವಣಪ್ಪ, ಇವರನ್ನು ಗ್ರಾಮಸ್ಥರು ಶ್ರೀಗಳ ಸಮ್ಮುಖದಲ್ಲಿ ಸನ್ಮಾನಿಸಿ ಆಶೀರ್ವದಿಸಿದರು.

ಈ ಸಮಾರಂಭದಲ್ಲಿ ಶಿವಗಂಗೆ ಯೋಗೇಶ್ ಗೌಡ, ಆಚಾಪುರ ಶಾಂತಪ್ಪಗೌಡ, ಕೋಣೆಹೊಸೂರು ಕುಮಾರಗೌಡ, ಎನ್.ವರ್ತೇಶ್, ದಾನೇಶ ಕೆದಲುಗುಡ್ಡೆ, ಹೆಚ್.ಎಸ್.ರವಿ ಹಾಲುಗುಡ್ಡೆ, ನೇಮಾಕ್ಷಿಗೌಡ, ಹೆಚ್.ಎಸ್.ಕೀರ್ತಿಗೌಡ ಹಾರೋಹಿತ್ತಲು, ಸ್ವಾಮಿಗೌಡ ನೆವಟೂರು, ಕುಮಾರಗೌಡ ದೂನ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಹೆಚ್.ಎಸ್.ಕೀರ್ತಿಗೌಡ ಹಾರೋಹಿತ್ತಲು ಸ್ವಾಗತಿಸಿದರು. ಕೆ.ಬಿ.ದಾನೇಶ ನಿರೂಪಿಸಿದರು.


ನಿಧನ ವಾರ್ತೆ



ರಿಪ್ಪನ್‌ಪೇಟೆ: ಜಮೀದ್ದಾರ ಖೈರಾ ರಾಜಶೇಖರಪ್ಪಗೌಡ ತಮ್ಮ ಸ್ವಗೃಹದಲ್ಲಿ ಇಂದು ಮುಂಜಾನೆ ನಿಧನರಾದರು.
ಮೃತರಿಗೆ ಪತ್ನಿ ಸೇರಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಆಪ್ತ ಕಾರ್ಯದರ್ಶಿ ಕೆ.ಆರ್.ರಾಜು ಹಾಗೂ ನಾಲ್ವರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.

Malnad Times

Recent Posts

ಭಾರತ ದೇಶದ ಸೈನಿಕರಿಗೆ ಕುಟುಂಬ ಸೇವೆಗಿಂತ ದೇಶ ಸೇವೆಯೇ ಮುಖ್ಯ ; ಕೃಷ್ಣಪೂಜಾರಿ ದಂಪತಿ

ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…

1 hour ago

Rain Alert | ಮುಂದಿನ 48 ಗಂಟೆಗಳಲ್ಲಿ ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆ ಸಾಧ್ಯತೆ

ಬೆಂಗಳೂರು: ಮುಂದಿನ 48 ಗಂಟೆಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆಯಾಗುವ (Heavy Rain) ಸಾಧ್ಯತೆ…

2 hours ago

ಕಾಫಿನಾಡಿನಲ್ಲಿ ಆಲಿಕಲ್ಲು ಸಹಿತ ಗುಡುಗು, ಸಿಡಿಲಬ್ಬರದಿಂದ ಸುರಿದ ಭಾರಿ ಮಳೆ

ಚಿಕ್ಕಮಗಳೂರು: ಕಳೆದ ಹಲವು ದಿನಗಳಿಂದ ಬೇಸಿಗೆಯ ಬಿಸಿ ಗಾಳಿಯಿಂದ ಕಂಗೆಟ್ಟಿದ್ದ ಜನರಿಗೆ ಮಂಗಳವಾರ ಮಧ್ಯಾಹ್ನ ಆಲಿಕಲ್ಲು ಸಹಿತ ಗುಡುಗು, ಸಿಡಿಲಬ್ಬರದಿಂದ ಭಾರಿ…

3 hours ago

ಪತಿ ಸಾವಿನ ನೋವಿನಲ್ಲೂ ಮತದಾನ ಮಾಡಿದ ಮಹಿಳೆ !

ತೀರ್ಥಹಳ್ಳಿ : ಪತಿ ಸಾವಿನ ನೋವಿನಲ್ಲೂ ಮತಗಟ್ಟೆ ಕೇಂದ್ರಕ್ಕೆ ಆಗಮಿಸಿ ಮಹಿಳೆ ಮತದಾನ ಮಾಡಿರುವಂತಹ ಘಟನೆ ಗುಡ್ಡೇಕೊಪ್ಪ ಗ್ರಾಪಂ ವ್ಯಾಪ್ತಿಯ…

13 hours ago

ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆ | ಶೇ. 78.24 ಮತದಾನ

ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಇಂದು ನಡೆದ ಚುನಾವಣೆಯಲ್ಲಿ ಶೇ. 78.24 ರಷ್ಟು ಮತ ಚಲಾವಣೆಯಾಗಿದ್ದು, ಅಂಕಿ ಅಂಶಗಳ…

14 hours ago

Accident | ಗೂಡ್ಸ್ ವಾಹನ ಮತ್ತು ಬೈಕ್ ನಡುವೆ ಭೀಕರ ಅಪಘಾತ, ಸವಾರ ಸ್ಥಳದಲ್ಲೇ ಸಾವು !

ಶಿವಮೊಗ್ಗ : ಗೂಡ್ಸ್ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ…

16 hours ago