ಸಮಗ್ರ ಪೋಷಕಾಂಶಗಳ ನಿರ್ವಹಣೆ ಬಗ್ಗೆ ಕೃಷಿ ವಿವಿ ವಿದ್ಯಾರ್ಥಿಗಳಿಂದ ರೈತರೊಂದಿಗೆ ಚರ್ಚೆ

ರಿಪ್ಪನ್‌ಪೇಟೆ : ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ, ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ, ಇರುವಕ್ಕಿಯ ಅಂತಿಮ ವರ್ಷದ ಬಿ.ಎಸ್ಸಿ ಕೃಷಿಯ ‘ಗಂದಧ ಗುಡಿ’ ತಂಡದ ವಿದ್ಯಾರ್ಥಿಗಳು ಸಮಗ್ರ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಗುಂಪು ಚರ್ಚೆಯನ್ನು ರೈತರೊಂದಿಗೆ ಕೋಡೂರಿನಲ್ಲಿ ಬುಧವಾರ ನಡೆಸಿದರು.

ರಾಸಾಯನಿಕ ಗೊಬ್ಬರಗಳಿಂದ ಇಳುವರಿ ಹೆಚ್ಚಾಗಬಹುದು ಆದರೆ ಮುಂದಿನ ದಿನಮಾನಗಳಲ್ಲಿ ಮಣ್ಣಿನ ಫಲವತ್ತತೆ ಕಡಿಮೆಯಾಗಿ, ಮಣ್ಣು ಉಳುಮೆ ಮಾಡಲು ಯೋಗ್ಯವಲ್ಲದ ರೀತಿಯಲ್ಲಿ ಪರಿವರ್ತನೆಯಾಗುತ್ತದೆ. ಆದುದರಿಂದ ಸಾವಯವ ಗೊಬ್ಬರ ಹಾಗೂ ಜೈವಿಕ ಗೊಬ್ಬರವನ್ನು ಬಳಸಬೇಕು ಎಂದು ಹೇಳಿದರು.

ಟ್ರೈಕೋಡರ್ಮಾ ಹಾಗೂ ಸುಡೋಮೊನಾಸ್ ಪೋಷಕಾಂಶಗಳನ್ನು ನೀಡುತ್ತವೆ. ಮಣ್ಣಿನಿಂದ ಹುಟ್ಟುವ ರೋಗಗಳನ್ನು ತಡೆದು ಮಣ್ಣಿನ ಆರೋಗ್ಯ ಕಾಪಾಡುತ್ತದೆ. “ಜೈವಿಕ ಗೊಬ್ಬರಗಳ ಪ್ರಭಾವ ನಿಧಾನಗತಿಯಲ್ಲಿದ್ದರು ಇಳುವರಿಯನ್ನು ಹೆಚ್ಚಿಸಿ ಮಣ್ಣಿನ ಫಲವತ್ತತೆ ಕಾಪಾಡುತ್ತದೆ. ಕೃಷಿ ತ್ಯಾಜ್ಯಗಳ ಕೊಳೆಯುವಿಕೆಯಲ್ಲಿ ಸಹಾಯ ಮಾಡಿ ಪೋಷಕಾಂಶಗಳನ್ನು ಬೆಳೆಗಳಗೆ ನೀಡುತ್ತದೆ ಎಂದು ತಿಳಿಸಿದರು.
ಕೃಷಿ ವಿವಿ, ತೋಟಗಾರಿಕೆ ಇಲಾಖೆಗಳಿಂದ ದೊರೆಯುವ ಜೈವಿಕ ಗೊಬ್ಬರಗಳನ್ನು ಬಳಸಿ ಎಂದು ಸಂಪನ್ಮೂಲ ವ್ಯಕ್ತಿ ಡಾ.ರವಿಶಂಕರ್ ಹೇಳಿದರು.

ಬೇರುಹುಳುವಿನ ಬಾಧೆಯಿಂದ ಅಡಿಕೆ ಉತ್ಪಾದನೆ ಕುಂಠಿತಗೊಂಡಿದೆ. ಬೇರುಹುಳುವಿನ ನಿರ್ವಹಣೆ ಹೇಗೆ ಮಾಡಬೇಕು ? ಎಂಬ ರೈತರ ಪ್ರಶ್ನೆಗೆ ಉತ್ತರಿಸಿದ ಸಹಾಯಕ ತೋಟಗಾರಿಕೆ ಅಧಿಕಾರಿ ಡಾ.ಸಚಿನ್, ಬೇರುಹುಳುಗಳು ಮಣ್ಣಿನ ತೇವಾಂಶ ಹೆಚ್ಚಿದರೆ ಮೇಲ್ಭಾಗದಲ್ಲಿ ಹಾಗೂ ತೇವಾಂಶ ಕಡಿಮೆಯಿದ್ದರೆ ಮಣ್ಣಿನ ಆಳದಲ್ಲಿರುತ್ತವೆ. ಮಣ್ಣನ್ನು ಅಗೆದು ಸಡಿಲಗೊಳಿಸಿ ಬೇರುಹುಳುಗಳನ್ನು ಸಂಗ್ರಹಿಸಿ ನಾಶಪಡಿಸಬೇಕು. ಮೆಟಾರೈಜಿಯಮ್ ಅನಿಸೊಪ್ಲಿಯೆ ಪ್ರತಿ ಗಿಡಕ್ಕೆ ಹಾಕುವುದರಿಂದ ಬೇರುಹುಳುಗಳಿಗೆ ರೋಗ ಬಂದು ಸಾಯುತ್ತವೆ. ಮೊಹಕ ಬಲೆಯನ್ನು ಬಳಸಿ ದುಂಬಿಯನ್ನು ನಾಶಪಡಿಸಿ ನಿರ್ವಹಣೆ ಮಾಡಬಹುದು ಎಂದರು.

Malnad Times

Recent Posts

ಚುನಾವಣಾ ಬಹಿಷ್ಕಾರದಿಂದ ಹಿಂದೆ ಸರಿದ ಈಚಲುಕೊಪ್ಪ, ಕಾಪೇರಮನೆ ಗ್ರಾಮಸ್ಥರು

ಹೊಸನಗರ: ತಾಲ್ಲೂಕಿನ ಪುರಪ್ಪೆಮನೆ ಗ್ರಾಪಂ ವ್ಯಾಪ್ತಿಯ ವ್ಯಾಪ್ತಿ ಹಲುಸಾಲೆ - ಮಳವಳ್ಳಿ, ಕಾಪೇರಮನೆ ಗ್ರಾಮದ ಗ್ರಾಮಸ್ಥರು ಸಾಗರ-ಹೊಸನಗರದ ಮಧ್ಯ ಭಾಗದಲ್ಲಿದ್ದು…

2 hours ago

ಆನೆ ದಾಳಿಯಿಂದ ಮೃತಪಟ್ಟ ರೈತನ ಕುಟುಂಬಕ್ಕೆ ತಕ್ಷಣ ₹ 15 ಲಕ್ಷ ಪರಿಹಾರ ನೀಡಿ ; ಹರತಾಳು ಹಾಲಪ್ಪ ಆಗ್ರಹ

ಹೊಸನಗರ: ಶುಕ್ರವಾರ ಬೆಳಿಗ್ಗೆ ದರಗೆಲೆ ತರಲು ಕಾಡಿಗೆ ತೆರಳಿದ ರೈತ ತಿಮ್ಮಪ್ಪ ಎಂಬ ವ್ಯಕ್ತಿಯ ಮೇಲೆ ಆನೆ ದಾಳಿ ಮಾಡಿದ್ದು…

3 hours ago

ಶಿವಮೊಗ್ಗ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಪರ ರೋಡ್ ಷೋ | ಬಡವರ ಕಲ್ಯಾಣಕ್ಕೆ ಬಿಜೆಪಿ ಕೊಡುಗೆ ಶೂನ್ಯ ; ಪ್ರದೀಪ್ ಈಶ್ವರ್

ಶಿವಮೊಗ್ಗ: ರಾಜ್ಯದ ಬಡವರ ಕಲ್ಯಾಣಕ್ಕೆ ಬಿಜೆಪಿ ಕೊಡುಗೆ ಶೂನ್ಯ. ಆದ್ದರಿಂದ ಕ್ಷೇತ್ರದ ಹಿತ ಕಾಯಲು ಗೀತಕ್ಕಗೆ ಮತ ನೀಡಿ, ಆಶೀರ್ವದಿಸಿ…

4 hours ago

ಬಂಗಾರಪ್ಪರ ಋಣ ತೀರಿಸಲು ಗೀತಾಗೆ ಮತ ನೀಡಿ ; ಮಧು ಬಂಗಾರಪ್ಪ

ಸೊರಬ : ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ಬಡವರ ಪರವಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರು. ಅವರ ಋಣವನ್ನು…

6 hours ago

ನೈರುತ್ಯ ಶಿಕ್ಷಕರ, ನೈರುತ್ಯ ಪದವೀಧರರ ಕ್ಷೇತ್ರಗಳಿಗೆ ಜೂ. 03 ರಂದು ಚುನಾವಣೆ | ಮತದಾರರ ಪಟ್ಟಿಗೆ ಹೆಸರು ನೊಂದಾಯಿಸಲು ಮೇ 6 ಕಡೆಯ ದಿನ

ಚಿಕ್ಕಮಗಳೂರು : ಕರ್ನಾಟಕ ವಿಧಾನ ಪರಿಷತ್ತಿನ ನೈರುತ್ಯ ಪದವೀಧರರ ಕ್ಷೇತ್ರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರಗಳಿಗೆ ಜೂನ್ 03 ರಂದು…

19 hours ago

ಆನೆ ದಾಳಿಯಿಂದ ಮೃತನಾದ ರೈತನ ಕುಟುಂಬಕ್ಕೆ 24 ಗಂಟೆಯೊಳಗೆ ಪರಿಹಾರ ನೀಡದಿದ್ದಲ್ಲಿ ಸರ್ಕಾರಕ್ಕೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಹಾಲಪ್ಪ

ರಿಪ್ಪನ್‌ಪೇಟೆ: ಇಂದು ಬೆಳಗ್ಗೆ ದರಗೆಲೆ ತರಲು ಕಾಡಿಗೆ ತೆರಳಿದ್ದ ರೈತ ತಿಮ್ಮಪ್ಬ ಎಂಬ ರೈತ ಆನೆ ದಾಳಿಗೆ ಬಲಿಯಾಗಿದ್ದು ಮೃತ…

19 hours ago