Categories: Hosanagara News

ಸ.ನಂ 112ರಲ್ಲಿನ ಕಲ್ಲು ಗಣಿಗಾರಿಕೆ ನಿಲ್ಲಿಸುವಂತೆ ಹೊಸನಗರ ಪ.ಪಂ. ಸಭೆಯಲ್ಲಿ ನಿರ್ಣಯ ; ಅಭಿನಂದನೆ


ಹೊಸನಗರ: ಪಟ್ಟಣಕ್ಕೆ ಸಮೀಪವಿರುವ ಸರ್ವೆ ನಂಬರ್ 112ರಲ್ಲಿನ ಕಲ್ಲುಗಣಿಗಾರಿಕೆಯಿಂದ ಸುತ್ತ-ಮುತ್ತಲಿನ ಗ್ರಾಮದ ಜನರಿಗೆ ಮನೆಗಳಿಗೆ ಮತ್ತು ಜಮೀನು ತೋಟಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ರತ್ನಾಕರ್ ಬಿನ್ ಹಿರಿಯಣ್ಣ ಮತ್ತು ಮಾರಿಗುಡ್ಡ ಕಳೂರು ಗ್ರಾಮದ ಗ್ರಾಮಸ್ಥರು ಹೊಸನಗರ ಅವರಿಂದ ಬಂದ ಮನವಿ ಪತ್ರದ ಕುರಿತು ಮಂಗಳವಾರ ಪಟ್ಟಣ ಪಂಚಾಯತಿ ತುರ್ತು ಸಭೆ ನಡೆಸಿ ಹೊಸನಗರ ಪಟ್ಟಣ ಸಮೀಪ ವಿಜಯಕುಮಾರ್ ಬಿನ್ ಪುಟ್ಟಪ್ಪ ಗೌಡ ಎಂಬುವವರು ಕಲ್ಲುಗಣಿಗಾರಿಕೆ ನಡೆಸುತ್ತಿದ್ದು ಸುತ್ತ-ಮುತ್ತಲಿನ ನೂರಾರು ಎಕರೆ ಜಮೀನು ತೋಟಗಳಿಗೆ ಹಾಗೂ ಮನೆಗಳಿಗೆ ಹಾನಿ ಉಂಟಾಗುತ್ತಿದ್ದು ಅಪಾರವಾದ ಸಿಡಿಮದ್ದುಗಳನ್ನು ಬಳಸಿ ಭಾರಿ ಪ್ರಮಾಣದ ಸ್ಫೋಟ ಮಾಡುತ್ತಿದ್ದು ಇದಕ್ಕೆ ಹೊಸನಗರ ಪಟ್ಟಣ ವ್ಯಾಪ್ತಿಯ ಒಳಗೆ ಸುತ್ತ-ಮುತ್ತಲಿನ 5 ಕಿ.ಮೀ ವ್ಯಾಪ್ತಿಯ ಮನೆಗಳು ಬಿರುಕು ಬಿಡುತ್ತಿದ್ದು ಕಲ್ಲು ಬ್ಲಾಸ್ಟ್ ಮಾಡುವಾಗ ಪೂರ್ವ ಮಾಹಿತಿಯನ್ನು ನೀಡದೆ ಬ್ಲಾಸ್ಟ್ ಮಾಡುತ್ತಿರುವುದರಿಂದ ಹೊಲದಲ್ಲಿ ಕೆಲಸ ಮಾಡುವ ಜನರಿಗೆ ಶಾಲಾ ಕಾಲೇಜ್‌ಗಳಿಗೆ ಓಡಾಡುವ ಮಕ್ಕಳಿಗೆ ತೊಂದರೆಯಾಗುತ್ತಿರುವುದರಿಂದ ಹಾಗೂ ಈಗಾಗಲೇ ಸಾರ್ವಜನಿಕರ ಮನೆ ಸಾರ್ವಜನಿಕ ಕಛೇರಿ ಕಟ್ಟಡಗಳು ಸಾರ್ವಜನಿಕ ಕಾಲುಸಂಕ ಹಾಗೂ ಸಾರ್ವಜನಿಕ ನೀರಿನ ಟ್ಯಾಂಕುಗಳು ಬಿರುಕು ಹಾಗೂ ಸಾಕು ಪ್ರಾಣಿಗಳು ಗಣಿಗಾರಿಕೆಯ ಹೊಂಡದಲ್ಲಿ ಬಿದ್ದು ಹಸು ನೀಗುತ್ತಿರುವ ಈ ಬಗ್ಗೆ ಕ್ರಮ ವಹಿಸಬೇಕೆಂದು ಸಭೆಯಲ್ಲಿ ಸದಸ್ಯರು ಚರ್ಚಿಸಿ ಗಣಿಗಾರಿಕೆ ನಡೆಸುತ್ತಿರುವ ಸ್ಥಳ ಪರೀಶೀಲಿಸಿ ಮುನ್ನೆಚರಿಕೆ ದೃಷ್ಠಿಯಿಂದ ಗಣಿಗಾರಿಕೆ ವಿರುದ್ಸಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಾನ್ಯ ಜಿಲ್ಲಾಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ಶಾಸಕರಿಗೆ ಸಚಿವರಿಗೆ ಹಾಗೂ ಅಧಿಕಾರಿಗಳಿಗೆ ಸಭೆ ನಡುವಳಿ ಮಾಡಿ ಪತ್ರ ನಕಲನ್ನು ಕಳುಹಿಸಿದ್ದಾರೆ.


ಅಭಿನಂದನೆ:

ಪಟ್ಟಣ ಪಂಚಾಯತಿ ಅದ್ಯಕ್ಷ ಸದಸ್ಯರುಗಳು ಹಾಗೂ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಬಾಲಚಂದ್ರಪ್ಪ ಸಿಬ್ಬಂದಿಗಳು ತುರ್ತು ಸಭೆ ನಡೆಸಿ ನಮ್ಮ ಗ್ರಾಮದ ಗ್ರಾಮಸ್ಥರ ಕಷ್ಟಗಳನ್ನು ಅರಿತು ಸ್ವಂದಿಸಿ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸಭೆಯ ನಡುವಳಿಯನ್ನು ಕಳುಹಿಸಿದ್ದು ಪಟ್ಟಣ ಪಂಚಾಯತಿ ಅಧ್ಯಕ್ಷ ಸದಸ್ಯರುಗಳಿಗೆ ಮತ್ತು ಅಧಿಕಾರಿಗಳಿಗೆ ಕಳೂರು ಗ್ರಾಮದ ಗ್ರಾಮಸ್ಥರು ಹಾಗೂ ಮಾರಿಗುಡ್ಡ ಜನತೆ ಹಾಗೂ ಹೊಸನಗರ ಪಟ್ಟಣ ಪಂಚಾಯತಿಯ ಸಾರ್ವಜನಿಕರು ಅಭಿನಂದಿಸಿ ಅಭಿನಂದಿಸಿದ್ದಾರೆ.

Malnad Times

Recent Posts

ಮೊಬೈಲ್ ಟವರ್ ನಿರ್ಮಾಣದ ಭರವಸೆ, ಚುನಾವಣೆ ಬಹಿಷ್ಕಾರ ಕೈಬಿಟ್ಟ ವಾರಂಬಳಿ ಗ್ರಾಮಸ್ಥರು

ಹೊಸನಗರ: ತಾಲ್ಲೂಕಿನ ವಾರಂಬಳ್ಳಿಯ ಗ್ರಾಮಸ್ಥರು ತಮ್ಮ ಗ್ರಾಮದಲ್ಲಿ ಮೊಬೈಲ್ ಟವರ್ ನಿರ್ಮಾಣಕ್ಕೆ ಮನವಿ ಮಾಡಿಕೊಂಡಿದ್ದು ಈವರೆಗೂ ಬೇಡಿಕೆ ಈಡೇರದೆ ಚುನಾವಣೆ…

1 hour ago

ಕಾಡಾನೆ ದಾಳಿಗೆ ವ್ಯಕ್ತಿ ಬಲಿಯಾದ ಘಟನಾ ಸ್ಥಳಕ್ಕೆ ಶಾಸಕದ್ವಯರ ಭೇಟಿ, ಕುಟುಂಬಸ್ಥರಿಗೆ ಸಾಂತ್ವನ

ರಿಪ್ಪನ್‌ಪೇಟೆ : ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವಾಪುರ ಗ್ರಾಮದಲ್ಲಿಂದು ದರಗೆಲೆ ತರಲೆಂದು ಕಾಡಿಗೆ ತೆರಳಿದ್ದ ಕೂಲಿ ಕೆಲಸಗಾರ ತಿಮ್ಮಪ್ಪ…

4 hours ago

BIG BREAKING NEWS ; ಕಾಡಾನೆ ದಾಳಿಗೆ ವ್ಯಕ್ತಿ ಬಲಿ

ರಿಪ್ಪನ್‌ಪೇಟೆ : ಅರಸಾಳು ಗ್ರಾಪಂ ವ್ಯಾಪ್ತಿಯ ಬಸವಾಪುರ ಗ್ರಾಮದಲ್ಲಿ ಕಾಡಾನೆ ದಾಳಿಗೆ ವ್ಯಕ್ತಿ ಬಲಿಯಾದ ಘಟನೆ ನಡೆದಿದೆ. ತಿಮ್ಮಪ್ಪ ಬಿನ್…

8 hours ago

28 ಸ್ಥಾನ ಗೆಲ್ಲದಿದ್ದರೆ ಅಪ್ಪ, ಮಗ ರಾಜೀನಾಮೆ ಕೊಡ್ತಾರಾ…? ಬೇಳೂರು

ರಿಪ್ಪನ್‌ಪೇಟೆ: ಕಳೆದ ವಿಧಾನಸಭಾ ಚುನಾವಣೆಯ ವೇಳೆ ನಮ್ಮ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಮನೆಗೆ ತಲುಪಿಸುವಾಗ ಬಿಜೆಪಿಯವರು ಗ್ಯಾರಂಟಿ…

21 hours ago

ಪ್ರಜ್ವಲ್ ರೇವಣ್ಣನಂತಹ ಅತ್ಯಾಚಾರಿ ಪರ ಮತಯಾಚಿಸಿದ ಮೋದಿ ಹೆಣ್ಣು ಮಕ್ಕಳ ಕ್ಷಮೆ ಕೇಳಬೇಕು ; ರಾಹುಲ್ ಗಾಂಧಿ

ಶಿವಮೊಗ್ಗ: ಪ್ರಜ್ವಲ್ ರೇವಣ್ಣನಂತಹ ಅತ್ಯಾಚಾರಿಯ ಪರ ಮತಯಾಚಿಸಿದ ಪ್ರಧಾನಿ ಮೋದಿ ಅವರು ಈ ದೇಶದ ಹೆಣ್ಣುಮಕ್ಕಳ ಕ್ಷಮೆ ಕೇಳಬೇಕು ಎಂದು…

24 hours ago

ಅಪಾರ ಭಕ್ತ ಸಮೂಹದೊಂದಿಗೆ ಅದ್ಧೂರಿಯಾಗಿ ಜರುಗಿದ ರಿಪ್ಪನ್‌ಪೇಟೆಯ ಶ್ರೀ ಸಿದ್ದಿವಿನಾಯಕ ಸ್ವಾಮಿಯ ಶ್ರೀಮನ್ಮಹಾರಥೋತ್ಸವ

ರಿಪ್ಪನ್‌ಪೇಟೆ: ಇತಿಹಾಸ ಪ್ರಸಿದ್ದ ಶ್ರೀಸಿದ್ದಿವಿನಾಯಕ ಸ್ವಾಮಿಯ ಪ್ರಥಮ ವರ್ಷದ ಶ್ರೀಮನ್ಮಹಾರಥೋತ್ಸವ ಸಂಭ್ರಮ ಸಡಗರದೊಂದಿಗೆ ವಿಜೃಂಭಣೆಯಿಂದ ಇಂದು ಜರುಗಿತು. ಮಧ್ಯಾಹ್ನ 12:30…

1 day ago