Categories: Hosanagara News

ಹೊಸನಗರ ; ತ್ಯಾಗ ಬಲಿದಾನದ ಪ್ರತೀಕವಾದ ‘ಬಕ್ರೀದ್’ ಆಚರಣೆ


ಹೊಸನಗರ : ತ್ಯಾಗ, ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಇಲ್ಲಿನ ಮುಸ್ಲಿಮ್ ಸಮುದಾಯದ ಬಾಂಧವರು ಇಂದು ಆಚರಿಸಿದರು.

ಪಟ್ಟಣದ ಜುಮ್ಮಾ ಮಸೀದಿ ಹಾಗೂ ಬದ್ರೀಯ ಮಸೀದಿಗಳಲ್ಲಿ ಮುಸ್ಲಿಮರು ವಿಶೇಷ ಪ್ರಾರ್ಥನೆ ಸಲ್ಲಿಸಿ, ತಮ್ಮ ಸಮುದಾಯದ ಬಡ ವರ್ಗದವರಿಗೆ ದಾನ ನೀಡುವ ಮೂಲಕ ಶುಭಹಾರೈಸಿದರು.

ಹೊಸ ವಸ್ತ್ರದೊಂದಿಗೆ ಪ್ರಾರ್ಥನ ಸ್ಥಳಕ್ಕೆ ಭೇಟಿ ನೀಡಿದ ನೂರಾರು ಮುಸ್ಲಿಮರು ಅಲ್ಲಾಹನಲ್ಲಿ ವಿಶ್ವ ಸುಭಿಕ್ಷೆಗಾಗಿ ಪ್ರಾರ್ಥಿಸಿದರು. ಬಳಿಕ ಪರಸ್ಪರ ಶುಭಾಶಯ ಕೋರಿ, ಗೆಳೆಯರ, ಸಂಬಂಧಿಗಳ ಮನೆಗಳಿಗೆ ತೆರಳಿ ಹಬ್ಬದ ವಿಶೇಷ ಖಾದ್ಯಗಳನ್ನು ಸವಿದು ಸಂಭ್ರಮ ಹಂಚಿಕೊಂಡಿದ್ದು ಕಂಡು ಬಂತು.

ಈ ಬಾರಿ ಈದ್ಗಾ ಮೈದಾನದಲ್ಲಿನ ಸಾಮೂಹಿಕ ಪ್ರಾರ್ಥನೆಗೆ ಮಳೆರಾಯ ಅಡ್ಡಿ ಪಡಿಸಿದ್ದ ಕಾರಣ ಮಸೀದಿಯಲ್ಲೆ ನಡೆಯಿತು.
ತಾಲೂಕಿನ ಬಟ್ಟೆಮಲ್ಲಪ್ಪ, ನಗರ, ಯಡೂರು, ಕೋಡೂರು, ರಿಪ್ಪನ್‌ಪೇಟೆ, ನಿಟ್ಟೂರು, ಗರ್ತಿಕೆರೆ, ಜಯನಗರ ಸೇರಿದಂತೆ ವಿವಿಧೆಡೆ ಬಕ್ರೀದ್ ಆಚರಣೆ ಕಂಡುಬಂತು.


ಶುಭ ಹಾರೈಕೆ :

ಬಕ್ರೀದ್ ಹಬ್ಬದ ಹಿನ್ನಲೆ ಶಾಸಕ ಗೋಪಾಲಕೃಷ್ಣ ಬೇಳೂರು ತಾಲೂಕಿನ ಮುಸ್ಲಿಂ ಸಮುದಾಯದವರಿಗೆ ಶುಭ ಕೋರಿದ್ದು, ತ್ಯಾಗ, ಬಲಿದಾನಕ್ಕೆ ಹೆಸರಾದ ಈ ಹಬ್ಬದಲ್ಲಿ ಅಲ್ಲಾಹನ ವಿಶೇಷ ಕರುಣೆ ಸಮುದಾಯದ ಮೇಲಿರಲಿ ಎಂದಿದ್ದಾರೆ.

ಬಕ್ರೀದ್‌ ಹಬ್ಬವು ಜಗತ್ತಿನಾದ್ಯಂತ ಮುಸ್ಲಿಮರಿಗೆ ಅತ್ಯಂತ ಮಂಗಳಕರವಾದ ಹಬ್ಬಗಳಲ್ಲಿ ಒಂದಾಗಿದೆ. ಇಸ್ಲಾಮಿಕ್ ಕ್ಯಾಲೆಂಡರ್‌ ಪ್ರಕಾರ ಈ ಪವಿತ್ರ ದಿನವನ್ನು ಧುಲ್-ಹಿಜ್ಜಾದ ಹತ್ತನೇ ದಿನದಂದು ಆಚರಿಸುತ್ತಾರೆ. ಈ ಹಬ್ಬದ ದಿನದಂದು ಬೆಳಗಿನ ಸಮಯದಲ್ಲಿ ವಿಶೇಷ ನಮಾಝ್ ನಿರ್ವಹಿಸುವ ಮೂಲಕ ಆರಂಭಿಸಲಾಗುತ್ತದೆ.
ಬಳಿಕ ಬಡವರಿಗೆ ತಮ್ಮ ಕೈಲಾದಷ್ಟು ದಾನ ಮಾಡಿ ಹಸಿದವರ ಹಸಿವು ನೀಗಸಬೇಕಿದೆ ಎಂದು ಪವಿತ್ರ ಗ್ರಂಥವಾದ ಖುರಾನ್‌ ನಲ್ಲಿ ಹೇಳಲಾಗಿದೆ ಎಂದು ಹೊಸನಗರ ಪಟ್ಟಣದಲ್ಲಿರುವ ಕಳೂರು ಜುಮ್ಮಾ ಮಸೀದಿಯ ಖತೀಬರಾದ ಮುಫ್ತಿ ಮೊಹಮ್ಮದ್ ಇಂತಿಯಾಝ್ ಶುಯೇಬಿ ರವರು ಹೇಳಿದರು.

ಇಂದು ಮಸ್ಜಿದ್ ಆವರಣದಲ್ಲಿ ಬಕ್ರೀದ್ ಖುತ್ಬಾದ ನಂತರ ಮಾತನಾಡಿ ʼಈದ್ ಉಲ್ ಅದಾ ಎಂದರೆ, ಅದಾ ಎಂಬುದು ತ್ಯಾಗ, ಬಲಿದಾನ ಹಾಗೂ ʼಈದ್ʼ ಎಂದರೆ ಹಬ್ಬ. ತ್ಯಾಗ ಸಂಕೇತವಾಗಿರುವ ಈ ಹಬ್ಬವನ್ನು ಬಕ್ರೀದ್‌ ಎನ್ನುವುದಾಗಿದೆ.

ಬಕ್ರೀದ್‌ ಮಹತ್ವ:
ಅಲ್ಲಾಹು ಒಂದು ಬಾರಿ ತನ್ನ ಭಕ್ತರು ದಾನ, ತ್ಯಾಗ ಎಂದರೆ ಹೇಗೆ ಪ್ರತಿಕ್ರಿಯಿಸುವವರು ಎಂಬ ನಿಟ್ಟಿನಲ್ಲಿ ಹಜರತ್ ಇಬ್ರಾಹಿಂ ಅವರ ಪ್ರವಾದಿ ಕನಸಿನಲ್ಲಿ ಬಂದು ನಿನಗೆ ತುಂಬಾ ಇಷ್ಟವಾದ ವಸ್ತುವನ್ನು ನನಗೆ ನೀಡಬೇಕೆಂದು ಕೇಳಿಕೊಂಡರು.ಆಗ ಹಜರತ್ ಇಬ್ರಾಹಿಂ ತಾನು ತುಂಬಾ ಪ್ರೀತಿಸುವ ವಸ್ತುವಿದ್ದರೇ ಅದು ನನ್ನ ಮಗ ಇಸ್ಮಾಯಿಲ್‌ ಎಂದರು. ಆದರೆ ದೇವರಾಗಿರುವ ಅಲ್ಲಾನೇ ಇಷ್ಟವಾದುದನ್ನು ಕೇಳಿರುವಾಗ ತನ್ನ ಮಗನಿಗಿಂತ ಬೇರೆ ಯಾವುದು ಇಲ್ಲ ಎಂದು ಯೋಚಿಸಿ ತನ್ನ ಮಗನನ್ನು ಅಲ್ಲಾಹುಗೆ ತ್ಯಾಗ ಮಾಡಲು ಯೋಚಿಸಿ ಮಗನ ಬಲಿಕೊಡಲು ತನ್ನ ಕಣ್ಣುಗಳಿಗೆ ಬಟ್ಟೆ ಕಟ್ಟಿ ಮಗನನ್ನು ರುಂಡ ಹಾರಿಸಿದರು.ಆದರೆ ಕಣ್ಣಿನಿಂದ ಬಟ್ಟೆ ತೆಗೆದು ನೋಡಿದರೆ ಇಬ್ರಾಹಿಂ (ಮಗ) ನಿಗೆ ಏನೂ ಆಗದೇ ಮೇಕೆಯೊಂದು ಬಲಿಯಾಗಿತ್ತು. ಬಳಿಕ ಆ ವಿಸ್ಮಯ ಕಂಡು ತನ್ನ ಪರೀಕ್ಷಿಸಲು ಅಲ್ಲಾಹು ಹೀಗೆ ಮಾಡಿದ್ದಾರೆಂದು ಅರಿತರು ಆ ಬಲಿದಾನದ ಸಂಕೇತವಾಗಿ ಪವಿತ್ರ ಬಕ್ರೀದ್ ಹಬ್ಬವನ್ನು ಬಲಿದಾನದ ಹಬ್ಬ ಎಂದೇ ಕರೆಯಲ್ಪಟ್ಟಿತು ಎಂದರು.


ಈ ಸಂದರ್ಭದಲ್ಲಿ ಹಾಫಿಝ್ ಅಬ್ದುಲ್ಲಾ, ಅಬು ತಾಲಿಬ್, ಕಮಿಟಿಯ ಪದಾಧಿಕಾರಿಗಳು, ಸಮುದಾಯದ ಪ್ರಮುಖರು, ಜಮಾತಿನ ಬಾಂಧವರು ಮತ್ತು ಪುಟ್ಟ-ಪುಟ್ಟ ಮಕ್ಕಳು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

Malnad Times

Recent Posts

28 ಸ್ಥಾನ ಗೆಲ್ಲದಿದ್ದರೆ ಅಪ್ಪ, ಮಗ ರಾಜೀನಾಮೆ ಕೊಡ್ತಾರಾ…? ಬೇಳೂರು

ರಿಪ್ಪನ್‌ಪೇಟೆ: ಕಳೆದ ವಿಧಾನಸಭಾ ಚುನಾವಣೆಯ ವೇಳೆ ನಮ್ಮ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಮನೆಗೆ ತಲುಪಿಸುವಾಗ ಬಿಜೆಪಿಯವರು ಗ್ಯಾರಂಟಿ…

12 hours ago

ಪ್ರಜ್ವಲ್ ರೇವಣ್ಣನಂತಹ ಅತ್ಯಾಚಾರಿ ಪರ ಮತಯಾಚಿಸಿದ ಮೋದಿ ಹೆಣ್ಣು ಮಕ್ಕಳ ಕ್ಷಮೆ ಕೇಳಬೇಕು ; ರಾಹುಲ್ ಗಾಂಧಿ

ಶಿವಮೊಗ್ಗ: ಪ್ರಜ್ವಲ್ ರೇವಣ್ಣನಂತಹ ಅತ್ಯಾಚಾರಿಯ ಪರ ಮತಯಾಚಿಸಿದ ಪ್ರಧಾನಿ ಮೋದಿ ಅವರು ಈ ದೇಶದ ಹೆಣ್ಣುಮಕ್ಕಳ ಕ್ಷಮೆ ಕೇಳಬೇಕು ಎಂದು…

15 hours ago

ಅಪಾರ ಭಕ್ತ ಸಮೂಹದೊಂದಿಗೆ ಅದ್ಧೂರಿಯಾಗಿ ಜರುಗಿದ ರಿಪ್ಪನ್‌ಪೇಟೆಯ ಶ್ರೀ ಸಿದ್ದಿವಿನಾಯಕ ಸ್ವಾಮಿಯ ಶ್ರೀಮನ್ಮಹಾರಥೋತ್ಸವ

ರಿಪ್ಪನ್‌ಪೇಟೆ: ಇತಿಹಾಸ ಪ್ರಸಿದ್ದ ಶ್ರೀಸಿದ್ದಿವಿನಾಯಕ ಸ್ವಾಮಿಯ ಪ್ರಥಮ ವರ್ಷದ ಶ್ರೀಮನ್ಮಹಾರಥೋತ್ಸವ ಸಂಭ್ರಮ ಸಡಗರದೊಂದಿಗೆ ವಿಜೃಂಭಣೆಯಿಂದ ಇಂದು ಜರುಗಿತು. ಮಧ್ಯಾಹ್ನ 12:30…

16 hours ago

ಇನ್ನೊಬ್ಬ ಈಶ್ವರಪ್ಪ ಇದ್ದಾರೆ ಎಚ್ಚರ…!

ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ನಗರದಲ್ಲಿ ಮತಯಾಚನೆ ನಡೆಸಿದರು. ನಗರದ ಶಾಹಿ ಗಾರ್ಮೆಂಟ್ಸ್, ಟೊಯೋಟಾ…

20 hours ago

ಕೆ.ಎಸ್. ಈಶ್ವರಪ್ಪ ಚುನಾವಣಾ ಕಚೇರಿ ಮುಂದೆ ವಾಮಾಚಾರ

ಶಿಕಾರಿಪುರ: ಪಕ್ಷೇತರ ಅಭ್ಯರ್ಥಿಯಾಗಿರುವ ಕೆ.ಎಸ್.ಈಶ್ವರಪ್ಪ ಅವರ ಶಿಕಾರಿಪುರದ ಚುನಾವಣಾ ಕಚೇರಿ ಮುಂದೆ ವಾಮಾಚಾರ ನಡೆದಿರುವುದು ಬೆಳಕಿಗೆ ಬಂದಿದ್ದು ಈ ಕುರಿತು ಈಶ್ವರಪ್ಪ…

22 hours ago

ಫಲಿತಾಂಶ ಹೊರಬರಲಿ ಗ್ಯಾರಂಟಿಯೋ, ಅಭಿವೃದ್ದಿಯೋ ತಿಳಿಯಲಿದೆ ; ಬಿ.ವೈ. ರಾಘವೇಂದ್ರ

ಹೊಸನಗರ : ಈ ಬಾರಿಯ ಚುನಾವಣೆ ಭಾಗ್ಯ ಗ್ಯಾರಂಟಿಗಳ ಮೂಲಕ ಜನರನ್ನು ಸೆಳೆಯುವ ಚುನಾವಣೆಯಲ್ಲ, ಹಾಡು ಡ್ಯಾನ್ಸ್ ಮೂಲಕ ಲೋಕಸಭೆಗೆ…

1 day ago