Categories: Hosanagara News

ಹೊಸನಗರ ; ವರಕೋಡು ಗ್ರಾಮದಲ್ಲಿ 11ನೇ ಶತಮಾನದ ಅಪ್ರಕಟಿತ ಶಾಸನ ಪತ್ತೆ

ಹೊಸನಗರ: ಇತ್ತೀಚಿಗೆ ಹೊನ್ನಾಳಿ ಎಸ್.ಎಮ್.ಎಸ್.ಎಫ್ ಕಾಲೇಜು ಪ್ರಾಚಾರ್ಯರಾದ ಡಾ.ಪ್ರವೀಣ್ ದೊಡ್ಡಗೌಡ್ರು ಸಹಕಾರದಿಂದ ಸಾಗರ ಎಲ್.ಬಿ ಮತ್ತು ಎಸ್.ಬಿ.ಎಸ್ ಕಾಲೇಜಿನ ಇತಿಹಾಸ ಅಧ್ಯಾಪಕರಾದ ನವೀನ ಜೀ ಆಚಾರ್ಯಾ ಇವರು ವರಕೋಡು ಗ್ರಾಮದ ಕೋಟೆಕಾನು ಪರಿಸರದಲ್ಲಿ ಕ್ಷೇತ್ರ ಕಾರ್ಯ ನಡೆಸಿದಾಗ 11ನೇ ಶತಮಾನದ ಕಲ್ಯಾಣ ಚಾಲುಕ್ಯರ ಕಾಲದ ಅಪ್ರಕಟಿತ ಶಾಸನವನ್ನು ಸಂಶೋಧನೆ ಮಾಡಿದ್ದಾರೆ. ಈ ಶಾಸನವನ್ನು ಓದುವಲ್ಲಿ ಜಗದೀಶ್ ಅಗಸಿಬಾಗಿಲು ಇವರು ಸಹಕರಿಸಿದರು.

ಈ ಶಾಸನವು ಹೊಸನಗರ ತಾಲೂಕು ಕೇಂದ್ರದಿಂದ ಆಗ್ನೇಯ ದಿಕ್ಕಿಗೆ 3 ಕಿ.ಮೀ ದೂರದಲ್ಲಿ ಕೋಟೆಕಾನು ಪರಿಸರದಲ್ಲಿ ದೊರೆತಿದೆ. ಶಾಸನಕ್ಕೆ ಗ್ರಾನೈಟ್ ಕಲ್ಲನ್ನು ಬಳಕೆ ಮಾಡಿದ್ದು 5 ಅಡಿ ಎತ್ತರ, 2.5 ಅಡಿ ಅಗಲ, 4 ಇಂಚು ದಪ್ಪ, 27 ಸಾಲುಗಳನ್ನು ಹೊಂದಿದೆ. ಈ ಶಾಸನದ ಪಕ್ಕದಲ್ಲಿ 2 ಅಡಿ ಎತ್ತರದ ಮತ್ತೆರಡು ಶಾಸನ ತುಂಡುಗಳು ಲಭ್ಯವಾಗಿದೆ. ಈ ಶಾಸನ ಕ್ರಮವಾಗಿ 10-11 ಸಾಲುಗಳನ್ನು ಹೊಂದಿದ್ದು ಮಾಹಿತಿ ಅಸ್ಪಷ್ಟವಾಗಿದೆ. ಉಳಿದಂತೆ ಮೂಲ ಶಾಸನವು ಕನ್ನಡ ಭಾಷೆ ಮತ್ತು ಕನ್ನಡ ಲಿಪಿಯಲ್ಲಿ ಬರೆಯಲ್ಪಟ್ಟಿದೆ. ಶಾಸನದ ಸಾಲುಗಳು ಅಲ್ಲಲ್ಲಿ ಅಳಿಸಿಹೋಗಿದ್ದು ಶಾಸನದ ಸಂಪೂರ್ಣ ಮಾಹಿತಿಯನ್ನು ಗ್ರಹಿಸಲು ಸಾಧ್ಯವಾಗಿಲ್ಲ ದೊರೆತಿರುವ ಅಂಶಗಳ ಅನ್ವಯ ಈ ಶಾಸನವು 11ನೇ ಶತಮಾನದಲ್ಲಿ ಆಳ್ವಿಕೆ ಮಾಡುತ್ತಿದ್ದ ಕಲ್ಯಾಣ ಚಾಳುಕ್ಯರ “ತ್ರೈಲೊಕ್ಯಮಲ್ಲ”(ಒಂದನೇ ಸೋಮೇಶ್ವರ) ಹೆಸರು ಶಾಸನದಲ್ಲಿ ಉಲ್ಲೇಖವಾಗಿದೆ. ಇವನ ಮಹಮಂಡಲೇಶ್ವರ “ವೀರ ಶಾಂತರದೇವ” ಈ ಶಾಸನ ಹಾಕಿಸಿದ್ದಾಗಿ ತಿಳಿದು ಬರುತ್ತದೆ. ಇದೊಂದು ದಾನಶಾಸನವಾಗಿದ್ದು ದಾನದ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಕಲ್ಯಾಣ ಚಾಳುಕ್ಯರ ಕಾಲದಲ್ಲಿ ಬಳಕೆಯಲ್ಲಿದ್ದ “ಹಣ” ಎಂಬ ನಾಣ್ಯದ ಕುರಿತು ಶಾಸನವು ಉಲ್ಲೇಖಿಸಿದೆ. ಶಾಸನದ ಕೊನೆಯಲ್ಲಿ ಪಾಪಶಯ ವಾಕ್ಯವಿದ್ದು ಶಾಸನ ಹಾಳು ಮಾಡಿದರೆ ಸಾಸಿರ (ಸಾವಿರ) ಕವಿಲೆ (ಗೋವು) ಕೊಂದ ಪಾಪಕ್ಕೆ ಹೋಗುವರು ಎಂದು ಉಲ್ಲೇಖವಿದೆ. ಈ ಶಾಸನವನ್ನು ಕಳವೂರು (ಇವತ್ತಿನ ಕಳೂರು) ನಾಗವರ್ಮ ಎಂಬುವನು ಈ ಶಾಸನ ಕೆತ್ತಿದ್ದಾನೆ ಎಂದು ಉಲ್ಲೇಖಿಸಲಾಗಿದೆ.

ಕ್ಷೇತ್ರ ಕಾರ್ಯ ಸಂದರ್ಭದಲ್ಲಿ ವೀರಪ್ಪ ಗೌಡ್ರು ವರಕೋಡು ಮತ್ತು ಮಧು ಆಚಾರ್ ವರಕೋಡು ಮತ್ತು ಪ್ರಶಾಂತ್ ಯು ಶೇಟ್ ಇವರು ಸಹಕಾರ ನೀಡಿರುತ್ತಾರೆ.

Malnad Times

Recent Posts

ಕರ್ನಾಟಕ SSLC ಪರೀಕ್ಷೆ 2024ರ ಫಲಿತಾಂಶ ನಾಳೆ ಪ್ರಕಟ

ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…

2 days ago

ಮೇ 12 ರಂದು ನಾಗರಹಳ್ಳಿ ಶ್ರೀನಾಗೇಂದ್ರಸ್ವಾಮಿ ಪ್ರತಿಷ್ಠಾಪನಾ ವರ್ಧಂತ್ಯುತ್ಸವ, ಜಗದ್ಗುರು ಶಂಕರಾಚಾರ್ಯರ ಜಯಂತಿ

ರಿಪ್ಪನ್‌ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…

2 days ago

CRIME NEWS |  ಹಾಡಹಗಲೇ ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಡಬ್ಬಲ್ ಮರ್ಡರ್ !

ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…

2 days ago

ಶಿವಮೊಗ್ಗ ಲೋಕಸಭಾ ಕ್ಷೇತ್ರ | ಹೊಸನಗರ ತಾಲ್ಲೂಕಿನಲ್ಲಿ ಶೇ. 83.64ರಷ್ಟು ಮತದಾನ, ಎಲ್ಲೆಲ್ಲಿ ಎಷ್ಟೆಷ್ಟು?

ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…

2 days ago

ಅಗ್ನಿ ಅವಘಡ, ಮನೆ ಸುಟ್ಟು ಭಸ್ಮ ! ಲಕ್ಷಾಂತರ ರೂ. ನಷ್ಟ

ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…

2 days ago

ಭಾರತ ದೇಶದ ಸೈನಿಕರಿಗೆ ಕುಟುಂಬ ಸೇವೆಗಿಂತ ದೇಶ ಸೇವೆಯೇ ಮುಖ್ಯ ; ಕೃಷ್ಣಪೂಜಾರಿ ದಂಪತಿ

ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…

2 days ago