Hombuja | 12ನೇ ಪಟ್ಟಾಭಿಷೇಕ ವರ್ಧಂತಿ ಉತ್ಸವ ; ಅನುಭೂತಿಯು ಆಧ್ಯಾತ್ಮಿಕ ಜ್ಞಾನದಿಂದ ಮಾತ್ರ ಸಾಧ್ಯ – ಶ್ರೀಗಳು

ರಿಪ್ಪನ್‌ಪೇಟೆ : “ಸುಖದ ಅನುಭೂತಿಯು ಆಧ್ಯಾತ್ಮಿಕ ಜ್ಞಾನದಿಂದ ಮಾತ್ರ ಸಾಧ್ಯ. ಭೌತಿಕ ವಸ್ತುಗಳ ಸಂಗ್ರಹದಿಂದ ಯಾಂತ್ರಿಕ, ವೈಜ್ಞಾನಿಕ ವಿಷಯಗಳಿಂದ ಮನುಷ್ಯನಿಗೆ ಸುಖವು ಲಭಿಸದು. ಜ್ಞಾನ ಸಂಪಾಧನೆ ಮನುಷ್ಯ ಜನ್ಮದ ಗುರಿಯಾಗಿರಬೇಕು” ಎಂದು ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು 12ನೇ ವರ್ಷದ ಪಟ್ಟಾಭಿಷೇಕ ವರ್ಧಂತ್ಯೋತ್ಸವದ ‘ಗುರುವಂದನಾ’ ಕಾರ್ಯಕ್ರಮದ ಬಳಿಕ ಹೇಳಿದರು.

ಪ್ರಾಚೀನ ಜೈನ ತೀರ್ಥಕ್ಷೇತ್ರ ಅತಿಶಯ ಶ್ರೀಕ್ಷೇತ್ರ ಹೊಂಬುಜ (Hombuja) ವಿಶ್ವದಾದ್ಯಂತ ಸರ್ವಧರ್ಮೀಯರ ಆರಾಧನಾ ಪುಣ್ಯಧಾಮವಾಗಿದೆ. ಭಕ್ತರ ಇಷ್ಟಾರ್ಥ ದಯಪಾಲಿಸುವ ಶ್ರೀ 1008 ಪಾರ್ಶ್ವನಾಥ ಸ್ವಾಮಿ, ಜಗನ್ಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ದರ್ಶನಾರ್ಥಿಗಳ ಜೀವನವನ್ನು ಪಾವನಗೊಳಿಸುವಂತೆ ಸದಾ ಹರಸುತ್ತಿರುವುದು ಮತ್ತು ಹೊಂಬುಜ ಶ್ರೀಕ್ಷೇತ್ರದ ಆಧ್ಯಾತ್ಮಿಕ ಪ್ರಭಾವವು ಸರ್ವತ್ರ ಪಸರಿಸುತ್ತಿರುವುದು ನಮ್ಮೆಲ್ಲರ ಭಾಗ್ಯವಾಗಿದೆ ಎಂದರು.

ಪ್ರಾತಃಕಾಲ ಶ್ರೀ ನೇಮಿನಾಥ ಸ್ವಾಮಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ ಸಾನಿಧ್ಯದಲ್ಲಿ ಧಾರ್ಮಿಕ ವಿಧಿ ನೆರವೇರಿತು. ಬಳಿಕ 1008 ಪಾರ್ಶ್ವನಾಥ ಸ್ವಾಮಿ ಸನ್ನಿಧಿಯಲ್ಲಿ ಅಷ್ಟವಿಧಾರ್ಚನೆ ಪೂಜೆ ನೆರವೇರಿಸಿದರು. ಶ್ರೀಮದ್ ದೇವೇಂದ್ರಕೀರ್ತಿ ಪೀಠದಲ್ಲಿ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ಪೀಠಾರೋಹಣ ಆಗಮೋಕ್ತ ವಿಧಿ ಪೂರ್ವಕ ನೆರವೇರಿಸಿ ಪುರೋಹಿತರಾದ ಪದ್ಮರಾಜ ಇಂದ್ರರವರು ಬಿರುದಾವಳಿ ಹೇಳಿದರು.

ಜಗನ್ಮಾತೆ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ, ಪೂಜೆ ಸಲ್ಲಿಸಿದ ಸ್ವಸ್ತಿಶ್ರೀಗಳವರು ಶ್ರೀಕ್ಷೇತ್ರಪಾಲ, ಶ್ರೀ ನಾಗಸನ್ನಿಧಿಯಲ್ಲಿ ಪೂಜೆ ನೆರವೇರಿಸಿದರು. ನಗರ ಜಿನಾಲಯ, ಮಕ್ಕಳ ಬಸದಿ, ಬೋಗಾರ ಬಸದಿ, ತ್ರಿಕೂಟ ಜಿನಾಲಯಗಳಲ್ಲಿ ಪಟ್ಟಾಭಿಷೇಕ ವರ್ಧಂತ್ಯುತ್ಸವ ನಿಮಿತ್ತ ಪೂಜೆ ಸಲ್ಲಿಸಲಾಯಿತು.

ಶ್ರೀಗಳವರಿಗೆ ಗೌರವಾರ್ಪಣೆ :
ಹುಂಚ ಜೈನ ಸಮಾಜ, ಮಹಿಳಾ ಸಮಾಜ, ಬಿಜಾಪುರ, ಶಿವಮೊಗ್ಗ, ಸಾಗರ, ಶ್ರವಣಬೆಳಗೊಳ, ಮಂಗಳೂರು-ಉಡುಪಿ ಜಿಲ್ಲೆಗಳ ಹಾಗೂ ಹೊರರಾಜ್ಯಗಳ ಭಕ್ತವೃಂದದವರು ಶ್ರೀಗಳವರಿಗೆ ಫಲಪುಷ್ಪ ನೀಡಿ ಭಕ್ತಿ ಗೌರವ ಸಮರ್ಪಿಸಿದರು.

ಹೊಂಬುಜ ಶ್ರೀಕ್ಷೇತ್ರದಲ್ಲಿ ಭಕ್ತರಿಗೆ ಅನುಕೂಲಕರ ವ್ಯವಸ್ಥೆ ಕಲ್ಪಿಸಲಾಗಿದ್ದು, ಮುಂದಿನ ಯೋಜನೆಯಂತೆ ಹಸ್ತಪ್ರತಿ ಪ್ರಕಟನೆ, ಧ್ಯಾನಕೇಂದ್ರ, ಸಮುದಾಯ ಭವನ, ತ್ಯಾಗಿನಿವಾಸ ಮುಂತಾದ ಅಭಿವೃದ್ದಿ ಕಾರ್ಯಗಳು ಭಕ್ತರ ಮತ್ತು ಸರಕಾರದ ಸಹಕಾರದಿಂದ ನೆರವೇರಿಸಲಾಗುವುದು ಹಾಗೂ ಅಧೀನ ಕ್ಷೇತ್ರಗಳಾದ ಕುಂದಾದ್ರಿ, ವರಂಗ, ಹಟ್ಟಿಯಂಗಡಿಯಲ್ಲಿ ಅಭಿವೃದ್ಧಿ ಕಾರ್ಯಗಳು ಭಕ್ತರಿಗೆ ಸವಲತ್ತುಗಳನ್ನು ಕಲ್ಪಿಸಲಿದೆಯೆಂದರು. “ಹೊಂಬುಜ ಪುಣ್ಯಧಾಮ” ಎಂಬುದು ಸರ್ವಧರ್ಮೀಯರಿಗೆ ಅನ್ಯೋನ್ಯ ಸಂಬಂಧ ಬೆಳದಿರುವುದು ಸಂತಸವನ್ನುಂಟು ಮಾಡಿದೆ ಎಂಬ ವಿಚಾರವನ್ನು ಸ್ವಸ್ತಿಶ್ರೀಗಳು ಹೇಳಿ, ಸರ್ವರಿಗೂ ಶುಭ ಆಶೀರ್ವಾದ ಹರಸಿದರು.

ಹೊಂಬುಜದಲ್ಲಿ ಲಕ್ಷದೀಪ ವೈಭವ
ಅತಿಶಯ ಶ್ರೀಕ್ಷೇತ್ರ ಹೊಂಬುಜದಲ್ಲಿ ಭಗವಾನ ಶ್ರೀ ಪಾರ್ಶ್ವನಾಥ ಸ್ವಾಮಿ, ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ವಾರ್ಷಿಕ ಪೂರ್ವಪರಂಪರೆಯಂತೆ ಲಕ್ಷದೀಪೋತ್ಸವವು ಊರ-ಪರವೂರ ಭಕ್ತವೃಂದದವರ ಪಾಲ್ಗೊಳ್ಳುವಿಕೆಯಿಂದ ದೀಪ ಪ್ರಜ್ವಲನವು ವರ್ಣರಂಜಿತ, ಕಲಾವೈವಿಧ್ಯಮಯವಾಗಿ ಕಣ್ತುಂಬಿಕೊಳ್ಳುವಂತಾಯಿತು.

ನಗರದಲ್ಲಿ ಸಾಲಂಕೃತ ದೇವರ ಯಾತ್ರೆಯಲ್ಲಿ ಚೆಂಡೆ, ಡೋಲು, ಸೆಕ್ಸೋಪೋನ್, ವಾದ್ಯಗಳೊಂದಿಗೆ ಐಶ್ವರ್ಯ ಆನೆ, ಕುದುರೆಗಳು ಮನೋಹರವಾಗಿ ಹೆಜ್ಜೆ ಹಾಕಿದವು.

Malnad Times

Recent Posts

ಕರ್ನಾಟಕ SSLC ಪರೀಕ್ಷೆ 2024ರ ಫಲಿತಾಂಶ ನಾಳೆ ಪ್ರಕಟ

ಬೆಂಗಳೂರು : ಕರ್ನಾಟಕ ಸರ್ಕಾರ ಪಠ್ಯಕ್ರಮದ 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ನಾಳೆ ಮೇ 9ರಂದು ಪ್ರಕಟವಾಗಲಿದೆ. ವಿದ್ಯಾರ್ಥಿಗಳು…

2 days ago

ಮೇ 12 ರಂದು ನಾಗರಹಳ್ಳಿ ಶ್ರೀನಾಗೇಂದ್ರಸ್ವಾಮಿ ಪ್ರತಿಷ್ಠಾಪನಾ ವರ್ಧಂತ್ಯುತ್ಸವ, ಜಗದ್ಗುರು ಶಂಕರಾಚಾರ್ಯರ ಜಯಂತಿ

ರಿಪ್ಪನ್‌ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ನಾಗರಹಳ್ಳಿ ಶ್ರೀನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮೇ 12 ರಂದು ಭಾನುವಾರ ನಾಗೇಂದ್ರಸ್ವಾಮಿಯ…

2 days ago

CRIME NEWS |  ಹಾಡಹಗಲೇ ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಡಬ್ಬಲ್ ಮರ್ಡರ್ !

ಶಿವಮೊಗ್ಗ : ಹಾಡಹಗಲೇ ಚಪ್ಪಡಿ ಕಲ್ಲು ಮತ್ತು ಸೈಕಲ್ ಎತ್ತಿಹಾಕಿ ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಗರದ…

2 days ago

ಶಿವಮೊಗ್ಗ ಲೋಕಸಭಾ ಕ್ಷೇತ್ರ | ಹೊಸನಗರ ತಾಲ್ಲೂಕಿನಲ್ಲಿ ಶೇ. 83.64ರಷ್ಟು ಮತದಾನ, ಎಲ್ಲೆಲ್ಲಿ ಎಷ್ಟೆಷ್ಟು?

ಹೊಸನಗರ: ಮೇ 7ರಂದು ನಡೆದ 2024ನೇ ಲೋಕಸಭೆ ಚುನಾವಣೆಯಲ್ಲಿ ಹೊಸನಗರ ತಾಲೂಕಿನಲ್ಲಿ ಶೇ. 83.64ರಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ ಒಟ್ಟು…

2 days ago

ಅಗ್ನಿ ಅವಘಡ, ಮನೆ ಸುಟ್ಟು ಭಸ್ಮ ! ಲಕ್ಷಾಂತರ ರೂ. ನಷ್ಟ

ತೀರ್ಥಹಳ್ಳಿ : ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಪ್ಪಳಿ ಸಮೀಪದ ಗಿಣಿಯ ಎಂಬ ಗ್ರಾಮದಲ್ಲಿ ಗುರುಮೂರ್ತಿ ಭಟ್ ಎಂಬುವವರಿಗೆ…

2 days ago

ಭಾರತ ದೇಶದ ಸೈನಿಕರಿಗೆ ಕುಟುಂಬ ಸೇವೆಗಿಂತ ದೇಶ ಸೇವೆಯೇ ಮುಖ್ಯ ; ಕೃಷ್ಣಪೂಜಾರಿ ದಂಪತಿ

ಹೊಸನಗರ: ದೇಶ ಸೇವೆಯಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಕುಟುಂಬಕ್ಕಿಂತ ಭಾರತ ದೇಶದ ಸೈನಿಕರಿಗೆ ದೇಶವೇ ಮುಖ್ಯ ಹೊರತು…

3 days ago