Liquor | Election | Shivamogga | ಚುನಾವಣೆ ಘೋಷಣೆ ದಿನದಿಂದ ಇಲ್ಲಿವರೆಗೆ ವಶಪಡಿಸಿಕೊಂಡ ಅಕ್ರಮ ಮದ್ಯ ಹಾಗೂ ದಾಖಲಾದ ಕೇಸ್ ಎಷ್ಟು ಗೊತ್ತಾ ?

0 0


ಹೊಸನಗರ: ಅಧಿಕಾರಿಗಳ ಆದೇಶದಂತೆ ಖಚಿತ ವರ್ತಮಾನದ ಮೇರೆಗೆ ರಾಜ್ಯ ವಿಧಾನಸಭೆ ಚುನಾವಣೆ ಘೋಷಣೆಯಾದ ದಿನದಿಂದ ಇಂದಿನವರೆಗೆ ಅಬಕಾರಿ ಇಲಾಖೆ ತಾಲ್ಲೂಕಿನಲ್ಲಿ ದಾಳಿ ನಡೆಸಲಾಗಿದ್ದು ಅಕ್ರಮವಾಗಿ ಸಂಗ್ರಹಿಸಿರುವ 448 ಲೀಟರ್ ಮದ್ಯ 36.240 ಲಿ. ಬಿಯರ್‌ಗಳನ್ನು ವಶ ಪಡಿಸಿಕೊಳ್ಳಲಾಗಿದ್ದು ಅಕ್ರಮ ಮದ್ಯ ಸಾಗಿಸಲು ಬಳಸಿದ 5 ವಾಹನಗಳನ್ನು ವಶ ಪಡಿಸಿಕೊಳ್ಳಲಾಗಿದ್ದು ಸುಮಾರು ಅಂದಾಜು ಮೌಲ್ಯ 6 ಲಕ್ಷದ 95 ಸಾವಿರದ 253 ರೂಪಾಯಿಯಷ್ಟು ಹಣವನ್ನು ಸರ್ಕಾರದ ಬೊಕ್ಕಸಕ್ಕೆ ಬರುವಂತೆ ಮಾಡಿದ್ದಾರೆ.


181 ಕೇಸು ದಾಖಲು:

ನೀತಿ ಸಂಹಿತೆ ಜಾರಿಯಾದ ಮೇಲೆ ಅಕ್ರಮ ಮದ್ಯ ಮಾರಾಟ ಮತ್ತು ಸಾಗಣಿಕೆ ನಡೆಸುತ್ತಿದ್ದ ಖಚಿತ ಮಾಹಿತಿಯ ಮೇರೆಗೆ 181 ಪ್ರಕರಣಗಳಲ್ಲಿ 15 ಘೋರ ಪ್ರಕರಣಗಳು ಕಲಂ 15(ಎ) ಕೇಸು ದಾಖಲಿಸಲಾಗಿದ್ದು ಕಲಂ(ಎ) ಅಡಿಯಲ್ಲಿ 157ಪ್ರಕರಣಗಳನ್ನು ಹಾಗೂ ಎನ್‌ಡಿಆರ್‌ಎಸ್ ಕಾಯ್ದೆ ಅಡಿ 2ಪ್ರಕರಣಗಳು ಒಟ್ಟು 181 ಕೇಸುಗಳನ್ನು ದಾಖಲಿಸಿಕೊಳ್ಳಲಾಗಿದೆ.


ಈ ದಾಳಿಯ ಕಾರ್ಯ ಹಗಲು ರಾತ್ರಿ ಎನ್ನದೇ ಹೊಸನಗರ ತಾಲ್ಲೂಕಿನ ಗ್ರಾಮ-ಗ್ರಾಮಗಳಿಗೆ ಅಬಕಾರಿ ಇಲಾಖೆಯ ಸಿಬ್ಬಂದಿಗಳು ಸುತ್ತಿ ಈ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದೆ.

Leave A Reply

Your email address will not be published.

error: Content is protected !!