SSLC ಪರೀಕ್ಷಾ ಕೇಂದ್ರದಿಂದ ವಿಡಿಯೋ ಕಾಲ್’ನಲ್ಲಿಯೇ ಅಪ್ಪನ ಅಂತ್ಯಸಂಸ್ಕಾರ ನೋಡಿದ ಮಗಳು ; ಹೊಸನಗರದಲ್ಲೊಂದು ಹೃದಯಸ್ಪರ್ಶಿ ಘಟನೆ

0 0

ಹೊಸನಗರ : ರಾಜ್ಯಾದ್ಯಂತ ಎಸ್‌ಎಸ್‌ಎಲ್ಸಿ ಎಕ್ಸಾಂ ಶುರುವಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ಪ್ರಮುಖ ಘಟ್ಟ ಕೂಡ. ಈ ಸಮಯವನ್ನ ವಿದ್ಯಾರ್ಥಿಗಳು ಮಿಸ್ ಮಾಡಿಕೊಳ್ಳುವ ಹಾಗೆಯೇ ಇಲ್ಲ. ಆದರೆ ಕೆಲವೊಮ್ಮೆ ಪರಿಸ್ಥಿತಿ ಕೆಟ್ಟದಾದಾಗ ಆ ವರ್ಷ ಮಕ್ಕಳ ಭವಿಷ್ಯವೇ ಹಾಳಾದಂತೆ ಆಗುತ್ತದೆ. ಎಸ್‌ಎಸ್‌ಎಲ್ಸಿ ಎಕ್ಸಾಂ ಸಮಯದಲ್ಲಿ ಒಂದು ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ.

ಆರ್ಶೀಯಾ ಮನಿಯಾರ್ ಕೊಪ್ಪಳದ‌ ನಿವಾಸಿ. ಆದರೆ ಹೊಸನಗರ ತಾಲೂಕಿನ ಗೇರುಪುರದ ಹಿಂದುಳಿದ ವರ್ಗಗಳ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಎಸ್‌ಎಸ್‌ಎಲ್ಸಿ ಓದುತ್ತಿದ್ದಾರೆ. ಇಂದು ಇಂಗ್ಲೀಷ್ ಪರೀಕ್ಷೆ ಇತ್ತು. ಆದರೆ ಪರೀಕ್ಷೆ ಸಮಯದಲ್ಲಿಯೆ ನಿನ್ನೆ ರಾತ್ರಿ ಆಕೆಯ ತಂದೆ ಅಬಿದ್ ಪಾಷ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ವಸತಿ ಶಾಲೆಯ ಶಿಕ್ಷಕರು ಆರ್ಶೀಯಾಳನ್ನು ಹೊಸನಗರದಿಂದ ಸುಮಾರು 300 ಕಿ.ಮೀ ದೂರವಿರುವ ಕೊಪ್ಪಳಕ್ಕೆ‌ ಕರೆದೊಯ್ದರು. ತಂದೆಯ ದರ್ಶನ ಮಾಡಿಸಿ, ಬಳಿಕ ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಆದರೆ ಶವಸಂಸ್ಕಾರಕ್ಕೆ ಸಮಯವಾಗಿದ್ದ ಕಾರಣ, ಪರೀಕ್ಷೆ ಮುಗಿದ ಕೂಡಲೇ ವಿದ್ಯಾರ್ಥಿನಿಗೆ ವಿಡಿಯೋ ಕಾಲ್ ಮೂಲಕ ತಂದೆಯ ಅಂತ್ಯಸಂಸ್ಕಾರ ತೋರಿಸಲಾಗಿದೆ.

Leave A Reply

Your email address will not be published.

error: Content is protected !!