SSLC Result | ಶೇ. 90.70 ಫಲಿತಾಂಶದೊಂದಿಗೆ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದ ಹೊಸನಗರ ; ಅಭಿನಂದನೆ

0 0

ಹೊಸನಗರ : ಇಂದು ಪ್ರಕಟಗೊಂಡ 2023ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಹೊಸನಗರ ತಾಲ್ಲೂಕು ಶೇ. 90.70 ಫಲಿತಾಂಶ ದಾಖಲಿಸಿ ಶಿವಮೊಗ್ಗ ಜಿಲ್ಲೆಗೆ ಎರಡನೇ ಸ್ಥಾನ ಪಡೆದಿದೆ. ಜೊತೆಗೆ 12 ಶಾಲೆಗಳು 100% ಫಲಿತಾಂಶ ಪಡೆದು ತಾಲ್ಲೂಕಿನ ಕೀರ್ತಿಯನ್ನು ಹೆಚ್ಚಿಸಿವೆ.

ಇದಕ್ಕಾಗಿ ಶ್ರಮಿಸಿದ ತಾಲ್ಲೂಕಿನ ಎಲ್ಲಾ ಮುಖ್ಯಶಿಕ್ಷಕರಿಗೆ, ಸಹ ಶಿಕ್ಷಕರುಗಳಿಗೆ ಎಸ್ಡಿಎಂಸಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ, ಪೋಷಕರುಗಳಿಗೆ, ಮಕ್ಕಳಿಗೆ, ಎಲ್ಲಾ ಜನಪ್ರತಿನಿಧಿಗಳಿಗೆ, ಇಲಾಖೆಯ ಎಲ್ಲಾ ವರ್ಗದ ಅಧಿಕಾರಿ, ಸಿಬ್ಬಂದಿ ವರ್ಗದವರಿಗೆ ಸಹಕರಿಸಿದ ಎಲ್ಲಾ ಸಂಘಗಳ ಪದಾಧಿಕಾರಿಗಳಿಗೆ ಇಲಾಖೆಯ ಪರವಾಗಿ ಕ್ಷೇತ್ರ ಶಿಕ್ಞಣಾಧಿಕಾರಿ ಹೆಚ್.ಆರ್ ಕೃಷ್ಣಮೂರ್ತಿ ಅಭಿನಂದನೆ ಸಲ್ಲಿಸಿದ್ದಾರೆ.

Leave A Reply

Your email address will not be published.

error: Content is protected !!