VISL ಉಳಿಸಿ ಹೋರಾಟಕ್ಕೆ ಹೊಸನಗರ ಜೆಡಿಎಸ್ ಬೆಂಬಲ

0 0


ಹೊಸನಗರ/ರಿಪ್ಪನ್‌ಪೇಟೆ : ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಕಳೆದ 100 ವರ್ಷಗಳ ಹಿಂದೆ ಆರಂಭಿಸಲಾದ ವಿ.ಐ.ಎಸ್.ಎಲ್ ಕಾರ್ಖಾನೆಯನ್ನು ಮುಚ್ಚುವ ಕೇಂದ್ರ ಸರ್ಕಾರದ ನಿರ್ಧಾರದಿಂದಾಗಿ ಗುತ್ತಿಗೆ ಕಾರ್ಮಿಕರು ಹಾಗೂ ಕಾರ್ಮಿಕರು ಬೀದಿಗೆ ಬಿದ್ದಂತಾಗಿದೆ ಈ ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಧ್ಯ ಪ್ರವೇಶ ಮಾಡುವಂತೆ ಕಳೆದ 60 ದಿನಗಳಿಂದ ಹೋರಾಟ ನಡೆಸಲಾಗುತ್ತಿದ್ದು ಈಗ ಅದನ್ನು ಜಿಲ್ಲೆಯ ವಿವಿಧ ತಾಲ್ಲೂಕು, ಹೋಬಳಿ ಕೇಂದ್ರಕ್ಕೆ ವಿಸ್ತರಿಸಿ ಕಾರ್ಖಾನೆಯ ಗುತ್ತಿಗೆ ಕಾರ್ಮಿಕರನ್ನು ಮತ್ತು ವಿ.ಐ.ಎಸ್.ಎಲ್ ಉಳಿಸಿ ಹೋರಾಟ ನಡೆಸುತ್ತಿದ್ದು ಈ ಹೋರಾಟಕ್ಕೆ ಹೊಸನಗರ ತಾಲ್ಲೂಕು ಜೆಡಿಎಸ್ ಆಧ್ಯಕ್ಷ ಎನ್.ವರ್ತೇಶ ನೇತೃತ್ವದಲ್ಲಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಹೊಸನಗರ ತಾಲೂಕು ಕಚೇರಿ ಮುಂದೆ ಮತ್ತು ರಿಪ್ಪನ್‌ಪೇಟೆ ವಿನಾಯಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.


ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಕಲ್ಲೂರು ಈರಣ್ಣ, ಎಂ.ಜಿ.ಮಹೇಂದ್ರಗೌಡರು, ಗುತ್ತಿಗೆದಾರ ಕಾರ್ಮಿಕ ಕೆ.ಪಿ.ಮಂಜುನಾಥ, ಮಂಜುರಾಜ ಹಾಗೂ ಬಿ.ಎಸ್.ದಯಾನಂದ ಇನ್ನಿತರರು ಹಾಜರಿದ್ದರು.

Leave A Reply

Your email address will not be published.

error: Content is protected !!