ಗ್ರಾ.ಪಂ. ನಲ್ಲಿ ನಿಯಮ ಬಾಹಿರವಾಗಿ ಕಾಮಗಾರಿ ನಡೆಸಿ ಭ್ರಷ್ಟಾಚಾರ ನಡೆಸಿರುವ ಆರೋಪ ; ತನಿಖೆ ನಡೆಸಲು ಸಿಇಒಗೆ ದೂರು

0 35


ಹೊಸನಗರ: ತಾಲ್ಲೂಕಿನ ಹರಿದ್ರಾವತಿ ಗ್ರಾಮ ಪಂಚಾಯತಿಯಲ್ಲಿ ನಿಯಮ ಬಾಹಿರವಾಗಿ ಕಾಮಗಾರಿ ಭ್ರಷ್ಟಾಚಾರ ನಡೆದಿದೆ ತಕ್ಷಣ ತನಿಖೆ ನಡಿಸಿ ಎಂದು ಹರಿದ್ರಾವತಿ ಗ್ರಾಮ ಪಂಚಾಯತಿ ಸದಸ್ಯ ಅಶೋಕಗೌಡ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಿಲ್ಲಾ ಪಂಚಾಯಿತ್ ಶಿವಮೊಗ್ಗ ಇವರಿಗೆ ದೂರು ಸಲ್ಲಿಸಿದ್ದಾರೆ.


ದೂರಿನಲ್ಲಿ, 2017-18, 2018-19, 2019-20ನೇ ಸಾಲಿನಲ್ಲಿ ಅಲಗೇರಿಮಂಡ್ರಿ ಬಟ್ಟೆಮಲ್ಲಪ್ಪದಲ್ಲಿ ಸಂತೆ ಹರಾಜಿನಲ್ಲಿ 2,30,000 ರೂಪಾಯಿಗಳ ಅವ್ಯವಹಾರ ನಡೆದಿದ್ದು ಈ ಬಗ್ಗೆ ತನಿಖೆ ಮಾಡಬೇಕು, ಎನ್.ಆರ್.ಎಲ್.ಎಂ, ಕಟ್ಟಡದ ವಿನ್ಯಾಸ ಬದಲಾವಣೆ ಮತ್ತು ಬೇರೆ ಬೇರೆ ಯೋಜನೆಯಲ್ಲಿ ಹಣದ ದುರುಪಯೋಗದ ಬಗ್ಗೆ ತನಿಖೆ ನಡೆಸಿ ಬಾಪೂಜಿ ಸೇವಾ ಕೇಂದ್ರದ ಕಟ್ಟಡದಲ್ಲಿ ನಡೆದ ಅವ್ಯವಹಾರ ಬಗ್ಗೆ ತನಿಖೆ, ಹೊಸದಾಗಿ ನಿರ್ಮಾಣವಾದ ಪಂಚಾಯತಿ ಕಟ್ಟಡದ ನಿರ್ಮಾಣದಲ್ಲಿ ಯಾವ ಯಾವ ಅನುದಾನದಲ್ಲಿ ಎಷ್ಟು ಹಣ ಬಳಕೆಯಾಗಿದೆ ಎಂಬ ಬಗ್ಗೆ ತನಿಖೆ, ಗ್ರಾಮ ಪಂಚಾಯತಿ ಕಾಂಪೌಂಡ್‌ಗೆ ಅಳವಡಿಸಿದ ಗೇಟು ಕಳಪೆಯಾಗಿದ್ದು ಈ ಬಗ್ಗೆ ತನಿಖೆ, ಆಯಚಿ ಗ್ರಾಮದ ಶ್ರೀಧರ, ಸುಬ್ರಹ್ಮಣ್ಯ ಮತ್ತು ಕುಮಾರರವರ ಮನೆ ಹತ್ತಿರ ಕಾಲುವೆ ನಿರ್ಮಾಣದ ತನಿಖೆ, ಹರಿದ್ರಾವತಿ ಗ್ರಾಮ ಪಂಚಾಯತಿ ವ್ಯಾಪ್ತಿಯ 2021-22ರಲ್ಲಿ ನಡೆದ ಸರ್ಕಲ್‌ನಲ್ಲಿರುವ ಮಳಿಗೆ ಹರಾಜು ಪ್ರಕಿಯೆಯಲ್ಲಿ ನಿಯಮ-ಬಾಹಿರವಾಗಿ ಹರಾಜು ನಡೆದಿದೆ ಗ್ರಾಮ ಪಂಚಾಯತಿ ಕಟ್ಟಡಕ್ಕೆ 15ನೇ ಹಣಕಾಸಿನಲ್ಲಿ ಸೋಲಾರ್ ಟೆಂಡರ್ ಬಗ್ಗೆ ತನಿಖೆ ಗ್ರಾಮ ಪಂಚಾಯತಿ ಹೊಸ ಕಟ್ಟಡದ ಉದ್ಘಾಟನೆ 4 ವರ್ಷಗಳ ಹಿಂದೆ ನಡೆದಿದ್ದು ಆದರೆ ಈವರೆಗೆ ಕಟ್ಟಡದಲ್ಲಿ ಗ್ರಾಮ ಸಭೆಗಳನ್ನು ಹೊರತುಪಡಿಸಿ ಪಂಚಾಯತಿ ಕಛೇರಿಯನ್ನು ಹೊಸ ಕಟ್ಟಡಕ್ಕೆ ವರ್ಗಾಹಿಸಿಲ್ಲ ಏಕೆ? ತಂಬುವುದರ ಬಗ್ಗೆ ತನಿಖೆ, ಎನ್.ಆರ್.ಎಲ್.ಎಂ ಕಟ್ಟಡ ಮತ್ತು ರಾಜೀವ್ ಗಾಂಧಿ ಸೇವಾ ಕೇಂದ್ರಕ್ಕೆ ಆಕ್ರಮವಾಗಿ ಅರಣ್ಯಪ್ರದೇಶದಿಂದ ನಾಟಾ ಕಡಿತಲೆ ಮಾಡಿ ಪಂಚಾಯತಿಗೆ ನಾಟಾ ಒದಗಿಸಿದ್ದು ಅರಣ್ಯ ಸಂಚಾರಿದಳ 53 ಸಾವಿರ ರೂ. ದಂಡ ಹಾಕಿದ್ದು ಇದರ ಬಗ್ಗೆ ತನಿಖೆ, ಎನ್.ಆರ್ ಇ.ಜಿ ಯೋಜನೆ ಮತ್ತು ರಸ್ತೆ ಕೋಟೆಶನ್ ಕಾಲ್ ಮಾಡಿ ಯಾವುದೇ ಸಾಮಗ್ರಿಗಳು ಗುತ್ತಿಗೆದಾರರು ಪೂರೈಸದೇ ಈಗಾಗಲೇ ಸುಮಾರು 2ವರ್ಷಗಳ ಹಿಂದೆ ಅಳವಡಿಸಿದ ಆರ್.ಸಿ.ಸಿ ಪೈಪ್‌ಗಳಿಗೆ ಬಿಲ್ ಪಾವತಿ ಮಾಡಲು ಸಂಬಂಧಪಟ್ಟ ಇಂಜಿನೀಯರ್ ಮತ್ತು ಪಿಡಿಓರವರಿಗೆ ಕೆಲವು ಸದಸ್ಯರು ಒತ್ತಾಯಿಸುತ್ತಿದ್ದು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿರುತ್ತಾರೆ ಇದರ ಬಗ್ಗೆ ತನಿಖೆ, ಗ್ರಾಮ ಪಂಚಾಯತಿಯಲ್ಲಿ ಈ ವರ್ಷ ನಡೆದ ಗಾಂಧಿ ಜಯಂತಿಯಂದು ನಡೆದ ಬಹುಮಾನ ವಿತರಣೆಯ ಸಾಮಾಗ್ರಿಗಳ ಬಿಲ್ ಬಾಕಿ ಇದ್ದು ಯಾವ ಕಾರಣಕ್ಕಾಗಿ ಬಾಕಿ ಉಳಿಸಿಕೊಳ್ಳಲಾಗಿದೆ ಎಂಬುವುದರ ಬಗ್ಗೆ ತನಿಖೆ, ಗ್ರಾಮೀಣ ಕ್ರೀಡಾಕೂಟ ಪ್ರಶಸ್ತಿ ಪತ್ರವನ್ನು ಮತ್ತು ಪಾರಿತೋಷಕ ಖರೀದಿ ಮಾಡಿದ್ದು ಅದಕ್ಕೂ ಹಣ ಪಾವತಿಸಿಲ್ಲ ಮೂಕಾಂಬಿಕ ಹಾರ್ಡ್‌ವೇರ್ ಅಂಗಡಿಗೆ 59ಸಾವಿರ ಹಣ ಬಾಕಿ ಉಳಿಸಿಕೊಂಡಿದ್ದಾರೆ 800 ಶವ ಸಂಸ್ಕಾರಕ್ಕೆ ಕೊಂಡ 200 ರೂಪಾಯಿಯ ಹೂವಿನಹಾರ ಹಣ ಇನ್ನೂ ಬಾಕಿ ಉಳಿಸಿಕೊಂಡಿದ್ದು 2022-23ನೇ ಸಾಲಿನ 15ನೇ ಹಣಕಾಸು ಕ್ರಿಯಾಯೋಜನೆಯನ್ನು ತಯಾರಿಸುವಾಗ ಸದಸ್ಯರುಗಳಾದ ನಮಗೆ ನಮ್ಮ ಗಮನಕ್ಕೆ ತರದೇ ಕ್ರಿಯಾ ಯೋಜನೆ ತಯಾರಿಸಿದ್ದು ನಂತರ ಪರಿಶೀಲಿಸಿದಾಗ ಯಾವ ಕಾಮಗಾರಿಗಳು ವಾರ್ಡ್ ಸಭೆ ಅಥವಾ ಗ್ರಾಮ ಸಭೆಯಲ್ಲಿ ಆಯ್ಕೆಯಾದ ಕಾಮಗಾರಿಗಳಾಗಿರುವುದಿಲ್ಲ ಇಂಥಹ ಹತ್ತು ಹಲವರು ಸಮಸ್ಯೆಗಳು ನಮ್ಮ ಕಣ್ಣ ಮುಂದೆ ಕಾಣ ಸಿಗುತ್ತಿದ್ದು ಅದು ಅಲ್ಲದೇ ಗ್ರಾಮ ಪಂಚಾಯತಿಯ ಸದಸ್ಯರೇ ಬೇನಾಮಿ ಗುತ್ತಿಗೆದಾರರಾಗಿ ಇವರೇ ಕಾಮಗಾರಿ ನಿರ್ವಹಿಸುತ್ತಿದ್ದು ಸದರಿಯವರ ಸದಸ್ಯತ್ವ ರದ್ದು ಮಾಡಬೇಕು ತಕ್ಷಣ ತನಿಖೆ ನಡೆಸಬೇಕು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕೆಂದು ಮನವಿ ಪತ್ರದಲ್ಲಿ ಮನವಿ ಮಾಡಿದ್ದಾರೆ.

Leave A Reply

Your email address will not be published.

error: Content is protected !!