ತಾಳ್ಮೆ, ಓದುವ ಹವ್ಯಾಸ ಬೆಳೆಸಿಕೊಂಡರೆ ಜೀವನದಲ್ಲಿ ಸುಖ ಶಾಂತಿಯಿಂದ ಜೀವನ ಸಾಗಿಸಬಹುದು ; ಐರಿನ್ ಡಿಸಿಲ್ವಾ

0 36


ಹೊಸನಗರ: ವಿದ್ಯಾರ್ಥಿಗಳಲ್ಲಿ ತಾಳ್ಮೆ ಓದುವ ಹವ್ಯಾಸ ಬೆಳೆಸಿಕೊಂಡರೆ ಮುಂದಿನ ಜೀವನದಲ್ಲಿ ಶ್ರೇಯಸ್ಸು ಸುಖ-ಶಾಂತಿ ನೆಮ್ಮದಿಯಿಂದ ಜೀವನ ಸಾಗಿಸಬಹುದು ಎಂದು ಹೋಲಿ ರಿಡೀಮರ್ ಶಾಲೆಯ ಪ್ರಾಂಶುಪಾಲರಾದ ಐರಿನ್ ಡಿಸಿಲ್ವಾರವರು ಹೇಳಿದರು.


ಹೊಸನಗರದ ಖಾಸಗಿ ಶಾಲೆಯಾದ ಹೋಲಿ ರೆಡೀಮರ್ ಶಾಲೆಯ ಆವರಣದಲ್ಲಿ ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ 14 ವಿದ್ಯಾರ್ಥಿಗಳಿಗೆ ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ 17 ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿದ್ದು ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಮಾತನಾಡಿದರು.


ಯಾವುದೇ ವಿದ್ಯಾರ್ಥಿಗಳಲ್ಲಿ ತಾಳ್ಮೆ ಮುಖ್ಯವಾಗಿರುತ್ತದೆ ಮನುಷ್ಯರಲ್ಲಿ ತಾಳ್ಮೆ ಇದ್ದರೇ ಎಂತಹ ಕಠಿಣ ಪರಿಸ್ಥಿತಿಯನ್ನಾದರೂ ಎದುರಿಸಬಹುದು ತಾಳ್ಮೆ ಕಳೆದುಕೊಂಡರೆ ಜೀವನ ಪೂರ್ಣ ಸುಖದ ಜೊತೆಗೆ ದುಃಖವನ್ನು ಎದುರಿಸುತ್ತಿರಬೇಕಾಗುತ್ತದೆ. ಪ್ರತಿಯೊಬ್ಬರಿಗೂ ತಾಳ್ಮೆ ಮುಖ್ಯ ಅದೇ ರೀತಿ ವಿದ್ಯಾರ್ಥಿಗಳು ಓದು ಎಷ್ಟು ಮುಖ್ಯವೂ ತಾಳ್ಮೆಯು ಅಷ್ಟೆ ಮುಖ್ಯವಾಗಿರುತ್ತದೆ ಓದು ಮತ್ತು ತಾಳ್ಮೆ ಜೀವನದ ಎರಡು ಮುಖ್ಯ ವಿಷಯವಾಗಿದ್ದು ಎರಡನ್ನು ಜೀವನದಲ್ಲಿ ಮೈಗೂಡಿಸಿಕೊಂಡರೆ ಒಳ್ಳೆಯದು ತಾಳ್ಮೆ ವಿದ್ಯಾರ್ಥಿಗಳ ಜೀವನದಿಂದಲೇ ಪ್ರಾರಂಭಿಸಿಕೊಳ್ಳುವುದರ ಜೊತೆಗೆ ಅದಕ್ಕೆ ಪೂರಕವಾಗಿ ಓದಿನ ಕಡೆಗೆ ಹೆಚ್ಚು ಮಹಾತ್ಮ ನೀಡಬೇಕು ನೀವು ಹಾಕಿಕೊಂಡ ಗುರಿ ಮುಟಲು ಸಾಧ್ಯ ಎಂದು ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಸುಖಕರವಾಗಿರಲೀ ಎಂದು ಹಾರೈಸಿದರು.


ಮುಖ್ಯ ಅತಿಥಿಯಾಗಿ ಆಗಮಿಸಿದ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತಿ ಸದಸ್ಯ ಕಾಲಸಸಿ ಸತೀಶ್‌ರವರು ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯ ಅವರವರ ಕೈಯಲ್ಲಿ ಇರುತ್ತದೆ ವಿದ್ಯಾರ್ಥಿಗಳು ಬರೀ ಓದುತ್ತಿದ್ದರೇ ಸಾಲದು ಓದಿನ ಜೊತೆಗೆ ರಾಜ್ಯ-ದೇಶದಲ್ಲಿ ಆಗುತ್ತಿರುವ ಆಗು-ಹೋಗುಗಳನ್ನು ತಿಳಿದುಕೊಳ್ಳುತ್ತಿರಬೇಕು ಜೀವನದಲ್ಲಿ ಪುಸ್ತಕ ಓದುವುದು ಎಷ್ಟು ಮುಖ್ಯವೂ ಅಷ್ಟೆ ಮುಖ್ಯ ಜೀವನದಲ್ಲಿ ಜೀವನ ಸಾಗಿಸುವುದು ಅಷ್ಟೇ ಮುಖ್ಯವಾಗಿರುತ್ತದೆ ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದಿರುವುದಕ್ಕೆ ಸಂತೋಷ ಪಡುವುದರ ಜೊತೆಗೆ ನೀವು ಮುಂದೆ ಉತ್ತಮ ಸರ್ಕಾರಿ ಕೆಲಸವನ್ನು ಪಡೆದುಕೊಂಡು ನೀವು ಕುಳಿತಿರುವ ಕುರ್ಚಿಯಿಂದ ಬಡವರ ನಿರ್ಗತಿಕರ ವೃದ್ಧರ ಕೆಲಸ ಮಾಡಕೊಟ್ಟರೆ ನೀವು ಓದಿರುವುದಕ್ಕೆ ಸಾರ್ಥಕವಾಗುತ್ತದೆ ನೀವು ಓದಿನ ಜೊತೆಗೆ ಬಡವರಿಗೆ ನಿರ್ಗತಿಕರಿಗೆ ಹಾಗೂ ವೃದ್ಧರಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿರಿ ಎಂದರು.


ಈ ಸನ್ಮಾನ ಕಾರ್ಯಕ್ರಮದಲ್ಲಿ ಹೋಲಿ ರೆಡೀಮರ್ ಶಾಲೆಯ ಸಂಚಾಲಕಿ ರುಫೀನ ಡಿಸೋಜ ಕಾಲೇಜಿನ ಎಲ್ಲಾ ಉಪನ್ಯಾಸಕ ವೃಂದ, ಪ್ರೌಢ ಶಾಲೆಯ ಎಲ್ಲಾ ಶಿಕ್ಷಕ ವೃಂದ ಮತ್ತು ಆಡಳಿತ ಮಂಡಳಿಯ ಎಲ್ಲ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!