ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಹಬ್ಬವೂ ಹೌದು, ಯುದ್ದವೂ ಹೌದು ; ಶಾಸಕ ಹರತಾಳು ಹಾಲಪ್ಪ

0 35


ಹೊಸನಗರ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಎನ್ನುವುದು ಒಂದು ಹಬ್ಬ. ಅದನ್ನು ಸಂಭ್ರಮದಿಂದ ಆಚರಿಸಬೇಕು ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.


ಅವರು ಪಟ್ಟಣದಲ್ಲಿ ಶನಿವಾರ ಪಕ್ಷದ ನೂತನ ಚುನಾವಣಾ ಕಛೇರಿಯನ್ನು ಉದ್ಘಾಟಿಸಿದ ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ನೂತನ ಕಛೇರಿಯು ಪಕ್ಷದ ಕಾರ್ಯಕರ್ತರಿಗೆ ಹೊಸ ಹುಮ್ಮಸ್ಸು ನೀಡಲಿದೆ. ಬಿಜೆಪಿಯು ಚುನಾವಣೆಯನ್ನು ಯುದ್ದದ ಮಾದರಿಯಲ್ಲಿ ಸ್ವೀಕಾರ ಮಾಡಿದೆ. ವಾರ್ ರೂಮ್‌ಗಳನ್ನು ತೆರೆದು ದಿನದ 24 ಗಂಟೆಗಳ ಕಾಲವೂ ಬೆಂಗಳೂರಿನಲ್ಲಿ ಪಕ್ಷದ ಕಛೇರಿ ಕಾರ್ಯನಿರ್ವಹಿಸುತ್ತಿದೆ ಎಂದರು.


ಜಿಲ್ಲಾ ರಾಜಕಾರಣ ಹಾಗೂ ಸಾಗರ ಕ್ಷೇತ್ರದಲ್ಲಿ ಇನ್ನು ಮೂರ್ನಾಲ್ಕು ದಿನಗಳಲ್ಲಿ ಯಾರೂ ಊಹಿಸದ ಬದಲಾವಣೆಗಳು ನಡೆಯಲಿವೆ. ಅಭ್ಯರ್ಥಿಗೆ ಕಾರಣವಾಗುವಂತೆ ರಾಜ್ಯ, ಜಿಲ್ಲಾ, ತಾಲೂಕು ಮಟ್ಟದಲ್ಲಿಯೂ ಒಂದಿಷ್ಟು ಒಳ್ಳೆಯ ಬದಲಾವಣೆಗಳು ಆಗಲಿದೆ. ಪಕ್ಷದ ಸೂಚನೆಗಳನ್ನು ಬೂತ್ ಸಮಿತಿಯ ಕಾರ್ಯಕರ್ತರೂ ಈ ಬದಲಾವಣೆಗಳಿಗೆ ಸಿದ್ದರಿರಬೇಕು ಎಂದರು.


ರಾಜಕೀಯದಲ್ಲಿ ಪರ ವಿರೋಧ ಸಹಜ. ಚುನಾವಣೆಯನ್ನು ಯುದ್ಧ ಎಂದೂ ಭಾವಿಸುತ್ತಾರೆ. ಯುದ್ಧದಲ್ಲಿ ಗೆಲ್ಲುವುದೇ ಮುಖ್ಯ. ಧಕ್ಷತೆ, ಚಾಕಚಕ್ಯತೆಯಿಂದ ಗೆಲ್ಲಲು ಸಾಧ್ಯ. ಯುದ್ದ ಕಾಲದಲ್ಲಿ ಯಾರಿಂದ ಹೇಗೆ ಸಹಾಯ ಸಿಕ್ಕರೂ ಸ್ವೀಕರಿಸಬಹುದು. ಮಾನಾಪಮಾನಗಳು ಆ ವೇಳೆ ನಗಣ್ಯ. ಇದನ್ನು ಭಗವಾನ್ ಶ್ರೀಕೃಷ್ಣನೇ ಹೇಳಿದ್ದಾನೆ. ಎಲ್ಲವನ್ನೂ ಧನಾತ್ಮಕವಾಗಿಯೇ ಸ್ವೀಕಾರ ಮಾಡಬೇಕಿದೆ. ಪಕ್ಷದ ಕಾರ‍್ಯಕರ್ತರು ಸಂಘಟನಾತ್ಮಕವಾಗಿ ಹೋರಾಡಬೇಕಿದೆ. ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೇರುವುದು ನಿಶ್ಚಿತ ಎಂದರು.


ಕಂಸ ಎಂದವರೇ ಭೀಷ್ಮ ಎನ್ನತೊಡಗಿದ್ದಾರೆ:
ಅಂದು ಕಂಸ ಎಂದು ಹೀಯಾಳಿಸಿದ್ದ ಹಿರಿಯ ರಾಜಕಾರಣಿಯನ್ನು ಇಂದು ಭೀಷ್ಮಎಂದು ಹೊಗಳಿಕೊಂಡು ಚುನಾವಣಾ ಪ್ರಚಾರಕ್ಕೆ ಇಳಿದಿದ್ದಾರೆ. ಆದರೆ ಭೀಷ್ಮ ಜೊತೆಗಿದ್ದರೂ ಕೌರವರು ಸೋತರು. ಭೀಷ್ಮ ಇದ್ದಲ್ಲಿ ಸೋಲು ನಿಶ್ಚಿತ ಎಂದು ಪರೋಕ್ಷವಾಗಿ ಬೇಳೂರು ಗೋಪಾಲಕೃಷ್ಣ ಅವರನ್ನು ಟೀಕಿಸಿದರು.

ಬಿಜೆಪಿ ತಾಲೂಕು ಅಧ್ಯಕ್ಷ ಗಣಪತಿ ಬಿಳಗೋಡು, ಪ್ರಾಸ್ತಾವಿಕ ಮಾತನಾಡಿದರು. ಮಾಜಿ ಶಾಸಕ ಬಿ.ಸ್ವಾಮಿರಾವ್, ಪಕ್ಷದ ತಾಲೂಕು ಚುನಾವಣಾ ನಿರ್ವಾಹಕ ಆರ್.ಟಿ.ಗೋಪಾಲ್, ಪ್ರಮುಖರಾದ ಸಾಗರ ಪ್ರಶಾಂತ್, ಅಂಬೇಡ್ಕರ್ ನಿಗಮದ ನಿರ್ದೇಶಕ ಎನ್.ಆರ್.ದೇವಾನಂದ, ಹಿರಿಯರಾದ ಉಮೇಶ ಕಂಚುಗಾರ್, ಶ್ರೀಧರ ಉಡುಪ, ಎ.ವಿ.ಮಲ್ಲಿಕಾರ್ಜುನ್, ಮನೋಧರ, ಗುಲಾಬಿ ಮರಿಯಪ್ಪ, ಶಿವಾನಂದ, ಗಣೇಶ್, ಅಭಿಲಾಷ್, ರಾಜೇಶ್ ಕೀಳಂಬಿ, ಟೌನ್ ಘಟಕದ ಅಧ್ಯಕ್ಷ ಶಿವಕುಮಾರ್ ಮಂಜುನಾಥ್ ಹೆಚ್.ಎಸ್, ಮಂಡಾಣಿ ಮೋಹನ್ ಮತ್ತಿತರರು ಹಾಜರಿದ್ದರು.

Leave A Reply

Your email address will not be published.

error: Content is protected !!