ಮದುವೆ ಮನೆಯಂತೆ ಸಿಂಗಾರಗೊಂಡ ಮತಗಟ್ಟೆ ; ಎಲ್ಲಿದು ?

0 106

ಹೊಸನಗರ : ಮಲೆನಾಡಿನಲ್ಲಿ ಮದುವೆ ಮನೆ ಎಷ್ಟೋಂದು ತಳಿರು ತೋರಣಗಳಿಂದ ಅಲಂಕಾರಿಸಿರುತ್ತಾರೆ ನೋಡಿದ್ದಿರಾ,, ಅಲ್ವಾ, ಹಾಗೆ ಇಲ್ಲಿ ಒಂದು ಶಾಲೆಗೆ ಮದುವೆ ಮನೆ ಹಾಗೆಯೇ ಸಿಂಗಾರ ಮಾಡಲಾಗಿದೆ. ಅದು ಯಾಕೆ ಅಂದ್ರೆ ಇಲ್ಲಿದೆ ನೋಡಿ ವಿವರ.
ಕರ್ನಾಟಕ ವಿಧಾನಸಭಾ ಚುನಾವಣೆಗೆ ಹೊಸನಗರ ತಾಲೂಕಿನ ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ 242 ಕ್ಕೆ ಅಲಂಕಾರಿಸಲಾಗಿದೆ.


ಸ್ಥಳಿಯ ಆಡಳಿತದಿಂದ ಮಲೆನಾಡಿನ ಭಾಗದಲ್ಲಿ ಶುಭ ಸಮಾರಂಭಗಳಲ್ಲಿ ಮನೆಯ ಅಂಗಳದಲ್ಲಿ ಮಾಡಲಾಗುವ ತೆಂಗಿನ ಗರಿ, ಮಾವಿನ ಎಲೆಗಳಿಂದ ತಳಿರು ತೋರಣ, ಮಾವಿನ ಕಾಯಿ, ಬಾಳೆಯಿಂದ ಮೊದಲಾದವುಗಳಿಂದ ಶೃಂಗಾರಗೊಳಿಸಲಾಗಿದೆ‌.
 
ಹೌದು, ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿವತಿಯಿಂದ ಕೆಲ ಊರಿಗಳಲ್ಲಿ ಊರಿನ ಸಂಪ್ರದಾಯದ ಪ್ರಕಾರ ಮತಗಟ್ಟೆ ನಿರ್ಮಾಣ ಹಾಗೂ ಸಖಿ ಮತಗಟ್ಟೆ ನಿರ್ಮಾಣ ಮಾಡಲಾಗಿದೆ, ಇದೇ ರೀತಿಯಾಗಿ ಹೊಸನಗರ ತಾಲೂಕಿನ ನಿಟ್ಟೂರು ಗ್ರಾಮ ಪಂಚಾಯತಿಯ ಹಿರಿಯ ಪ್ರಾಥಮಿಕ ಶಾಲೆಯ 242ನೇ ಮತಗಟ್ಟೆಯಲ್ಲಿ ಶಿವಮೊಗ್ಗ ಜಿಲ್ಲೆಯ ಮಲೆನಾಡಿನ ಸಂಪ್ರದಾಯದ ಮತಗಟ್ಟೆ ನಿರ್ಮಾಣ ಮಾಡಲಾಗಿದೆ.

ಮಲೆನಾಡಿನ ಭಾಗದಲ್ಲಿ ಶುಭ ಸಮಾರಂಭಗಳಲ್ಲಿ ಮನೆಯ ಅಂಗಳದಲ್ಲಿ ಮಾಡಲಾಗುವ ಚಪ್ಪರ, ತೆಂಗಿನ ಗರಿ ಮಾವಿನ ಎಲೆಗಳಿಂದ ತೋರಣ, ಮಾವಿನ ಕಾಯಿ, ಬಾಳೆ ಮರ ಮೊದಲಾದವುಗಳಿಂದ ಅಲಂಕಾರ ಮಾಡಲಾಗಿದೆ.ಒಟ್ಟಿನಲ್ಲಿ ಜಿಲ್ಲಾಡಳಿತ ಹಾಗೆ ಸ್ಥಳೀಯ ಆಡಳಿತದ ಈ ಒಂದು ವಾತಾವರಣ ಸೃಷ್ಟಿ ಮಾಡಿರುವುದಕ್ಕೆ ಮಲೆನಾಡಿನ ಭಾಗದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿರುವುದೇಂತೂ ನಿಜ,

Leave A Reply

Your email address will not be published.

error: Content is protected !!