ಲಿಂಗಾಯಿತ ಸಮುದಾಯದ ಬಗ್ಗೆ ಮಾತನಾಡುವ ನೈತಿಕತೆ ಸಿ.ಟಿ.ರವಿಗಿಲ್ಲ ; ಚಂದ್ರಮೌಳಿಗೌಡ

0 39


ಹೊಸನಗರ: ರಾಜ್ಯದಲ್ಲಿ ಸರ್ಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರ ಲಿಂಗಾಯಿತ ಶಾಸಕರಿಂದ ಹಾಗೂ ಸಚಿವರಿಂದ ಮತ್ತು ಲಿಂಗಾಯಿತ ಮತದಿಂದ ಆಡಳಿತ ನಡೆಸುತ್ತಿದೆ ಲಿಂಗಾಯಿತರನ್ನು ಬಿಜೆಪಿ ಪಕ್ಷ ದೂರ ಮಾಡಿಕೊಂಡರೇ ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹೇಳ ಹೆಸರಿಲ್ಲದಂತೆ ಹೋಗುತ್ತದೆ ಎಂದು ವೀರಶೈವ ಮಹಾಸಭಾ ಸಂಘದ ಪ್ರಮುಖ ಮುಖಂಡ ಚಂದ್ರಮೌಳಿ ಗೌಡ ಹೇಳಿದ್ದಾರೆ.


ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಮುಂದೆ ಬರುವ ವಿದಾನಸಭೆಯ ಚುನಾವಣೆಯಲ್ಲಿ ಲಿಂಗಾಯಿತ ಸಮುದಾಯಕ್ಕೆ ಪ್ರಾಮುಖ್ಯತೆ ನೀಡುವ ಅಗತ್ಯವಿಲ್ಲ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಯವರು ನೀಡಿರುವ ಹೇಳಿಕೆಯನ್ನು ತಕ್ಷಣ ಹಿಂಪಡೆಯಬೇಕು ಇಲ್ಲವಾದರೆ ತಾಲ್ಲೂಕಿನಾದ್ಯಂತ ಪ್ರತಿಭಟನೆ ನಡೆಸುವುದಾಗಿ ಈ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಅಧಿಕಾರ ನಡೆಸುವ ಸಂದರ್ಭದಲ್ಲಿ ವೀರಶೈವ ಜನಾಂಗವನ್ನು ಬಳಸಿಕೊಂಡು ಅಧಿಕಾರ ನಡೆಸಿದ್ದು ಈಗ ಬಿಜೆಪಿ ಪಕ್ಷಕ್ಕೆ ಲಿಂಗಾಯಿತರ ಅವಶ್ಯಕತೆಯಿಲ್ಲ ಎಂದು ಹೇಳುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.


12ನೇ ಶತಮಾನದಲ್ಲಿ ಬಸವಣ್ಣನಂತವರ ಬಸವಾದಿ ಶರಣರ ಕಾಲದಲ್ಲಿಯೇ ಲಿಂಗಾಯಿತರಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿದ್ದು ಸಿ.ಟಿ.ರವಿಯಂಥವರು ನಮ್ಮ ಜನಾಂಗಕ್ಕೆ ಪ್ರಾಮುಖ್ಯತೆ ನೀಡುವ ಅಗತ್ಯವಿಲ್ಲ ಸಿ.ಟಿ.ರವಿಯವರ ಮಾತನ್ನು ನಮ್ಮ ಲಿಂಗಾಯಿತ ಜನಾಂಗದವರು ಅರಿತುಕೊಂಡು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸಿದರೆ ಮಾತ್ರ ನಮ್ಮ ಲಿಂಗಾಯಿತ ಜನಾಂಗ ಕರ್ನಾಟಕದಲ್ಲಿ ಪ್ರಮುಖ ಜನಾಂಗದವರು ಇದ್ದಾರೆ ಎಂದು ಬಿಜೆಪಿ ಪಕ್ಷಕ್ಕೆ ಸಿ.ಟಿ.ರವಿಯವರಿಗೆ ಗೊತ್ತಾಗುವಂತೆ ಮಾಡಬೇಕಾಗಿದ್ದು ಲಿಂಗಾಯಿತ ಜನಾಂಗ ಎಚ್ಚೆತ್ತುಕೊಂಡು ಬಿಜೆಪಿ ಪಕ್ಷವನ್ನು ದೂಳಿಪಟ ಮಾಡಲು ಮುಂದಾಗಲಿ ಎಂದರು.

Leave A Reply

Your email address will not be published.

error: Content is protected !!