ಸಾಹಿತ್ಯ ಕ್ಷೇತ್ರದಲ್ಲಿ ಮಹಿಳಾ ಪ್ರಾಬಲ್ಯ ಹೆಚ್ಚಬೇಕಿದೆ ; ಡಾ. ಜಿ.ಎಸ್ ಸರೋಜ

0 31


ಹೊಸನಗರ: ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರ ಪ್ರಾಬಲ್ಯ ಇನ್ನಷ್ಟು ಹೆಚ್ಚಬೇಕು ಎಂದು ಅಖಿಲ ಭಾರತ ಕವಯಿತ್ರಿ ಸಂಘದ ಅಧ್ಯಕ್ಷೆ ಡಾ.ಜಿ.ಎಸ್.ಸರೋಜ ಅಭಿಪ್ರಾಯಪಟ್ಟರು.


ತಾಲೂಕಿನಕಾರಣಗಿರಿ ಸಿದ್ಧಿವಿನಾಯಕ ಸಭಾಭವನದಲ್ಲಿ ಇತ್ತೀಚೆಗೆ ಗ್ರಾಮ ಭಾರತಿ ಟ್ರಸ್ಟ್, ರಾಷ್ಟ್ರೋತ್ಥಾನ ಬಳಗದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಸಾಹಿತ್ಯ ಸಂಸ್ಕೃತಿಉತ್ಸವದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಪುರಾತನ ಕಾಲದಲ್ಲಿ ದೇವಸ್ಥಾನಗಳು ಕಲೆ, ಸಾಂಸ್ಕೃತಿಕ, ಸಾಹಿತ್ಯ ಕ್ಷೇತ್ರಕ್ಕೆ ಆಶ್ರಯ ನೀಡುತ್ತಿದ್ದವು. ಇದೇ ಮಾದರಿಯಲ್ಲಿ ಇಂದೂ ಇಂತಹ ಚಟುವಟಿಕೆಗಳು ದೇವಸ್ಥಾನಗಳಲ್ಲಿ ಹೆಚ್ಚಬೇಕು. ಈ ನಿಟ್ಟಿನಲ್ಲಿಅಗತ್ಯ ಪ್ರೋತ್ಸಾಹದ ಅಗತ್ಯ ಕಂಡುಬಂದಿದೆ ಎಂದ ಅವರು ಲೇಖಕಿ ಶಾರದಾ ವಿ ಮೂರ್ತಿ ಅವರ ಸಾಹಿತ್ಯಾವಲೋಕನದ ಕುರಿತು ಮಾತನಾಡಿದರು.


ಉತ್ಸವವನ್ನು ವಿಧುಷಿ ಶೀಲಾ ರಾಮನ್ ಉದ್ಘಾಟಿಸಿದರು. ವಸುಧಾಚೈತನ್ಯ, ಡಾ.ಅಂಜಲಿ ಅಶ್ವಿನಿಕುಮಾರ್ ಮಾತನಾಡಿದರು. ಹುಬ್ಬಳ್ಳಿಯ ಕೀರ್ತನಕಾರರಾದ ನಿವಣೆ ನಾಗರತ್ನ ವಿ ಜೋಷಿ ಹಾಗೂ ಸಾಹಿತಿ ಶಾರದಾ ವಿ ಮೂರ್ತಿಅವರನ್ನು ಸನ್ಮಾನಿಸಲಾಯಿತು.

ಕಲಾದರ್ಶನ ಮಾಸಪತ್ರಿಕೆಯ ಪ್ರಧಾನ ಸಂಪಾದಕ ಹಾದಿಗಲ್ಲು ಲಕ್ಷ್ಮಿನಾರಾಯಣ ಅವರು ಅಭಿನಂದನಾ ಭಾಷಣ ಮಾಡಿದರು.

ಹನಿಯ ರವಿ ಪ್ರಾಸ್ತಾವಿಕ ಮಾತನಾಡಿದರು. ಆರತಿ ಮಹೇಶ್ ಸ್ವಾಗತಿಸಿದರು. ಗಾಯತ್ರಿ ಅರುಣ್ ನಿರೂಪಿಸಿ, ಮೇಧಾ ವಂದಿಸಿದರು. ಗ್ರಾಮ ಭಾರತೀ ಟ್ರಸ್ಟ್ ಅಧ್ಯಕ್ಷ ನೆಲ್ಲುಂಡೆ ನಾಗೇಂದ್ರರಾವ್ ಹಾಗೂ ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ನಳಿನಚಂದ್ರ ಉಪಸ್ಥಿತರಿದ್ದರು.


ಇದೇ ವೇಳೆ ನಡೆದ ಮಾತೃಸಂಗಮ ಕಾರ‍್ಯಕ್ರಮದಲ್ಲಿ ಕುಟುಂಬ ಪ್ರಭೋಧನದ ಅಖಿಲ ಭಾರತ ಪ್ರಮುಖರಾಗಿದ್ದ ಕಜಂಪಾಡಿ ಸುಬ್ರಮಣ್ಯ ಭಟ್ ವಿಶೇಷ ಉಪನ್ಯಾಸ ನೀಡಿದರು. ನೃತ್ಯ, ಸಂಗೀತ, ಯಕ್ಷಗಾನ ಪ್ರದರ್ಶನ ಮೊದಲಾದ ಸಾಂಸ್ಕೃತಿಕ ಕಾರ‍್ಯಕ್ರಮಗಳು ಆಕರ್ಷಿಸಿದವು.

Leave A Reply

Your email address will not be published.

error: Content is protected !!