Stone Mining | ಹೊಸನಗರದ ಕುಂಭತ್ತಿ ಗ್ರಾಮದಲ್ಲಿ ಕಲ್ಲುಗಣಿಗಾರಿಕೆಯಿಂದ ಮನೆಗಳಿಗೆ ಹಾನಿ, ತಕ್ಷಣ ಕಲ್ಲುಗಣಿಗಾರಿಕೆ ನಿಲ್ಲಿಸುವಂತೆ ಗ್ರಾಮಸ್ಥರ ಮನವಿ

0 79


ಹೊಸನಗರ: ತಾಲ್ಲೂಕಿನ ಕುಂಭತ್ತಿ ಗ್ರಾಮದಲ್ಲಿ ಕಲ್ಲುಗಣಿಗಾರಿಕೆ ನಡೆಯುತ್ತಿದ್ದು ಏಪ್ರಿಲ್ 4 ರಂದು ಸರ್ಕಾರದ ಆದೇಶವನ್ನು ದಿಕ್ಕರಿಸಿ ದೊಡ್ಡ-ದೊಡ್ಡ ಕುಣಿಗಳನ್ನು ತೆಗೆದು ಬ್ಲಾಸ್ಟ್ ಮಾಡಲಾಗಿದ್ದು ಈ ಬ್ಲಾಸ್ಟ್ ನಿಂದ ಅಕ್ಕ-ಪಕ್ಕದ ಸುಮಾರು 30-40 ಮನೆಗಳಿಗೆ ಹಾನಿಯಾಗಿದೆ ಎಂದು ಅಲ್ಲಿನ ಗ್ರಾಮಸ್ಥರು ರಾಮಚಂದ್ರಪುರ ಗ್ರಾಮ ಪಂಚಾಯತಿ ಅಧ್ಯಕ್ಷೆ ರುಕ್ಮೀಣಿ ಕೃಷ್ಣಮೂರ್ತಿಯವರ ನೇತೃತ್ವದಲ್ಲಿ ಹೊಸನಗರದ ತಹಶೀಲ್ದಾರ್ ಧರ್ಮಂತ ಗಂಗಾರಾಮ್ ಕೋರಿಯವರಿಗೆ, ಇನ್ಸ್ಪೇಕ್ಟರ್‌ರವರಿಗೆ ಹಾಗೂ ಸರ್ಕಲ್ ಇನ್ಸ್ಪೇಕ್ಟರ್‌ರವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಕುಂಭತ್ತಿ ಗ್ರಾಮದ ಸರ್ವೆನಂಬರ್ 5ರಲ್ಲಿ ಕಲ್ಲುಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟಿದ್ದು ಗಣಿಗಾರಿಕೆಯು ಈ ಗಣಿಗಾರಿಕೆಗೆ ಸಮೀಪ ಜನ ವಸತಿ ಪ್ರದೇಶವಾಗಿದೆ ಇದರಿಂದ ಶಬ್ದ ಮಾಲಿನ್ಯ ವಾಯು ಮಾಲಿನ್ಯ ಉಂಟಾಗಿದ್ದು ಹಾಗೂ ಕಲ್ಲನ್ನು ಡೈನಮೆಂಟ್ ಬ್ಲಾಸ್ಟ್ ಮೂಲಕ ಒಡೆಯುತ್ತಿದ್ದಾರೆ. ಇದರಿಂದ ಅಲ್ಲಿನ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವಾಗುತ್ತಿದೆಲ ಏಪ್ರಿಲ್‌ 4 ರಂದು ಭಾರೀ ಪ್ರಮಾಣದಲ್ಲಿ ಬ್ಲಾಸ್ಟ್ ಮಾಡಿದ್ದರಿಂದ ಗ್ರಾಮದ ಸುಮಾರು 35ರಿಂದ 40ಮನೆಗಳಿಗೆ ಹಾನಿಯಾಗಿದೆ. ಬ್ಲಾಸ್ಟ್ ಮಾಡುವಾಗ ಭೂಮಿ ಕಂಪಿಸುತ್ತಿದೆ ಹೊಸದಾಗಿ ಕಟ್ಟಿದ ಮನೆಗಳ ಪಿಲ್ಲರ್ ಸಹಾ ಡ್ಯಾಮೇಜ್ ಆಗಿರುತ್ತದೆ. ಹೀಗೆ ಕಲ್ಲನ್ನು ಬ್ಲಾಸ್ಟ್ ಮಾಡುವಾಗ ಯಾವ ಸಂದರ್ಭದಲ್ಲಿಯಾದರೂ ಮನೆ, ಕೊಟ್ಟಿಗೆ, ಧರೆಗಳು ಉರುಳುವ ಸಂಭವವಿದೆ ಹಾಗೂ ಪ್ರಾಣ ಹಾನಿಯಾಗುವ ಸಂಭವವಿದ್ದು ತಕ್ಷಣ ಕುಂಭತ್ತಿಯಲ್ಲಿ ನಡೆಯುತ್ತಿರುವ ಕಲ್ಲಗಣಿಗಾರಿಕೆಯನ್ನು ನಿಲ್ಲಿಸಬೇಕು ಇಲ್ಲವಾದರೆ ಉಗ್ರ ಹೋರಾಟ ಅನಿವಾರ್ಯವೆಂದು ಅಲ್ಲಿನ ಗ್ರಾಮಸ್ಥರು ಮನವಿಯಲ್ಲಿ ತಿಳಿಸಿದ್ದಾರೆ.


ಈ ಮನವಿ ಪತ್ರ ನೀಡುವ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಸುಬ್ರಹಣ್ಯ, ಕೃರ್ಷಮೂರ್ತಿ, ಗುರುಮೂರ್ತಿ, ಗಣೇಶ್ ಐತಾಳ್, ಅಭಿಮನ್ಯು, ಶಾಂತಾ, ಆನಂದ, ಸತ್ಯನಾರಾಯಣ, ಶಾಮನಾಯ್ಕ ಇನ್ನೂ ಮುಂತಾದವರು ಉಪಸ್ಥಿತರಿದ್ದರು.


ತಕ್ಷಣ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗುವುದು:
ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ತಹಶಿಲ್ದಾರ್ ಧರ್ಮಂತ ಗಂಗಾರಾಮ್ ಕೋರಿಯವರು, ವಿಷಯ ತಿಳಿದ ತಕ್ಷಣ ಸ್ಥಳ ತನಿಖೆಗಾಗಿ ಆರ್.ಐ ಗ್ರಾಮ ಆಡಳಿತಾಧಿಕಾರಿ ದೀಪು ಹಾಗೂ ಗ್ರಾಮ ಸಹಾಯಕ ನಾಗಪ್ಪನವರನ್ನು ಸ್ಥಳ ಪರಿಶೀಲಿಸಿದ್ದು ಅವರ ವರದಿಯ ಅಧಾರದಲ್ಲಿ ಕಲ್ಲುಗಣಿಗಾರಿಕೆಯ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹಾಗೂ ನೀವು ನೀಡಿರುವ ಮನವಿಯನ್ನು ಮಾನ್ಯ ಜಿಲ್ಲಾಧಿಕಾರಿಗಳ ಹಾಗೂ ಭೂವಿಜ್ಞಾನ ಇಲಾಖೆಯ ಗಮನಕ್ಕೆ ತರಲಾಗುವುದು ಎಂದರು.

Leave A Reply

Your email address will not be published.

error: Content is protected !!