ಹೊಸನಗರ ; ಚಿರತೆ ದಾಳಿಗೆ ಹಸು ಬಲಿ, ಮುಂಜಾಗ್ರತಾ ಕ್ರಮಕೈಗೊಳ್ಳಲು ಅರಣ್ಯಾಧಿಕಾರಿಗಳಿಗೆ ಆಗ್ರಹ

0 46


ಹೊಸನಗರ: ತಾಲ್ಲೂಕಿನ ತ್ರಿಣಿವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ಒಂದು ತಿಂಗಳಿಂದ ಚಿರತೆ ಓಡಾಟ ನಡೆಸುತ್ತಿದೆ ಎಂದು ಗ್ರಾಮಸ್ಥರು ಭಯದಲ್ಲಿ ಓಡಾಟ ನಡೆಸುತ್ತಿದ್ದು ಮುಡ್ರಳ್ಳಿ ಬಳಿ ಒಂದು ಹಸುವನ್ನು ಹಿಡಿದಿದೆ ಇದರಿಂದ ಚಿರತೆ ಓಡಾಟ ನಡೆಸುತ್ತಿರುವುದು ದೃಢಪಟ್ಟಿದೆ.

ತಾಲ್ಲೂಕಿನ ತ್ರಿಣಿವೆ, ಜಕ್ಕನಗದ್ದೆ, ಮುಡ್ರಳ್ಳಿ, ಇಟ್ಟಕ್ಕಿ, ತೊಗರೆಗಳಲ್ಲಿ ಸುಮಾರು ನೂರಕ್ಕಿಂತ ಹೆಚ್ಚು ಮನೆಗಳಿವೆ. ಅವರು ದನ, ಎಮ್ಮೆಗಳನ್ನು ಕಟ್ಟಿಕೊಂಡು ಹೊಲ-ಗದ್ದೆಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅವರು ಪಟ್ಟಣಕ್ಕೆ ಬರಬೇಕೆಂದರೆ ಸುಮಾರು 20 ಕಿ.ಮೀ. ಬರಬೇಕು ಹತ್ತಿರ ಹತ್ತಿರ ಮನೆಗಳಿಲ್ಲ. ಈ ಚಿರತೆ ಕಾಟದಿಂದ ಮನೆಯಿಂದ ಹೊರಬರುವುದೇ ಕಷ್ಟಕರವಾಗಿದ್ದು ಅಲ್ಲಿನ ಜನರು ಮನೆಯಿಂದ ಹೊರಬರುತ್ತಿಲ್ಲ. ವಿದ್ಯಾರ್ಥಿಗಳು ಭಯದಿಂದ ಪರೀಕ್ಷೆಗೆ ಬರುತ್ತಿದ್ದಾರೆ‌. ತಕ್ಷಣ ಅರಣ್ಯ ಇಲಾಖೆಯವರು ಈ ಭಾಗದಲ್ಲಿ ಸಂಚರಿಸಿ ಚಿರತೆಯನ್ನು ಹಿಡಿದರೆ ಅಲ್ಲಿನ ಗ್ರಾಮಸ್ಥರ ಮನಸ್ಸು ತಿಳಿಯಾಗಲಿದೆ.

ತ್ರಿಣಿವೆ ಗ್ರಾಮ ಪಂಚಾಯತಿಯ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ಈ ಭಾಗದಲ್ಲಿ ಚಿರತೆ ಇರುವುದು ಹಸು ಹಿಡಿದಿರುವುದರಿಂದ ದೃಢಪಟ್ಟಿದೆ. ಈ ಭಾಗದ ಜನರು ಮುಗ್ದರು ದಿನನಿತ್ಯ ಕೆಲಸ ಮಾಡಿ ಜೀವನ ಸಾಗಿಸುವವರು ಅರಣ್ಯ ಇಲಾಖೆಯ ಸಿಬ್ಬಂದಿಗಳು ಈ ಭಾಗದಲ್ಲಿ ಬೀಡುಬಿಟ್ಟು ತಕ್ಷಣ ಚಿರತೆಯನ್ನು ಸೆರೆ ಹಿಡಿಯದಿದ್ದರೆ ಮುಂದಿನ ದಿನದಲ್ಲಿ ಭಾರೀ ಅನಾಹುತ ಸಂಭವಿಸಲಿದೆ. ತಕ್ಷಣ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಚಿರತೆಯನ್ನು ಸೆರೆ ಹಿಡಿಯಲು ಮುಂದಾಗಲಿ ಎಂದರು.

Leave A Reply

Your email address will not be published.

error: Content is protected !!