ಹೊಸನಗರ: ನಿನ್ನೆ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ತುರುಗೋಡು ನಾಗರಾಜ್ ಗೌಡ ಮನೆಗೆ ಮಾಜಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಮತ್ತು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಮಂಗಳವಾರ ಶಿಕಾರಿಪುರದಿಂದ ಕೆಲಸದ ಆಳುಗಳನ್ನು ಕರೆದುಕೊಂಡು ವಾಪಸ್ ತಮ್ಮ ಸ್ವಂತ ಊರದ ಹೊಸನಗರ ತಾಲ್ಲೂಕಿನ ಕೋಡೂರು ಸಮೀಪದ ತುರುಗೋಡಿಗೆ ಬರುತ್ತಿದ್ದ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗು ಮುಂಬಾರು ಸೊಸೈಟಿಯ ಅಧ್ಯಕ್ಷರಾದ ನಾಗರಾಜ ಗೌಡ (50) ಸಾಗರ ತಾಲೂಕಿನ ಗೌತಮಪುರದ ಸಮೀಪ ರಸ್ತೆ ಪಕ್ಕದ ಮರಕ್ಕೆ ಮಾರುತಿ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಸಾವನ್ನಪಿದ್ದರು.
ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದು ಓರ್ವನಿಗೆ ಗಂಭೀರ ಗಾಯವಾಗಿದ್ದು ಸರ್ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಾಗರಾಜ ಗೌಡರವರು ಇಬ್ಬರು ಪುತ್ರಿಯರು, ಪತ್ನಿ ಹಾಗೂ ಸಹೋದರರನ್ನು, ಅಪಾರ ಬಂಧು-ಬಳಗದವರನ್ನು ಅಗಲಿದ್ದಾರೆ.
ಸಂತಾಪ:
ಇವರ ಅಗಲಿಕೆಯನ್ನು ಸಹಿಸಲು ಅಸಾಧ್ಯವೆಂದು ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಚಂದ್ರಮೌಳಿಗೌಡರವರು ಹೇಳಿದ್ದು ಇವರು ಬಡವರಿಗೆ ಸಹಾಯ ಹಸ್ತ ನೀಡುವುದರಲ್ಲಿ ಮುಂದಾಗಿದ್ದು ಈ ಭಾಗದ ಜನರಿಗೆ ದೊಡ್ಡ ಆಸ್ತಿಯೇ ಆಗಿದ್ದರು. ಇವರ ಅಗಲಿಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ನನಗೆ ಅಣ್ಣನ ರೀತಿಯಲ್ಲಿ ಬೆನ್ನೆಲುಬಾಗಿದ್ದ ಇವರ ಸಾವು ಸಹಿಸಿಕೊಳ್ಳುವ ಶಕ್ತಿ ನನಗಿಲ್ಲ ಎಂದರು.
ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಮೃತರ ಮನೆಗೆ ತೆರಳಿ ಅಂತಿಮ ನಮನ ಸಲ್ಲಿಸಿದರು.
ಇಂದು ಮಧ್ಯಾಹ್ನ ಮೃತರ ಅಂತ್ಯಕ್ರಿಯೆಯು ಅವರ ಜಮೀನಿನಲ್ಲಿ ನೆರವೇರಿತು.