ಏ. 23, 24 ರಂದು ಕಾರಣಗಿರಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಸಹಸ್ರಾಧಿಕ ನಾಳಿಕೇರ ಗಣಯಾಗ ರಜತ ರಥೋತ್ಸವ


ಹೊಸನಗರ: ತಾಲ್ಲೂಕಿನ ಪ್ರತಿಷ್ಠಿತ ದೇವಸ್ಥಾನಗಳಲ್ಲಿ ಒಂದಾಗಿರುವ ಕಾರಣಗಿರಿ ಸಿದ್ಧಿವಿನಾಯಕ ದೇವಸ್ಥಾನದ ಆವರಣದಲ್ಲಿ ಏಪ್ರಿಲ್ 23 ರಂದು ಸಹಸ್ರಾಧಿಕ ನಾಳಿಕೇರ ಗಣಯಾಗ ರಜತ ಮಹೋತ್ಸವ ಹಾಗೂ ಏಪ್ರಿಲ್ 24 ರಂದು ಶ್ರೀಮನ್ಮಹಾರಥೋತ್ಸವ ಕಾರ್ಯಕ್ರಮವನ್ನು ತಾಲ್ಲೂಕು ಮುಜರಾಯಿ ಅಧಿಕಾರಿ ತಹಶೀಲ್ದಾರ್ ಡಿ.ಜಿ.ಕೋರಿಯವರ ಮಾರ್ಗದರ್ಶನದಲ್ಲಿ ಏರ್ಪಡಿಸಿಸಲಾಗಿದೆ ಎಂದು ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ನಾಗೇಂದ್ರರಾವ್‌ರವರು ತಿಳಿಸಿದ್ದಾರೆ.


ಅವರು ದೇವಸ್ಥಾನದ ಆವರಣದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ಏಪ್ರಿಲ್ 22 ರಂದು ಗಣೇಶ ಪ್ರಜಾ, ಸ್ವಸ್ತಿವಾಚನ, ಅಗ್ನಿಜನನ, ಅದಿವಾಸ ಹೋಮಾದಿ ಕಾರ್ಯಕ್ರಮಗಳು ನಡೆಯಲಿದ್ದು 23 ರಂದು ಗಣೇಶ ಪ್ರಜಾ, ಸ್ವಸ್ತಿವಾಚನ, ಅಧಿವಾಸ ಹೋಮಾದಿ ಕಾರ್ಯಕ್ರಮಗಳು ಅಷ್ಟೋತ್ತರ ಶತಾದಿಕ ಏಕಸಹಸ್ರ ನಾಳಿಕೇರ 1008ಕ್ಕೂ ಅಧಿಕ ತೆಂಗಿನಕಾಯಿ ಗಣಪತಿ ಹವನ ಮತ್ತು ರಹತ ರಥೋತ್ಸವ ನಡೆಯಲಿದ್ದು ರಾತ್ರಿ ರಂಗಪೂಜೆ ಬಲಿ ಇತ್ಯಾದಿ ಕಾರ್ಯಕ್ರಮ ನಡೆಯಲಿದೆ. 24 ರಂದು ಗಣೇಶ ಪ್ರಜಾ ಪುಣ್ಯಾಹ, ಅಧಿವಾಸ ಹವನ, ಗ್ರಹಯಾಗ ಅಭಿಜಿನ್ ಮುಹೂರ್ತದಲ್ಲಿ ಮನ್ಮಹಾರಥೋತ್ಸವ ಕಾರ್ಯಕ್ರಮ ನಡೆಯಲಿದ್ದು ರಾತ್ರಿ ಭೂತಬಲಿ ಕಾರ್ಯಕ್ರಮ ನಡೆಯಲಿದ್ದು 25 ರಂದು ಪ್ರಭೂದೋತ್ಸವ ಪ್ರರ್ಣಾಹುತಿ, ಮಹಾಪೂಜೆ ಪ್ರಾರ್ಥನೆ ಮಂತ್ರಾಕ್ಷತೆ ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಯಲಿದೆ.

ಸಾರ್ವಜನಿಕರು ಹಾಗೂ ದೇವಸ್ಥಾನದ ಭಕ್ತಾರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಕೇಳಿಕೊಂಡಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,802FollowersFollow
0SubscribersSubscribe
- Advertisement -spot_img

Latest Articles

error: Content is protected !!