ಜನ ಸೇವೆಯೇ ನನ್ನ ಉಸಿರು ; ಬೇಳೂರು ಗೋಪಾಲಕೃಷ್ಣ


ಹೊಸನಗರ: ಜನರೆ ನನ್ನ ದೇವರೆಂದು ತಿಳಿದಿರುವೆನು ಜನ ಸೇವೆಗಾಗಿ ನಾನು ಹುಟ್ಟಿರುವೆ ಎಂದು ತಿಳಿದಿರುವೆನು ಹತ್ತು ವರ್ಷ ಅಧಿಕಾರದಲ್ಲಿರದಿದ್ದರೂ ಹತ್ತು ವರ್ಷದಲ್ಲಿ ಬಡವ-ಶ್ರೀಮಂತ ಎಂದು ತಿಳಿಯದೇ ಸುಖ-ದುಃಖಗಳಲ್ಲಿ ಬಾಗಿಯಾಗಿರುವೆನು ಜನ ಸೇವೆಯೇ ನನ್ನ ಉಸಿರು ಎಂದು ತಿಳಿದು ಜನ ಸೇವೆ ಮಾಡುತ್ತಿರುವೇ ಎಂದು ಹೊಸನಗರ-ಸಾಗರ ಕ್ಷೇತ್ರದ ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣರವರು ಹೇಳಿದರು.


ಹೊಸನಗರ ಕ್ಷೇತ್ರದಲ್ಲಿ ಗ್ರಾಮ-ಗ್ರಾಮಗಳಿಗೆ ಪಟ್ಟಣದ ಪ್ರಮುಖರ ಮನೆ-ಮನೆಗಳಿಗೆ ಭೇಟಿ ನೀಡಿ ಮಾತನಾಡಿ, ಈ ಬಾರಿ ನನ್ನ ಬೆಂಬಲಕ್ಕೆ ಸಾಕಷ್ಟು ಯುವಕರು ನನ್ನ ಜೊತೆಗಿದ್ದಾರೆ ನಾನು ಹತ್ತು ವರ್ಷ ಸೇವೆ ಮಾಡಿರುವುದಕ್ಕೆ ಈಗ ಪ್ರತಿಫಲ ಸಿಗುವ ಹಾಗೇ ಕಾಣುತ್ತಿದೆ. ಹೊಸನಗರ-ಸಾಗರ ಕ್ಷೇತ್ರದ ಗ್ರಾಮಗಳಿಗೆ ಬೇಟಿ ನೀಡಿದಾಗ ನನ್ನ ಬೆಂಬಲಕ್ಕೆ ಜನ ಸಾಗರವೇ ಹರಿದು ಬರುತ್ತಿದೆ ಈ ವರ್ಷದ ವಿಧಾನಸಭೆಯ ಚುನಾವಣೆಯಲ್ಲಿ ಜನರು ಪ್ರೀತಿಗೆ ಬೆಲೆ ನೀಡುತ್ತಾರೆಯೇ ಹೊರತು ಹಣ ಬಲಕ್ಕೆ ಎಂದು ಜನರು ಸ್ಪಂದಿಸುವುದಿಲ್ಲ ಮತದಾರರು ಒಗ್ಗಟಿನಿಂದ ಈ ಬಾರಿಯ ಚುನಾವಣೆಯನ್ನು ಎದುರಿಸೋಣ ಎಂದರು.


ಕ್ಷೇತ್ರದ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ ಕಾಗೋಡು ತಿಮ್ಮಪ್ಪನವರು ಮಾಡಿದಂತಹ ಅಭಿವೃದ್ಧಿ ಕಾರ್ಯಗಳನ್ನು ನಾನು ಮಾಡಿದ್ದು ಎಂದು ಹೇಳಿಕೊಂಡು ಮತದಾರರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದು ಹಾಲಪ್ಪನವರ ಸುಳ್ಳು ಭರವಸೆಗೆ ಮರುಳಾಗದೇ ಈ ಬಾರೀ ಕಾಂಗ್ರೇಸ್ ಪಕ್ಷದ ಕಡೆಗೆ ಮತದಾರರು ಹೆಚ್ಚು ಒಲವು ವ್ಯಕ್ತಪಡಿಸುತ್ತಿದ್ದು ಆದರೆ ಮತದಾನದ ಹಿಂದಿನ ಒಂದು ವಾರಗಳ ಕಾಲ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಜಾಗೃತಿಯಿಂದ ಕಾಯಬೇಕೆಂದು ಕೇಳಿಕೊಂಡರು.


ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಕಲಗೋಡು ರತ್ನಾಕರ್, ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಚಂದ್ರಮೌಳಿಗೌಡ, ಬಿ.ಜಿ ನಾಗರಾಜ್, ಸದಾಶಿವ ಶ್ರೇಷ್ಠಿ, ಗುರುರಾಜ್, ಮಹೇಂದ್ರ, ಬೃಂದಾವನ ಪ್ರವೀಣ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,790FollowersFollow
0SubscribersSubscribe
- Advertisement -spot_img

Latest Articles

error: Content is protected !!