ಭರತ ನಾಟ್ಯ ; ಹೊಸನಗರದ ಮಹಿಳೆಯ ಸಾಧನೆಗೆ ಅಭಿನಂದನೆ


ಹೊಸನಗರ: ಪಟ್ಟಣದ ಕಲಾವಿದ ವೇಣುಗೋಪಾಲ್‌ರವರ ಪುತ್ರಿ ಶಿಲ್ಪಾ ಅನೂಪ್‌ರವರು ಪಾಂಡಿಚೇರಿಯಲ್ಲಿ ನಡೆದ ವಲ್ಡ್ ರೆಕಾರ್ಡ್ ಭರತನಾಟ್ಯ ಕಾರ್ಯಕ್ರಮದಲ್ಲಿ 1600 ಭರತ ನಾಟ್ಯ ಕಲಾವಿದರು ಡಮರುಗ ಹಿಡಿದು ಆನಂದ ತಾಂಡವ ನೃತ್ಯ ಮಾಡುವ ಮೂಲಕ ವಿಶ್ವ ದಾಖಲೆ ಮಾಡಿದ್ದಾರೆ ಇವರ ಸಾಧನೆಯನ್ನು ಕಂಡ ಕಲಾವಿದರ ತಂಡ ಅನೇಕ ಸಂಘ-ಸಂಸ್ಥೆಯವರು ಇವರನ್ನು ಅಭಿನಂದಿಸಿದ್ದಾರೆ.

ಪಾಂಡಿಚೇರಿಯಲ್ಲಿ ಸಂಗಮದ್ ಗ್ಲೋಬಲ್ ಅಕಾಡೆಮಿ, ಪುದುಚೇರಿ ಪ್ರವಾಸೋದ್ಯಮ ಇಲಾಖೆ ಪಾಂಡಿಚೇರಿ ಸರಕಾರದ ವತಿಯಿಂದ ನಡೆದ ಈ ಕಾರ್ಯಕ್ರಮವನ್ನು ನಡೆಸಲಾಗಿತ್ತು. ಶಿಲ್ಪಾರವರು ಸುಮಾರು 15ವರ್ಷಗಳಿಂದ ಆನವಟ್ಟಿಯಲ್ಲಿ ಬಾಲಾಜಿ ನೃತ್ಯ ಶಾಲೆಯನ್ನು ನಡೆಸುತ್ತಿದ್ದು ಇದುವರೆಗೆ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೃತ್ಯ ತರಬೇತಿ ನೀಡಿರುತ್ತಾರೆ ಅನೇಕ ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಇವರು ಪಡೆದವರಾಗಿರುತ್ತಾರೆ.


ಇವರ ಪ್ರತಿಭೆಗೆ ಹೊಸನಗರದ ವಿವಿಧ ಸಂಘ-ಸಂಸ್ಥೆಗಳು ಅಭಿನಂದಿಸಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,803FollowersFollow
0SubscribersSubscribe
- Advertisement -spot_img

Latest Articles

error: Content is protected !!