ಹೊಸನಗರ: ರೈತ ಸಂಪರ್ಕ ಕೇಂದ್ರಗಳು, ಸಸ್ಯ ಚಿಕಿತ್ಸಾಲಯವಿದಂತೆ ಕೃಷಿ ಅಧಿಕಾರಿಗಳು ನಮ್ಮ ಬೆಳೆಗಳ ಡಾಕ್ಟರ್ ಗಳು, ರೈತರು ಭೇಟಿ ನೀಡಿ ತಮ್ಮ ಬೆಳೆಗಳ ಬಗ್ಗೆ ವೈಜ್ಞಾನಿಕ ಮಾಹಿತಿ ಪಡೆದು ಇಳುವರಿಯನ್ನು ಹೆಚ್ಚಿಸಿಕೊಳ್ಳಬೇಕೆಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕರೆಕೊಟ್ಟರು.
ಅವರು ಗುರುವಾರ ಹುಂಚ ಹೋಬಳಿಯ ನೂತನ ರೈತ ಸಂಪರ್ಕ ಕೇಂದ್ರ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ರೈತರು ಇಲಾಖೆಯಲ್ಲಿ ಸಹಾಯಧನದಡಿ ಕೊಡುವ ಸವಲತ್ತುಗಳನ್ನು ಪಡೆಯಬೇಕೆಂದು ಸಲಹೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷೆ ಪಲವಿ ಚೇತನ್ ವಹಿಸಿದ್ದರು.
ಸಹಾಯಕ ಕೃಷಿ ನಿರ್ದೇಶಕ ಗಣೇಶ್ ಸ್ವಾಗತಿಸಿದರು. ಉಪ ಕೃಷಿ ನಿರ್ದೇಶಕ ಡಿ.ಎಂ ಬಸವರಾಜ್ ಪ್ರಸ್ತಾವನೆ ಮಾಡಿದರು. ಸಹಾಯಕ ಕೃಷಿ ಅಧಿಕಾರಿ ಶರಣ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕೃಷಿ ಅಧಿಕಾರಿಗಳು, ಅತ್ಮ ಸಿಬ್ಬಂದಿ, ಕಛೇರಿ ಸಿಬ್ಬಂದಿಗಳು ಹಾಜರಿದ್ದರು.