ರೈತ ಉತ್ಪಾದನ ಸಂಸ್ಥೆಗಳು ರೈತರಿಂದ ರೈತರಿಗಾಗಿ ರೈತರ ಅಭಿವೃದ್ಧಿಗೆ ಇರುವ ಸಂಸ್ಥೆ ; ಎನ್.ಆರ್. ದೇವಾನಂದ್


ಹೊಸನಗರ: ರೈತ ಉತ್ಪಾದನ ಸಂಸ್ಥೆಗಳಿರುವುದು ರೈತರು ಉತ್ಪಾದಿಸಿದ ಸಾಮಗ್ರಿಗಳ ಮಾರಾಟಕ್ಕಾಗಿ ರೆತರ ಅಭಿವೃದ್ಧಿಗೆ ಇರುವ ಸಂಸ್ಥೆಯಾಗಿದೆ ಎಂದು ಹೊಸನಗರ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ಎನ್.ಆರ್ ದೇವಾನಂದ್‌ರವರು ಹೇಳಿದರು.


ಅವರು ಶಿವಮೊಗ್ಗ ರಸ್ತೆಯಲ್ಲಿರುವ ರೈತ ಉತ್ಪಾದಕ ಮಾರಾಟಗಾರರ ಸಂಘದ ಆವರಣದಲ್ಲಿ ಮಾತನಾಡಿ, ಸದಸ್ಯರ ರೈತರ ಕೃಷಿ ಮತ್ತು ಪೂರಕ ಜೀವನೋಪಾಯಗಳನ್ನು ಸುಸ್ಥಿರವಾಗಿಸಿ ಅವರ ನಿವ್ವಳ ಆದಾಯದ ಹೆಚ್ಚಳ ಮತ್ತು ಕೃಷಿ ಜೀವನೋಪಾಯದಲ್ಲಿ ಸ್ವಾಭಿಮಾನ-ಅಸಮಾನತೆಯನ್ನು ರೂಢಿಸುವುದು ಈ ಸಂಸ್ಥೆಯ ಉದ್ದೇಶವಾಗಿದ್ದು ನಮ್ಮ ಸಂಸ್ಥೆ ಒಳ ಸುರಿಗಳ ಪೂರೈಕೆ (ಗುಣಮಟ್ಟದ ಬೀಜ, ಗೊಬ್ಬರ, ಗಿಡಗಳು, ಸಸ್ಯ ಸಂರಕ್ಷಣಾ ಸಾಮಾಗ್ರಿಗಳು ಯಂತ್ರೋಪಕಣಗಳು ಪಶು ಆಹಾರ, ಇತರೆ ಸಾಮಾಗ್ರಿಗಳನ್ನು ಸಗಟು ದರದಲ್ಲಿ) ಸದಸ್ಯರ ರೈತರ ಉತ್ಪನ್ನಗಳ ಮಾರಾಟ (ಒಗ್ಗೂಡಿಸಿ, ಗುಣಮಟ್ಟ ವಿಂಗಡಿಸಿ ಹೆಚ್ಚಿನ ಮಾರುಕಟ್ಟೆ ಮೌಲ್ಯ ಸಿಗುವಂತೆ ಸಂಘಟಿತವಾಗಿ ಪ್ರಯತ್ನಿಸುವುದು) ಮೂಲಭೂತ ಸೌಕರ್ಯ (ಗೋದಾಮು ಸರಕು ಸಾಗಣೆ) ಮೌಲ್ಯವರ್ಧನ (ಪ್ಯಾಕಿಂಗ್ ಗ್ರೇಡಿಂಗ್ ಸಂಸ್ಕರಣ ವ್ಯವಸ್ಥೆ) ಮೌಲ್ಯ ವರ್ಧನೆಯ ಅಂಗವಾಗಿ ಜ್ಞಾನ ಆಧಾರಿತ ಸುಸ್ಥಿರ ಮತ್ತು ಪರಿಣಾಮಕಾರಿ ತಂತ್ರಜ್ಞಾನದ, ಕೌಶಲ್ಯಕ್ಕೆ ತರಬೇತಿಗಳು ಅಧ್ಯಯನ ಪ್ರವಾಸ, ಕಾರ್ಯಾಗಾರಗಳು ಭಾವಿ ಕೃಷಿಕರನ್ನು ರೂಪಿಸುವುದು ಮಾರುಕಟ್ಟೆ ವಿಸ್ತರಣೆ ಮಾಡುವುದು ನಮ್ಮ ಸಂಸ್ಥೆಯ ಉದ್ದೇಶವಾಗಿದೆ.


ನಮ್ಮ ಸಂಸ್ಥೆಯ ಸದಸ್ಯರಿಗೆ ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಮತ್ತು ಉತ್ತಮ ಬೆಲೆ ನೀಡಲಾಗುವುದು, ಸದಸ್ಯರಿಗೆ ಲಾಭಾಂಶದಲ್ಲಿ ಪಾಲು ನೀಡುವುದು, ಒಳಸುರಿಗಳ ಖರೀದಿಯಲ್ಲಿ ಸೋಡಿ, ನೀಡಲಾಗುವುದು, ಸ್ಥಳೀಯ ಉದ್ಯಮ ಶೀಲತೆ ಮತ್ತು ನೌಕರಿಗಳ ಸೃಷ್ಟಿ, ಮಾರುಕಟ್ಟೆಯಲ್ಲಿ ಚೌಕಾಶಿ ಮಾಡುವ ಸಾಮರ್ಥ್ಯ ಜೊತೆಗೆ ತಂತ್ರ ಜ್ಞಾನಗಳನ್ನು ಪಡೆಯಬಹುದು ಎಂದರು.


ನಮ್ಮ ಸಂಸ್ಥೆಯಲ್ಲಿ ಈಗಾಗಲೇ 500 ಕ್ಕಿಂತಲೂ ಹೆಚ್ಚು ರೈತರು ಷೇರು ನೊಂದಣಿ ಮಾಡಿಕೊಂಡು ಸಂಸ್ಥೆಯು ಲಾಭ ಪಡೆಯುತ್ತಿದ್ದು ಮುಂದಿನ ದಿನದಲ್ಲಿ ಇನ್ನೂ ಹೆಚ್ಚಿನ ರೈತರನ್ನು ಸದಸ್ಯರನ್ನಾಗಿ ಮಾಡಿಕೊಂಡು ಸಂಸ್ಥೆಯ ಲಾಭ ನೀಡುವ ಉದ್ದೇಶ ಸಂಸ್ಥೆ ಹೊಂದಿದ್ದು ನಮ್ಮ ಸಂಸ್ಥೆಯಲ್ಲಿ ರೈತರು ಬೆಳೆದ ಎಲ್ಲ ಬಗೆಯ ವಸ್ತುಗಳು ಸಿಗುತ್ತದೆ ಎಂದರು.


ಈ ಸಂದರ್ಭದಲ್ಲಿ ಸಂಸ್ಥೆಯ ವ್ಯವಸ್ಥಾಪಕರಾದ ಅಕ್ಷಯ್, ನರೇಂದ್ರ ಸಾಗರ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,803FollowersFollow
0SubscribersSubscribe
- Advertisement -spot_img

Latest Articles

error: Content is protected !!