ಹೊಸನಗರ : ಚುನಾಯಿತ ಜನಪ್ರತಿನಿಧಿ ಓರ್ವ ತನ್ನ ಮೊಬೈಲ್ ವಾಟ್ಸಾಪ್ ಸ್ಟೇಟಸ್‌ಗೆ ತನ್ನದೇ ನಗ್ನಚಿತ್ರ ಅಪ್‌ಲೋಡ್ ಮಾಡುವ ಮೂಲಕ ತಾಲೂಕಿನಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಘಟನೆ ಗುರುವಾರ ನಡೆದಿದೆ ಎಂದು ತಿಳಿದುಬಂದಿದೆ.
ತಾಲೂಕಿನ ಮೇಲಿನಬೆಸಿಗೆ ಗ್ರಾಮ ಪಂಚಾಯತಿ ಸದಸ್ಯನೋರ್ವ ಇದೇ 18ರ ಗುರುವಾರ ಬೆಳಗ್ಗೆ ತನ್ನ ಮೊಬೈಲ್ ಸ್ಟೇಟಸ್‌ನಲ್ಲಿ ತನ್ನದೇ ನಗ್ನಚಿತ್ರ ಅಪ್‌ಲೋಡ್ ಮಾಡಿದ್ದು, ಸುಮಾರು 2-3 ಗಂಟೆಗಳ ನಂತರ ಡಿಲಿಟ್ ಆಗುವ ಮುನ್ನ ಸಾವಿರಾರು ಮಂದಿ ಈ ಚಿತ್ರವನ್ನು ಡೌನ್‌ಲೋಡ್ ಮಾಡಿಕೊಂಡು ಈತನ ವಿರುದ್ದ ಹಿಡಿಶಾಪ ಹಾಕುತ್ತಿರುವ ಸಂಗತಿ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಸಾರ್ವಜನಿಕ ವಲಯದಲ್ಲಿನ ಜವಾಬ್ದಾರಿಯುತ ಜನಪ್ರತಿನಿಧಿಯೋರ್ವ ಹೇಯ್ಯಕೃತ್ಯೆಗೆ ಮುಂದಾಗಿರುವುದು, ಸಮಾಜದ ಸ್ವಾಸ್ಥ್ಯ ಕದಡುವ ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಸಂಬಂಧಪಟ್ಟ ಇಲಾಖೆ ಈತನ ವಿರುದ್ದ ಸೂಕ್ತ ತನಿಖೆ ನಡೆಸಬೇಕು. ತತಕ್ಷಣವೇ ಜನಪ್ರತಿನಿಧಿ ಸ್ಥಾನದಿಂದ ಈತನನ್ನು ವಜಾಗೊಳಿಸಿ, ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರ ಒತ್ತಾಯ ಕೇಳಿಬರುತ್ತಿದೆ.