ಹೊಸನಗರ: ಇಲ್ಲಿನ ಮುಂಬಾರು (ಮಾವಿನಕಟ್ಟೆ)ಯಲ್ಲಿ ಹೊಸನಗರದ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ 1 & 2 ರ ವಾರ್ಷಿಕ ವಿಶೇಷ ಶಿಬಿರವು ಆರು ದಿನಗಳ ಕಾಲ ನಡೆಯಲಿದ್ದು, ಉದ್ಘಾಟನಾ ಸಮಾರಂಭವು ಮಂಗಳವಾರ ರಂದು ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಿನ್ಸಿಪಲ್ ಅಂಜನ್ ಕುಮಾರ್, ಶಿಸ್ತು, ಸಮಯ ಪಾಲನೆ, ರಾಷ್ಟ್ರ ಪ್ರೇಮ ಮತ್ತು ಸೇವಾ ಮನೋಭಾವ ಬೆಳೆಸುವುದೇ ಎನ್ ಎಸ್ ಎಸ್ ನ ಉದ್ದೇಶ ಎಂದು ಹೇಳಿದರು.
ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆ, ಆರೋಗ್ಯ ಜಾಗೃತಿ, ಶ್ರಮದಾನ, ಪ್ರಗತಿಪರ ಚಿಂತನೆ, ರಾಷ್ಟ್ರೀಯ ಜಾಗೃತಿ ಮೂಡಿಸುವದೇ ಎನ್ ಎಸ್ ಎಸ್ ನ ಗುರಿಯಾಗಿದೆ. ಎನ್ ಎಸ್ ಎಸ್ ಸೇರುವುದರಿಂದ ವಿದ್ಯಾರ್ಥಿಗಳಲ್ಲಿ ಸಮಯ ಪಾಲನೆ, ಸಹಬಾಳ್ವೆ, ಶ್ರಮದ ಮಹತ್ವ, ಪರಿಣಾಮಕಾರಿ ಭಾಷಣಾ ಕಲೆ, ಸಭಾ ಕಂಪನ ನಿವಾರಣೆ, ವ್ಯಕ್ತಿತ್ವ ವಿಕಸನ, ಆತ್ಮ ವಿಶ್ವಾಸ, ರಾಷ್ಟ್ರೀಯ ಭಾವೈಕ್ಯ ಮತ್ತು ಜೀವನ ಪ್ರೀತಿಯನ್ನು ಕಲಿಸುತ್ತದೆ ಎಂದರು.
ಮಾಜಿ ಸೈನಿಕರೊಂದಿಗೆ ಸಂವಾದ ಕಾರ್ಯಕ್ರಮಗಳು, ಜೀವನ ಕೌಶಲ್ಯ ತರಬೇತಿ, ಸರ್ಕಾರಿ ಸೌಲಭ್ಯಗಳು,ಆರೋಗ್ಯ, ಮಹಿಳೆ ಮತ್ತು ಆರೋಗ್ಯ ಕುರಿತ ಉಪನ್ಯಾಸಗಳು,ಆದಾರ್ ಕಾರ್ಡ್, ಪಾನ್ ಕಾರ್ಡ್ ಮತ್ತು ಇತರೆ ಅಂಚೆ ಸೇವೆಗಳ ಮೇಳ, ದಂತ ತಪಾಸಣಾ ಮತ್ತು ಚಿಕಿತ್ಸಾ ಶಿಬಿರಗಳು ನೆಡೆಯಲಿದ್ದು ಗ್ರಾಮಸ್ಥರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಶ್ರೀಧರ ಉಡುಪ, ಕಾಲೇಜಿಗೆ ಉತ್ತಮ ಹೆಸರು ತರಲು ವಿದ್ಯಾರ್ಥಿ ಗಳಿಗೆ ಕರೆ ನೀಡಿದರು.
ಮುಖ್ಯ ಅಥಿತಿಗಳಾಗಿ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ನಾಗರಾಜ ಪರಿಸರ, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ ಹೆಚ್ ಆರ್, ಪ್ರಾ.ಶಾ.ಶಿ ಸಂಘದ ಅಧ್ಯಕ್ಷ ಸುರೇಶ, ಎಂ ಗುಡ್ಡೆಕೊಪ್ಪ ಗ್ರಾ.ಪಂ ಅಧ್ಯಕ್ಷರಾದ ಸವಿತಾ, ಉಪಾಧ್ಯಕ್ಷರಾದ ರಶ್ಮಿ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀಕಾಂತ್, ಸಹ ಶಿಬಿರಾಧಿಕಾರಿ ಸಾದನಾ ಪಿ ನಾಯ್ಕ್, ಡಾ.ಕೆ ಶ್ರೀಪತಿ, ಡಾ.ಲೋಕೇಶಪ್ಪ, ಉಪನ್ಯಾಸಕ ಶಶಿ ಕುಮಾರ್ ಉಪಸ್ಥಿತರಿದ್ದರು.
ಶಿಬಿರಾಧಿಕಾರಿ ದೊಡ್ಡಯ್ಯ ಹೆಚ್ ಸ್ವಾಗತಿಸಿದರು, ವಿದ್ಯಾರ್ಥಿನಿ ಪ್ರೀತಿ ಬಿ ಎಸ್ ನಿರೂಪಿಸಿದರು. ಶಿಬಿರಾಧಿಕಾರಿ ಡಾ.ಬಸವರಾಜಪ್ಪ ಎಂ ಟಿ ವಂದಿಸಿದರು.