ಸರ್ವರಿಗೂ ಸಮಬಾಳು ಎಂದು 12ನೇ ಶತಮಾನದಲ್ಲಿ ಪ್ರಪಂಚಕ್ಕೆ ಸಾರಿದ ಶರಣ ಮಡಿವಾಳ ಮಚಿದೇವ ; ತಹಶೀಲ್ದಾರ್ ವಿ.ಎಸ್ ರಾಜೀವ್


ಹೊಸನಗರ: ಸರ್ವರಿಗೂ ಸಮಬಾಳು ಎಂದು ಇಡೀ ಪ್ರಪಂಚಕ್ಕೆ 12ನೇ ಶತಮಾನದಲ್ಲಿಯೇ ಸಾರಿದ ಶರಣ ಮಾಚಿದೇವ ಎಂದು ಹೊಸನಗರ ತಹಶೀಲ್ದಾರ್ ವಿ.ಎಸ್ ರಾಜೀವ್‌ರವರು ಹೇಳಿದರು.


ಹೊಸನಗರ ತಾಲ್ಲೂಕು ಕಛೇರಿಯ ಆವರಣದಲ್ಲಿ ಶರಣ ಮಡಿವಾಳ ಮಚಿದೇವ ಜಯಂತಿಯನ್ನು ಆಚರಿಸಲಾಗಿದ್ದು ಶರಣರಿಗೆ ಪೂಜೆ ಸಲ್ಲಿಸಿ ಮಾತನಾಡಿದರು.
12ನೇ ಶತಮಾನದಲ್ಲಿ ದುರ್ಬಲರ ಶೋಷಣೆ, ಜಾತೀಯತೆ, ಮೇಲು ಕೀಳು ತಾರತಮ್ಯ, ಅಸ್ಪೃಶತೆ, ಮೂಢನಂಬಿಕೆಗಳ ಸೃಷ್ಠಿ, ಶಿಕ್ಷಣದಲ್ಲಿ ಅವಕಾಶ ವಂಚನೆ ಹೇಗೆ ಅನೇಕ ಸಾಮಾಜಿಕ ಅಸಮಾನತೆಯಿಂದ ಜನರು ತುಳಿತಕ್ಕೆ ಒಳಗಾಗಿದ್ದರು ಇವುಗಳೆಲ್ಲವುಗಳಿಂದ ಮಹಿಳೆಯರು ವೃತ್ತಿ ನಿರತ ಶ್ರಮಜೀವಿಗಳು ಬಡವರು ದೀನ ದಲಿತರು ನಿರಾಶೆ-ಹತಾಶೆಗೊಂಡು ಅಸಹನೀಯ ಬದುಕಿಗೆ ತುತ್ತಾಗಿದ್ದರು ಸರ್ವರಿಗೂ ಸಮಪಾಲು ಸಮಬಾಳು ಒದಗಿಸಲು ಬಸವ-ಮಾಚಿದೇವಾದಿ ಶರಣರು ಸಾಮಾಜಿಕ ಕ್ರಾಂತಿಯನ್ನೇ ಕೈಗೊಂಡರು ಶರಣರ ಅಗ್ರ ಗಣ್ಯ ಬಳಗದಲ್ಲಿ ಮಡಿವಾಳ ಮಾಚಿದೇವ ಅತ್ಯಂತ ಪ್ರಕಾಶಮಾನವಾಗಿ ಕಂಡು ಬಂದಿದ್ದರು ಎಂದರು.


ಹೊಸನಗರ ತಾಲ್ಲೂಕು ಮಡಿವಾಳ ಮಾಚಿದೇವ ಸಂಘದ ತಾಲ್ಲೂಕು ಅಧ್ಯಕ್ಷರಾದ ಎಂ.ಎನ್ ಸುಧಾಕರ್‌ರವರು ಮಾತನಾಡಿ, ಶರಣ ಮಾಚಿದೇವರವರು 12ನೇ ಶತಮಾನದಲ್ಲಿ ಹಿಂದುಳಿದ ದುರ್ಬಲ ಜನಾಂಗದವರನ್ನು ಮೇಲೆತ್ತುವ ಕಾರ್ಯ ಕೈಗೊಂಡಿದ್ದರಿಂದ ಇಂದು ವಿಶ್ವದೆಲ್ಲೆಡೆ ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಬದಲಾವಣೆ ಕಾಣುತ್ತಿದ್ದೇವೆ ಇಲ್ಲವಾದರೇ ಬಡವರಿಗೆ ದುರ್ಬಲ ವರ್ಗದವರು ಶೋಚನೀಯ ಸ್ಥಿತಿಯಲ್ಲಿರಬೇಕಾಗಿತ್ತು. ಅವರು ಅಂದು ಕ್ರಾಂತಿಕಾರಿ ಹೋರಾಟದಿಂದ ನಾವು ಇಂದು ಎಲ್ಲರಿಗೂ ಬಡವ ಶ್ರೀಮಂತ, ಮೇಲು ಕೀಳು ಎಂಬ ಭೇದವಿಲ್ಲದೆ ಎಲ್ಲರಿಗೂ ಸರಿಸಮನಾಗಿ ಬದುಕುತ್ತಿದ್ದೇವೆ ಎಂದರು.


ಈ ಜಯಂತಿ ಕಾರ್ಯಕ್ರಮದಲ್ಲಿ ಚುನಾವಣೆ ಶಿರಾಸ್ಥೆದಾರ್ ವಿನಯ್ ಎಂ ಆರಾಧ್ಯ, ಮಂಜುಳಾ, ಬ್ಯಾಂಕ್ ಬಿ.ಎಂ. ಶ್ರೀಧರ್, ಲಿಂಗಪ್ಪ ಗೌಡ, ಎಂ.ಎನ್.ಕೃಷ್ಣಮೂರ್ತಿ, ಡಾ. ವಿನಯ್, ಮಂಜುನಾಥ್, ಬಾಷ, ಶಿಲ್ಪಾ, ಸೌಮ್ಯ, ಸುಜಾತಾ, ಧನ್ಯ, ಹೇಮಾ, ಮೇಘನ, ಶಿವಪ್ಪ, ದೀಪಿಕಾ, ಬಚ್ಚಪ್ಪ ಎಂ, ರವಿ ಕಲ್ಲೂರು, ವೀರಪ್ಪ ಜಯನಗರ, ಬಸವಾಪುರ ದೇವರಾಜ್, ಹರೀಶ್, ಜಯನಗರ ಮಂಜುನಾಥ್, ಜಯನಗರ ಬಸವರಾಜ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,745FollowersFollow
0SubscribersSubscribe
- Advertisement -spot_img

Latest Articles

error: Content is protected !!