ಹೊಸನಗರ: ಪಟ್ಟಣಕ್ಕೆ ಸಮೀಪವಿರುವ ಸರ್ವೆ ನಂಬರ್ 112ರಲ್ಲಿನ ಕಲ್ಲುಗಣಿಗಾರಿಕೆಯಿಂದ ಸುತ್ತ-ಮುತ್ತಲಿನ ಗ್ರಾಮದ ಜನರಿಗೆ ಮನೆಗಳಿಗೆ ಮತ್ತು ಜಮೀನು ತೋಟಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ರತ್ನಾಕರ್ ಬಿನ್ ಹಿರಿಯಣ್ಣ ಮತ್ತು ಮಾರಿಗುಡ್ಡ ಕಳೂರು ಗ್ರಾಮದ ಗ್ರಾಮಸ್ಥರು ಹೊಸನಗರ ಅವರಿಂದ ಬಂದ ಮನವಿ ಪತ್ರದ ಕುರಿತು ಮಂಗಳವಾರ ಪಟ್ಟಣ ಪಂಚಾಯತಿ ತುರ್ತು ಸಭೆ ನಡೆಸಿ ಹೊಸನಗರ ಪಟ್ಟಣ ಸಮೀಪ ವಿಜಯಕುಮಾರ್ ಬಿನ್ ಪುಟ್ಟಪ್ಪ ಗೌಡ ಎಂಬುವವರು ಕಲ್ಲುಗಣಿಗಾರಿಕೆ ನಡೆಸುತ್ತಿದ್ದು ಸುತ್ತ-ಮುತ್ತಲಿನ ನೂರಾರು ಎಕರೆ ಜಮೀನು ತೋಟಗಳಿಗೆ ಹಾಗೂ ಮನೆಗಳಿಗೆ ಹಾನಿ ಉಂಟಾಗುತ್ತಿದ್ದು ಅಪಾರವಾದ ಸಿಡಿಮದ್ದುಗಳನ್ನು ಬಳಸಿ ಭಾರಿ ಪ್ರಮಾಣದ ಸ್ಫೋಟ ಮಾಡುತ್ತಿದ್ದು ಇದಕ್ಕೆ ಹೊಸನಗರ ಪಟ್ಟಣ ವ್ಯಾಪ್ತಿಯ ಒಳಗೆ ಸುತ್ತ-ಮುತ್ತಲಿನ 5 ಕಿ.ಮೀ ವ್ಯಾಪ್ತಿಯ ಮನೆಗಳು ಬಿರುಕು ಬಿಡುತ್ತಿದ್ದು ಕಲ್ಲು ಬ್ಲಾಸ್ಟ್ ಮಾಡುವಾಗ ಪೂರ್ವ ಮಾಹಿತಿಯನ್ನು ನೀಡದೆ ಬ್ಲಾಸ್ಟ್ ಮಾಡುತ್ತಿರುವುದರಿಂದ ಹೊಲದಲ್ಲಿ ಕೆಲಸ ಮಾಡುವ ಜನರಿಗೆ ಶಾಲಾ ಕಾಲೇಜ್‌ಗಳಿಗೆ ಓಡಾಡುವ ಮಕ್ಕಳಿಗೆ ತೊಂದರೆಯಾಗುತ್ತಿರುವುದರಿಂದ ಹಾಗೂ ಈಗಾಗಲೇ ಸಾರ್ವಜನಿಕರ ಮನೆ ಸಾರ್ವಜನಿಕ ಕಛೇರಿ ಕಟ್ಟಡಗಳು ಸಾರ್ವಜನಿಕ ಕಾಲುಸಂಕ ಹಾಗೂ ಸಾರ್ವಜನಿಕ ನೀರಿನ ಟ್ಯಾಂಕುಗಳು ಬಿರುಕು ಹಾಗೂ ಸಾಕು ಪ್ರಾಣಿಗಳು ಗಣಿಗಾರಿಕೆಯ ಹೊಂಡದಲ್ಲಿ ಬಿದ್ದು ಹಸು ನೀಗುತ್ತಿರುವ ಈ ಬಗ್ಗೆ ಕ್ರಮ ವಹಿಸಬೇಕೆಂದು ಸಭೆಯಲ್ಲಿ ಸದಸ್ಯರು ಚರ್ಚಿಸಿ ಗಣಿಗಾರಿಕೆ ನಡೆಸುತ್ತಿರುವ ಸ್ಥಳ ಪರೀಶೀಲಿಸಿ ಮುನ್ನೆಚರಿಕೆ ದೃಷ್ಠಿಯಿಂದ ಗಣಿಗಾರಿಕೆ ವಿರುದ್ಸಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಾನ್ಯ ಜಿಲ್ಲಾಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ಶಾಸಕರಿಗೆ ಸಚಿವರಿಗೆ ಹಾಗೂ ಅಧಿಕಾರಿಗಳಿಗೆ ಸಭೆ ನಡುವಳಿ ಮಾಡಿ ಪತ್ರ ನಕಲನ್ನು ಕಳುಹಿಸಿದ್ದಾರೆ.
ಅಭಿನಂದನೆ:
ಪಟ್ಟಣ ಪಂಚಾಯತಿ ಅದ್ಯಕ್ಷ ಸದಸ್ಯರುಗಳು ಹಾಗೂ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಬಾಲಚಂದ್ರಪ್ಪ ಸಿಬ್ಬಂದಿಗಳು ತುರ್ತು ಸಭೆ ನಡೆಸಿ ನಮ್ಮ ಗ್ರಾಮದ ಗ್ರಾಮಸ್ಥರ ಕಷ್ಟಗಳನ್ನು ಅರಿತು ಸ್ವಂದಿಸಿ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸಭೆಯ ನಡುವಳಿಯನ್ನು ಕಳುಹಿಸಿದ್ದು ಪಟ್ಟಣ ಪಂಚಾಯತಿ ಅಧ್ಯಕ್ಷ ಸದಸ್ಯರುಗಳಿಗೆ ಮತ್ತು ಅಧಿಕಾರಿಗಳಿಗೆ ಕಳೂರು ಗ್ರಾಮದ ಗ್ರಾಮಸ್ಥರು ಹಾಗೂ ಮಾರಿಗುಡ್ಡ ಜನತೆ ಹಾಗೂ ಹೊಸನಗರ ಪಟ್ಟಣ ಪಂಚಾಯತಿಯ ಸಾರ್ವಜನಿಕರು ಅಭಿನಂದಿಸಿ ಅಭಿನಂದಿಸಿದ್ದಾರೆ.