ಹೊಸನಗರ: ಪಟ್ಟಣದಲ್ಲಿಂದು ಬೆಳ್ಳಂಬೆಳಗ್ಗೆ ಕೊಡಚಾದ್ರಿ ಜೆಸಿಐ ಪದಾಧಿಕಾರಿಗಳು ಪಕ್ಷಿಗಳು ಚಿಲಿಪಿಲಿಗುಟ್ಟುವ ಸಮಯದಲ್ಲಿ ಪಕ್ಷಿಗಳ ಆಹಾರ ಹಾಗೂ ನೀರಡಿಕೆ ನೀಗಿಸುವ ಸಾಧನಗಳನ್ನು ತೆಗೆದುಕೊಂಡು ಬಂದು ಚೌಡಮ್ಮ ರಸ್ತೆಯಲ್ಲಿರುವ ಮರಗಳ ಕೊಂಬೆಗಳಿಗೆ ಕಟ್ಟುವ ಕಾರ್ಯದಲ್ಲಿ ತೊಡಗಿದ್ದರು.
ಅವರ ಕಾರ್ಯಗಳನ್ನು ವೀಕ್ಷಿಸಿದ ಸಾರ್ವಜನಿಕರು ಇವರುಗಳು ಏನು ಮಾಡ್ತಾರೆ ಎಂದು ಆಶ್ಚರ್ಯ ಚಕಿತರಾಗಿ ನೋಡಿದಾಗ ಮಲೆನಾಡಿನ ತವರುರಾದ ಹೊಸನಗರದಲ್ಲೂ ಕುಡಿಯುವ ನೀರು ತತ್ವಾರ ಉಂಟಾದ ಕಾರಣ ಪಕ್ಷಿ ಸಂಕುಲಗಳಿಗಾಗಿ ನೀರು ಹಾಗೂ ಆಹಾರ ಒದಗಿಸುವ ಕಾರ್ಯದಲ್ಲಿ ತೊಡಗಿದ್ದುದನ್ನು ಕಂಡು ಆಶ್ಚರ್ಯ ಚಕಿತರಾದರು.
ಉದ್ಘೋಷದೊಂದಿಗೆ ಮಲೆನಾಡಿನ ತವರಿನಲ್ಲೇ ತಾಪಮಾನ 40 ಡಿಗ್ರಿ ಸಮೀಪ ದಾಖಲಾಗುತ್ತಿದ್ದ ಕಾರಣ ಕ್ಷೀಣಿಸುತ್ತಿರುವ ಪಕ್ಷಿ ಸಂಕುಲಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಜನರ ಸಂಕಲ್ಪ ಕೈಗೊಳ್ಳುವ ಮೂಲಕ ಪಕ್ಷಿ ಸಂಕುಲದ ರಕ್ಷಣೆಯಲ್ಲಿ ಎಲ್ಲ ಜನರು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕೊಡಚಾದ್ರಿ ಜೆಸಿಐನ ಪೂರ್ಣೇಶ್ ಮಲೆಬೈಲು, ಡಾ. ವಿನಯ್, ಪ್ರದೀಪ್, ಬಿ ಎಸ್ ಸುರೇಶ್, ರಾಧಾಕೃಷ್ಣ, ಮನು, ಕೇಶವ, ಸಂತೋಷ್, ಜ್ಯೋತಿ, ಸುಶೀಲಾ, ಸುಜಾತ, ಶೈಲಾ, ಡಾ. ಪುನೀತ್ ರಾಜ್‍ಕುಮಾರ್ ಕನ್ನಡ ಸಂಘದ ಗೌರವಾಧ್ಯಕ್ಷ ಪ್ರಶಾಂತ್ ಮೊದಲಾದವರು ಉಪಸ್ಥಿತರಿದ್ದರು.