ಹೊಸನಗರ ತಾಲ್ಲೂಕು ನಿವೃತ್ತ ನೌಕರರ ಸಂಘದ ವಾರ್ಷಿಕ ಮಹಾಸಭೆ | ತಾಲ್ಲೂಕಿನ ಎಲ್ಲ ನಿವೃತ್ತ ನೌಕರರು ಸಂಘಕ್ಕೆ ಸೇರಿ ಸಂಘದ ಬೆಳವಣಿಗೆಗೆ ಸಹಕರಿಸಿ ; ಡಾ|| ದಿನಮಣಿ | Retired Employees


ಹೊಸನಗರ: ತಾಲ್ಲೂಕಿನಲ್ಲಿ ಸಾಕಷ್ಟು ಜನ ಸರ್ಕಾರಿ ನೌಕರಿಯಿಂದ ನಿವೃತ್ತಿ ಪಡೆದಿದ್ದು ಅದರಲ್ಲಿ 10% ನೌಕರರು ನಮ್ಮ ಸಂಘದ ಸದಸತ್ಯ ಪಡೆದಿದ್ದು ಇನ್ನೂ 80% ನಿವೃತ್ತ ನೌಕರರು ಸಂಘದ ಸದಸ್ತವ ಪಡೆದಿಲ್ಲ ಎಲ್ಲರೂ ನಿವೃತ್ತ ನೌಕರರು ಸಂಘದ ಸದಸ್ಯತ್ವ ಪಡೆದು ಸಂಘದ ಏಳಿಗೆಗಾಗಿ ಶ್ರಮಿಸಬೇಕಾಗಿದ್ದು ಎಲ್ಲರೂ ಸಂಘದ ಸದಸ್ಯತ್ವ ಪಡೆಯಬೇಕೆಂದು ನಿವೃತ್ತ ಸಂಘದ ಅಧ್ಯಕ್ಷರಾದ ಡಾ|| ದಿನಮಣಿಯವರು ಹೇಳಿದರು.


ಹೊಸನಗರ ನಿವೃತ್ತ ಸಂಘದ ಕಾರ್ಯಾಲಯದಲ್ಲಿ ವಾರ್ಷಿಕ ಮಹಾಸಭೆಯನ್ನು ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮತನಾಡಿ, ನಾವು ತಿಂಗಳ ಸಭೆ ಅಥವಾ ವಿಶೇಷ ಸಭೆಗಳನ್ನು ಕರೆದಾಗ ಕೇವಲ ಬೆರಳೆಣಿಕೆಯ ಸದಸ್ಯರು ಬರುತ್ತಾರೆ ನಾವು ಯಾವುದೇ ನಿರ್ಣಯಗಳನ್ನು ತೆಗೆದುಕೊಳ್ಳಲು ಸಾದ್ಯವಾಗುವುದಿಲ್ಲ ಸಂಘದ ಅಧಿನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಬೆಂಬಲ ಬಲೆ ಇರುತ್ತದೆ ಆದರೆ ಸದಸ್ಯರ ಬಲ ಹೆಚ್ಚಿರಬೇಕು ನಮ್ಮ ಸಂಘದ ಸದಸ್ಯರ ಸಂಖ್ಯೆ ಹೆಚ್ಚಿಸಿದಷ್ಟು ಸರ್ಕಾರದ ಸೌಲತ್ತು ಪಡೆಯಲು ಸಾಧ್ಯ ಆದ್ದರಿಂದ ಸಂಘದ ಸದಸ್ಯರ ಬಲ ಹೆಚ್ಚಿಸಿಕೊಳ್ಳುವ ಅಗತ್ಯವಿರುವುದರಿಂದ ನಮ್ಮ ಸಂಘದ ಸದಸ್ಯರು ನಿವೃತ್ತ ನೌಕರರ ಮನೆ-ಮನೆಗೆ ಭೇಟಿ ನೀಡಿ ನಿವೃತ್ತ ನೌಕರರನ್ನು ಸೆಳೆಯುವ ಪ್ರಯತ್ನಿಸಿ ಎಂದರು.


ಈ ಸಭೆಯಲ್ಲಿ ಕೆ. ಸತ್ಯನಾರಾಯಣ, ಹೆಚ್.ಆರ್ ಶೇಷಾಚಲ, ಎನ್.ಪಿ ಶಂಕರನಾರಾಯಣ, ಹನುಮಂತಪ್ಪ, ಅನಂತಭಟ್, ಕನಕಮ್ಮ, ಕೆ. ಮಂಜಪ್ಪ, ರಾಮಚಂದ್ರರಾವ್, ಪದ್ಮಾವತಿಯವರನ್ನು ಸನ್ಮಾನಿಸಲಾಯಿತು.


ಈ ಸಮಾರಂಭವನ್ನು ಪಟ್ಟಣ ಪಂಚಾಯತಿ ಅಧ್ಯಕ್ಷೆ ಗುಲಾಬಿ ಮರಿಯಪ್ಪನವರು ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಡಿ.ಎಂ. ಚಂದ್ರಶೇಖರ, ಕಾರ್ಯದರ್ಶಿ ಬಿ.ಎನ್ ಅನಂತಪದ್ಮನಾಭ, ಶಾರದ ಗೋಖಲೆ, ಹೆಚ್.ಆರ್ ಮಹಾಬಲ, ಎನ್ ರಂಗನಾಥ್, ಕುಮಾರ ಸ್ವಾಮಿ ಇನ್ನೂ ಮುಂತಾದವರು ಆಗಮಿಸಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,802FollowersFollow
0SubscribersSubscribe
- Advertisement -spot_img

Latest Articles

error: Content is protected !!