ಹೊಸನಗರ: ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ತಾಲೂಕಿನಲ್ಲಿ ಪಕ್ಷಾಂತರ ಹಾಗೂ ರಾಜೀನಾಮೆ ಪರ್ವ ಜೋರಾಗಿದೆ. ತಾಲ್ಲೂಕಿನ ನಿಷ್ಠಾವಂತ ಕಾರ್ಯಕರ್ತರಾಗಿ ಬಿಜೆಪಿ ಟೌನ್ ಘಟಕದ ಅಧ್ಯಕ್ಷರಾಗಿ ಪ್ರಸ್ತುತ ಬಿಜೆಪಿ ತಾಲ್ಲೂಕು ಖಜಾಂಚಿಯಾಗಿ ಸೇವೆ ಸಲ್ಲಿಸುತ್ತಿದ್ದ ಹಿಟಾಚಿ ಶ್ರೀಧರ ಹಳಗುಂದರವರು ತಮ್ಮ ಖಜಾಂಚಿ ಹಾಗೂ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇವರು ತಾಲ್ಲೂಕು ಬಿಜೆಪಿ ಅಧ್ಯಕ್ಷ ಗಣಪತಿ ಬಿಳಗೋಡುರವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದು ಇತ್ತೀಚಿನ ರಾಜಕೀಯ ವಿದ್ಯಾಮಾನದಲ್ಲಿ ನನಗೆ ಕೆಲಸ ಮಾಡಲು ಆಗುತ್ತಿಲ್ಲ ಆದ್ದರಿಂದ ನನ್ನ ರಾಜೀನಾಮೆಯನ್ನು ಅಂಗಿಕರಿಸಬೇಕೆಂದು ಕೇಳಿಕೊಂಡಿದ್ದಾರೆ.