ಹೊಸನಗರ ; ದುರ್ಗಮ್ಮ ನಿಧನ

ಹೊಸನಗರ: ಪಟ್ಟಣದ ಸೀತಾರಾಮಚಂದ್ರ ಸಭಾಭವನದ ರಸ್ತೆಯ ನಿವಾಸಿ ದಿ|| ಗೋವಿಂದಪ್ಪ ಮಾಸ್ಟರ್‌ರವರ ಪತ್ನಿ ದುರ್ಗಮ್ಮ (ಶೇಷಮ್ಮ) (94) ಇವರು ವಯೋಸಹಜ ಅನಾರೋಗ್ಯದ ಕಾರಣ ಭಾನುವಾರ ಬೆಳಿಗ್ಗೆ ತಮ್ಮ ಸ್ವಂತ ಮನೆಯಲ್ಲಿ ನಿಧನರಾಗಿದ್ದಾರೆ.
ಮೃತರು ಐವರು ಪುತ್ರರು ಹಾಗೂ ಮೂವರು ಪುತ್ರಿಯರು, ಮೊಮ್ಮಕ್ಕಳು, ಅಪಾರ ಬಂಧು-ಬಳಗದವರನ್ನು ಅಗಲಿದ್ದಾರೆ.


ಸಂತಾಪ:

ಇವರ ನಿಧನಕ್ಕೆ ಹೊಸನಗರ ಕೋಟೆಗಾರ್ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶಶಿಧರ್‌ನಾಯ್ಕ್, ಗೌರವಾಧ್ಯಕ್ಷರಾದ ಬಿ.ಗೋವಿಂದಪ್ಪ, ಹೆಚ್ ಮಹಾಬಲ, ಹೆಚ್.ಆರ್ ಸುರೇಶ್, ಸಂಘದ ಪದಾಧಿಕಾರಿಗಳು ಸದಸ್ಯರು, ಕಟ್ಟೆ ಸುರೇಶ, ನಾರಾಯಣ ಸುನೀಲ್ ಪಿ.ಆರ್ ಸಂಜೀವ, ಮಂಜುನಾಥ್, ಇನ್ನೂ ಮುಂತಾದವರು ಮೃತರ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

ರಥೋತ್ಸವ ಪೂಜಾ ಕಾರ್ಯಕ್ರಮ:


ಹೊಸನಗರ: ಮೇ 15 ಹಾಗೂ 16 ರಂದು ಹೊಸನಗರದ ಮಹೇಶ್ವರ- ಪಾರ್ವತಿ-ಗಣಪತಿ ದೇವಸ್ಥಾನದ ಆವರಣದಲ್ಲಿ 13ನೇ ವಾರ್ಷಿಕೋತ್ಸವ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ದೇವಸ್ಥಾನ ಕಮಿಟಿಯ ಅಧ್ಯಕ್ಷರಾದ ಕನಕರಾಜ್‌ರವರು ಹೇಳಿದರು.
ಮೇ 15 ರಂದು ವಾರ್ಷಿಕೋತ್ಸವ ಸಮಾರಂಭದ ಸಲುವಾಗಿ ಮಂಗಲ ಕಾರ್ಯವು ಕ್ಷೇತ್ರದ ತಾಂತ್ರಿಕರಾದ ಅಗಮ ಶ್ರೇಷ್ಠ ಶಂಕರಪರಮೇಶ್ವರ ಭಟ್ ಕಟ್ಟೆ ಇವರ ಆಚಾರ್ಯತ್ವದಲ್ಲಿ ಹಾಗೂ ಗಾಂಡೀವ ಭಟ್ಟರ ಸಹಕಾರದೊಂದಿಗೆ ದೇವತಾ ಪ್ರಾರ್ಥನೆ, ಸ್ತಾನಶುದ್ಧಿ, ಧ್ವಜಾರೋಹಣ ಕಾರ್ಯಕ್ರಮ ಸಂಜೆ 5ಗಂಟೆಗೆ ದೇವಸ್ಥಾನದ ಮುಂಭಾಗದಲ್ಲಿ ದೇವರ ರಥೋತ್ಸವ ಕಾರ್ಯಕ್ರಮಗಳಿರುತ್ತದೆ ಭಕ್ತಾಧಿಗಳು ದೇವರಿಗೆ ಪೂಜೆ ಸಲ್ಲಿಸುವುದರ ಜೊತೆಗೆ ಹಣ್ಣು-ಕಾಯಿಯನ್ನು ಮಾಡಿಸಬಹುದು ಎಂದರು.


ಮೇ16 ರಂದು ಬೆಳಿಗ್ಗೆ ಬ್ರಹ್ಮ ಕಲಶ ಸ್ಥಾಪನೆ, ಕಲಶಾಭಿಷೇಕ, ತತ್ವಕಲಾಹೋಮ, ಎಲ್ಲಾ ದೇವರುಗಳಿಗೆ ಅಧಿವಾಸ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ ತೀರ್ಥಪ್ರಸಾದ ವಿತರಣೆ, ಮಧ್ಯಾಹ್ನ 1ಗಂಟೆಗೆ ಸಾರ್ವಜನಿಕ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಈ ಪೂಜಾ ಕಾರ್ಯಕ್ರಮಕ್ಕೆ ದೇವಸ್ಥಾನದ ಭಕ್ತರು ಸಾರ್ವಜನಿಕರು ಆಗಮಿಸಿ ಪೂಜಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೇಳಿಕೊಂಡರು.
ಈ ಸಂದರ್ಭದಲ್ಲಿ ಶ್ರೀನಿವಾಸ್ ಕಾಮತ್, ಶ್ರೀಧರ ಉಡುಪ, ಸದಾಶಿವ ಶ್ರೇಷ್ಠಿ, ದೇವಸ್ಥಾನ ಕಮಿಟಿಯ ಪದಾಧಿಕಾರಿಗಳು ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,802FollowersFollow
0SubscribersSubscribe
- Advertisement -spot_img

Latest Articles

error: Content is protected !!