ಹೊಸನಗರ : ಪಟ್ಟಣದ ರಾಮಕೃಷ್ಣ ವಿದ್ಯಾಲಯದ ಹಿಂಭಾಗ 3 ಎಕರೆ ಖಾಸಗಿ ಅಡಿಕೆ ತೋಟವಿದ್ದು ಅಡಿಕೆ ತೋಟದ ಮಾಲೀಕರು ನಮ್ಮ ಸೈಟ್ ಜಾಗವನ್ನು ಕಬಳಿಸುತ್ತಿದ್ದಾರೆಂದು ಸೈಟ್ ಮಾಲೀಕರು ದೂರು ಸಲ್ಲಿಸಿದ ಬಗ್ಗೆ ವರದಿಯಾಗಿದೆ.
ಸರ್ವೆನಂಬರ್ 152/3ರಲ್ಲಿ 1991-92ನೇ ಸಾಲಿನಲ್ಲಿ ಅಂದಿನ ತಾಲ್ಲೂಕು ಕಛೇರಿಯ ತಹಶೀಲ್ದಾರ್ ಬಡವರಿಗೆ ನಿವೇಶನ ರಹಿತರಿಗೆ ಸುಮಾರು 50 ಸೈಟ್‌ಗಳನ್ನು ಸರ್ಕಾರದಿಂದ ಮಂಜೂರಾತಿ ಮಾಡಲಾಗಿದ್ದು ಕೆಲವರು ಮನೆ ಕಟ್ಟಿಕೊಂಡು ವಾಸವಾಗಿದ್ದು ಕೆಲವರು ಆದಾಯದ ಕೊರತೆಯಿಂದ ಹಾಗೆಯೇ ಸೈಟ್‌ಗಳನ್ನು ಬಿಟ್ಟಿದ್ದು 3ಎಕರೆ ಅಡಿಕೆ ತೋಟದ ಮಾಲೀಕರು ಸೈಟ್ ಜಾಗದಲ್ಲಿ ಜೆ.ಸಿ.ಬಿ ಯಂತ್ರದ ಮೂಲಕ ಸುಮಾರು 50 ಎತ್ತರದ ಧರೆಗಳನ್ನು ಕುಸಿಯುವ ಹಾಗೇ ಮಾಡಿಕೊಂಡು ಅಡಿಕೆ ಗಿಡಗಳಿಗೆ ಮಣ್ಣನ್ನು ಉಪಯೋಗಿಸುತ್ತಿದ್ದು ಸೈಟ್‌ಗಳನ್ನು ಒತ್ತುವರಿಯಾಗಿ ಕಬಳಿಸುವ ಯತ್ನ ನಡೆಯುತ್ತಿದೆ ಎಂದು ಸೈಟ್ ಮಾಲೀಕರು ಹೊಸನಗರದ ತಹಶೀಲ್ದಾರ್ ಹಾಗೂ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಧರ್ಮಂತ ಗಂಗಾರಾಮ್ ಕೋರೆ ಹಾಗೂ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಬಾಲಚಂದ್ರಪ್ಪ ಕಂದಾಯ ಇನ್ಸ್‌ಪೆಕ್ಟರ್ ಮಂಜುನಾಥ್, ಕಸಬಾ ಗ್ರಾಮ ಆಡಳಿತಾಧಿಕಾರಿ ಕೌಶಿಕ್ ವಾಹನ ಚಾಲಕ ಗಣೇಶ್‌ರವರು ಸ್ಥಳ ಪರಿಶೀಲಿಸಿದರು.
ಧರೆ ಕುಸಿಯುವಂತೆ ಮಾಡಿರುವುದು ಸತ್ಯ : ತಹಶೀಲ್ದಾರ್ ಕೋರೆ
ಅಲ್ಲಿನ ಸೈಟ್ ಮಾಲೀಕರು ದೂರು ನೀಡಿರುವುದರಲ್ಲಿ ಸತ್ಯವಿದೆ ಸುಮಾರು 100ಅಡಿಯಷ್ಟು ಜಾಗದಲ್ಲಿ 50 ಅಡಿ ಎತ್ತರದ ಧರೆಗಳನ್ನು ಜೆ.ಸಿ.ಬಿಯಂತ್ರದ ಮೂಲಕ ಮಣ್ಣನ್ನು ತೆಗೆದು ಅವರ ಅಡಿಕೆ ಮರಗಳಿಗೆ ಹಾಕಿಕೊಂಡಿರುವುದು ಕಣ್ಣಿಗೆ ಕಾಣುತ್ತಿದೆ. ತೋಟದ ಮಾಲೀಕರ ವಿರುದ್ದ ಭೂಮಿ ಕಬಳಿಕೆ ಯತ್ನದ ಕೇಸು ಹಾಕಿ ಕ್ರಮ ಕೈಗೊಳ್ಳಲಾಗುವುದು ಈ ಸಂದರ್ಭದಲ್ಲಿ ತಹಶೀಲ್ದಾರ್ ಧರ್ಮಾಂತ ಗಂಗಾರಾಮ್ ಕೋರೆಯವರು ತಿಳಿಸಿದರು.
ಈ ಸಂದರ್ಭದಲ್ಲಿ ಅದಿಕಾರಿಗಳಾದ ತಹಶೀಲ್ದಾರ್ ಧರ್ಮಂತ ಗಂಗಾರಾಮ್ ಕೋರೆ, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಬಾಲಚಂದ್ರಪ್ಪ, ಪಟ್ಟಣ ಪಂಚಾಯತಿ ಕಂದಾಯ ಇಲಾಖೆಯ ಮಂಜುನಾಥ್, ಗ್ರಾಮ ಆಡಳಿತಾಧಿಕಾರಿ ಕೌಶಿಕ್, ಗಣೇಶ್ ಸೈಟ್ ಮಾಲೀಕರು ಸಾರ್ವಜನಿಕರ ಪರವಾಗಿ ವರುಣ್ ಕುಮಾರ್, ಸುಪ್ರದೀಪ್ ನವೀನ್, ಟೋನಿ ಆಟ್ಸ್ ಶಿವು, ಸನ್‌ಟೈಮ್ ವಿಶ್ವ, ಸನ್‌ಟೈಮ್ ಹರ್ಷ, ಹರಿಕೃಷ್ಣ, ರಾಮಣ್ಣ, ಸನ್ ಟೈಮ್ ರಾಘವೇಂದ್ರ, ಲೋಕೇಶ್ ಎನ್,
ಇನ್ನೂ ಸುಮಾರು 50 ಕ್ಕೂ ಹೆಚ್ಚು ಸಾರ್ವಜನಿಕರು ಉಪಸ್ಥಿತರಿದ್ದರು.