ಅಕ್ರಮವಾಗಿ ಸರ್ಕಾರಿ ಜಾಗ ಕಬಳಿಸಿದ ತಾ.ಪಂ ಮಾಜಿ ಸದಸ್ಯೆ ; ತೆರವು

0 63


ಹೊಸನಗರ: ತಾಲ್ಲೂಕಿನ ಕಸಬಾ ಹೋಬಳಿ ಕಚ್ಚಿಗೆಬೈಲ್ ಗ್ರಾಮದ ಸರ್ವೆನಂಬರ್ 31ರ ಸರ್ಕಾರಿ ಜಾಗವನ್ನು ಅಕ್ರಮವಾಗಿ ಕಬಳಿಸಿ ಟ್ರಂಚ್ ಹೊಡೆದು ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಇದರ ಜೊತೆಗೆ ಸಣ್ಣ-ಸಣ್ಣ ಗುಡಿಸಲುಗಳನ್ನು ನಿರ್ಮಿಸಿಕೊಂಡಿದ್ದು ಅದನ್ನು ಹೊಸನಗರ ತಾಲ್ಲೂಕು ಕಛೇರಿಯ ಕಂದಾಯ ಇಲಾಖೆಯ ಸಿಬ್ಬಂದಿಗಳು ಜಾಗವನ್ನು ತಮ್ಮ ಅಧೀನಕ್ಕೆ ಪಡೆದುಕೊಂಡಿದ್ದಾರೆ.


ಹೊಸನಗರದಿಂದ ಸುಮಾರು 13 ಕಿ.ಮೀಟರ್ ದೂರದ ಕಚ್ಚಿಗೆಬೈಲು ಗ್ರಾಮದಲ್ಲಿ ತಾಲ್ಲೂಕು ಪಂಚಾಯಿತಿಯ ಮಾಜಿ ಬಿಜೆಪಿ ಸದಸ್ಯೆಯವರು ಅಕ್ರಮವಾಗಿ ಸರ್ವೆನಂಬರ್ 31ರಲ್ಲಿ ಸರ್ಕಾರಿ ಜಾಗಕ್ಕೆ ಸುತ್ತ ಬೇಲಿ ಹಾಕಿಕೊಂಡು ಅಕ್ರಮ ಗುಡಿಸಲು ಕಟ್ಟಿಕೊಂಡು ಸುತ್ತ-ಮುತ್ತ ಪ್ರದೇಶದಲ್ಲಿ ಟ್ರಂಚ್ ತೆಗೆದು ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಏರ್ಪಡಿಸಿಕೊಂಡಿದ್ದರು.


ಸರ್ಕಾರವೂ ಬದಲು ಶಾಸಕರೂ ಬದಲು:

ಕಸಬಾ ಹೋಬಳಿ ಸರ್ವೆನಂಬರ್ 31ರಲ್ಲಿ ಸುಮಾರು 57.32ಗಂಟೆ ಸರ್ಕಾರಿ ಜಾಗವಿದ್ದು ಈ 52 ಎಕರೆಯಲ್ಲಿ ಸಾಕಷ್ಟು ಜನರು ಆಕ್ರಮವಾಗಿ ಬೇಲಿ ನಿರ್ಮಿಸಿಕೊಂಡು ಗಿಡ-ಮರಗಳನ್ನು ಬೆಳೆದು ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದು ಉಳಿದ ಜಾಗದಲ್ಲಿ ಬಿಜೆಪಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ಸುಮಾರು ಎರಡು ವರ್ಷಗಳಿಂದ ಗುಡಿಸಲು ನಿರ್ಮಿಸಿಕೊಂಡಿದ್ದು ಆದರೆ ಅಂದು ಹೊಸನಗರ ಸಾಗರ ಕ್ಷೇತ್ರದ ಬಿಜೆಪಿ ಶಾಸಕರಿದ್ದು ತಾಲ್ಲೂಕು ಆಡಳಿತಕ್ಕೆ ಬೇಲಿ ಕೀಳುವ ಬಗ್ಗೆ ಚಿಂತಿಸಿಲ್ಲ ಎಂದು ಹೇಳಲಾಗಿದೆ ಆದರೆ ಸರ್ಕಾರ ಬದಲಾಗಿದೆ ಶಾಸಕರು ಬದಲಾವಣೆಯಾಗಿದ್ದಾರೆ ಇದರ ಜೊತೆಗೆ ಅಲ್ಲಿನ ಗ್ರಾಮಸ್ಥರ ದೂರು ಜಾಸ್ತಿಯಾಗಿರುವ ಕಾರಣ ತಹಶೀಲ್ದಾರ್‌ರವರ ಆದೇಶದ ಮೇರೆಗೆ ರೆವಿನ್ಯೂ ಇನ್ಸ್‌ಪೆಕ್ಟರ್ ವೆಂಕಟೇಶ್ ಮೂರ್ತಿಯವರ ನೇತೃತ್ವದ ಗ್ರಾಮ ಆಡಳಿತಾಧಿಕಾರಿ ದೀಪು ಹಾಗೂ ಗ್ರಾಮ ಸಹಾಯಕ ಸಂಘದ ಅಧ್ಯಕ್ಷ ನಾಗಪ್ಪ ಅಶೋಕ ಇನ್ನೂ ಮುಂತಾದವರು ಅಕ್ರಮವಾಗಿ ನಿರ್ಮಿಸಿದ ಶೊಡ್ ಸುತ್ತ-ಮುತ್ತ ಹಾಕಿರುವ ಬೇಲಿಗಳನ್ನು ಕಿತ್ತು ಅಕ್ರಮವಾಗಿ ಕಬಳಿಸಿದ ಸರ್ಕಾರಿ ಜಾಗವನ್ನು ಸರ್ಕಾರದ ವಶಕ್ಕೆ ಪಡೆಯುವುದರ ಜೊತೆಗೆ ಸರ್ಕಾರಿ ಜಾಗವನ್ನು ಕಬಳಿಕೆ ಯತ್ನ ನಡೆಸಿದರೆ ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಬೋರ್ಡ್ ಹಾಕಿದ್ದಾರೆ.


ಅಕ್ರಮ ಜಾಗ ಕಬಳಿಗೆದಾರರಿಗೆ ನಡುಕ:

ಹೊಸನಗರ ತಾಲ್ಲೂಕಿನಲ್ಲಿ 10 ವರ್ಷಗಳಲ್ಲಿ ಅಕ್ರಮವಾಗಿ ಸರ್ಕಾರಿ ಜಾಗ ಕಬಳಿಕೆ ಮಾಡಿದವರಿಗೆ ನಡುಕ ಉಂಟಾಗಿದ್ದು ಅದರಲ್ಲೂ 10ವರ್ಷದಲ್ಲಿ ಹೆಚ್ಚಾಗಿ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರೆ ಹೆಚ್ಚಾಗಿದ್ದು ಅಕ್ರಮವಾಗಿ ಸರ್ಕಾರಿ ಜಾಗವನ್ನು ಕಬಳಿಸಿದ ಬಿಜೆಪಿ ಕಾರ್ಯಕರ್ತರಿಗೆ ನಡುಕ ಉಂಟಾಗಿದ್ದು ಯಾವಾಗ ನಮ್ಮ ಜಾಗವನ್ನು ಕಂದಾಯ ಇಲಾಖೆಯವರು ಕಿತ್ತುಕೊಳ್ಳುತ್ತಾರೋ ಎಂಬ ಚಿಂತೆಯಲ್ಲಿದ್ದು ನಮ್ಮ ಜಾಗವನ್ನು ಉಳಿಸಿಕೊಳ್ಳುವುದಕ್ಕೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷದ ಕಡೆಗೆ ವಾಲಿದರೆ ಆಶ್ಚರ್ಯವಿಲ್ಲ.

Leave A Reply

Your email address will not be published.

error: Content is protected !!