ಬಿಜೆಪಿ ಪಕ್ಷಕ್ಕೆ ಕಾರ್ಯಕರ್ತರ ಶಕ್ತಿ ಇದೆ ; ಹರತಾಳು ಹಾಲಪ್ಪ

0 63


ಹೊಸನಗರ: ಬಿಜೆಪಿ ಪಕ್ಷದಲ್ಲಿ ಹಳ್ಳಿ-ಹಳ್ಳಿಗಳಲ್ಲಿ ಬಿಜೆಪಿ ಕಾರ್ಯಕರ್ತರ ಪಡೆ ಇದೆ ಬಿಜೆಪಿ ಕಾರ್ಯಕರ್ತರೆ ಬಿಜೆಪಿ ಪಕ್ಷದ ಶಕ್ತಿ ಇದೆ ಆದ್ದರಿಂದ ಈ ಬಾರಿ ಬಿಜೆಪಿ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಹೊಸನಗರ-ಸಾಗರ ಕ್ಷೇತ್ರದಲ್ಲಿ ನಾನು ಗೆದ್ದೆ ಗೆಲ್ಲುತ್ತೇನೆ ಎಂದು ಹೊಸನಗರ-ಸಾಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪನವರು ಹೇಳಿದರು.


ಹೊಸನಗರ ಬಿಜೆಪಿ ಕಛೇರಿಯಲ್ಲಿ ಕಾರ್ಯಕರ್ತರ ಸಭೆ ಏರ್ಪಡಿಸಲಾಗಿದ್ದು ಈ ಶಭೆಯನ್ನು ಉದ್ಧೇಶಿಸಿ ಮಾತನಾಡಿ, ಸಾಗರ ಹೊಸನಗರ ಕ್ಷೇತ್ರದಲ್ಲಿ 400 ಕ್ಕಿಂತಲೂ ಹೆಚ್ಚು ಹಳ್ಳಿಗಳಿವೆ 264 ಕ್ಕಿಂತಲ್ಲೂ ಹೆಚ್ಚು ಶಕ್ತಿ ಕೇಂದ್ರಗಳಿವೆ. ಚುನಾವಣೆ ಹಬ್ಬಕ್ಕೆ ಉಳಿದಿರುವುದು ಕೇವಲ 23 ದಿನ. ಎಲ್ಲ ಕಡೆಗೆ ಹೋಗಿ ಭಾಷಣ ಮಾಡುವುದಕ್ಕೆ ಸಮಯ ಕಡಿಮೆ ಇರುವುದರಿಂದ ನಮ್ಮ ಪಕ್ಷದ ಕಾರ್ಯಕರ್ತರು ಮನೆ-ಮನೆಗೆ ಹೋಗಿ ಡಬಲ್ ಇಂಜಿನ್ ಸರ್ಕಾರದ ಸಾಧನೆ ಹೇಳುವುದು ಒಳ್ಳೆಯದು. ಎಲ್ಲ ಕಡೆಗೂ ಅಭ್ಯರ್ಥಿಗಳೇ ಹೋಗಲು ಸಾಧ್ಯವಿಲ್ಲ ಎಂದರು.


ಕಂಸ ಎಂದವರು ಭೀಷ್ಮ ಎನ್ನುತ್ತಿದ್ದಾರೆ :

ಕಂಸವೆಂದವರು ಇಂದು ಬೀಷ್ಮ ಎಂದು ಕಾಗೋಡು ತಿಮ್ಮಪ್ಪನವರನ್ನು ಚುನಾವಣೆ ಭಾಷಣಕ್ಕೆ ಕರೆದುಕೊಂಡು ಹೋಗುತ್ತಿದ್ದು ಭೀಷ್ಮ ನೆನೆಸಿಕೊಂಡ ಕಾಗೋಡು ತಿಮ್ಮಪ್ಪನವರು ದುಷ್ಟರ ಕೌರವರ ಬಳಗಕ್ಕೆ ಸೇರಿಕೊಂಡಿರುವುದರಿಂದ ಅಂದು ಮಹಾ ಭಾರತದಲ್ಲಿ ಭೀಷ್ಮನಿಗೆ ಸಾವಾಯಿತು. ಕಲಿಯುಗದ ಭೀಷ್ಮನಿಗೆ ಸೋಲಾಗುತ್ತದೆ ಎಂದರು.


ಹೊಸನಗರಕ್ಕೆ ಏನು ಅಭಿವೃದ್ಧಿ ಮಾಡಬೇಕು:

ಹೊಸನಗರ ತಾಲ್ಲೂಕಿಗೆ ರಸ್ತೆಗಳನ್ನು ಮಾಡಿಸಿದ್ದೇವೆ ನೀರಿಗಾಗಿ ಬಜೆಟ್‌ನಲ್ಲಿ ಹಣ ಇಡಲಾಗಿದೆ. ಹೊಸನಗರಕ್ಕೆ ಏನು ಮಾಡಬೇಕು ಯಾವ ಅಭಿವೃದ್ಧಿ ಕಾಮಗಾರಿ ಕೈಗೆ ಎತ್ತಿಕೊಳ್ಳಬೇಕೆಂದರೆ ಆ ಕೆಲಸವನ್ನು ಮಾಡಿಕೊಡುತ್ತೇನೆ ಅದನ್ನು ಬಿಟ್ಟು ಅಭಿವೃದ್ಧಿ ಮಾಡಿಲ್ಲ ಅಭಿವೃದ್ಧಿ ಮಾಡಿಲ್ಲ ಎಂದು ಹೇಳಿಕೊಳ್ಳುವುದಲ್ಲಿ ಅರ್ಥಯಿಲ್ಲ ಎಂದರು.


ಲಿಂಗಾಯಿತ, ಬ್ರಾಹ್ಮಣರ ವಿರೋಧಿ ನಾನಲ್ಲ:

ಚುನಾವಣೆಯ ಸಂದರ್ಭದಲ್ಲಿ ಸುಳ್ಳು ಹೇಳಬೇಕು ಆದರೆ ಈ ರೀತಿ ಸುಳ್ಳು ಹೇಳಿದರೆ ಯಾರು ನಂಬುವುದಿಲ್ಲ ನಾನು ಬ್ರಾಹ್ಮಣರ ವಿರೋಧಿ ಲಿಂಗಾಯಿತರ ವಿರೋಧಿ ಎಂದು ಬಿಂಬಿಸುವ ಕೆಲಸ ನಡೆಯುತ್ತಿದೆ. ನನ್ನ ಜೊತೆಗಿರುವವರೆಲ್ಲ ಲಿಂಗಾಯಿತ ಜಾತಿಗೆ ಸೇರಿದವರು. 19ವರ್ಷಗಳಿಂದ 800 ಜನರು ನನ್ನ ಜೊತೆಗೆ ಕೆಲಸ ಮಾಡುತ್ತಿರುವವರು ಹೆಚ್ಚಿನ ಜನರು ಲಿಂಗಾಯಿತರೇ ನನ್ನ ಜೊತೆಗಿದ್ದಾರೆ. ಕೆಲಸ ಸರಿ ಮಾಡಿಲ್ಲ ಎಂದಾಗ ಬೈಯುವುದು ಮಾಲೀಕರ ಕರ್ತವ್ಯ ಆದರೆ ಅವರ‍್ಯಾರು ಕೆಲಸ ಬಿಟ್ಟು ಹೋಗಿಲ್ಲ ನನ್ನ ಜೊತೆಗೆ ಇದ್ದಾರೆ ನಾನು ದುರಹಂಕಾರಿ ಜನರಿಗೆ ಸ್ಪಂದಿಸುವುದಿಲ್ಲ ಎಂದು ಹೇಳುವವರು ನಾನು ಯಾರಿಗಾದರೂ ಬೈದಿರುವ ಉದಾಹರಣೆ ಇದೆಯೇ? ಎಂದು ಕಾರ್ಯಕರ್ತರನ್ನು ಪ್ರಶ್ನಿಸಿದರು.

ಕೆಲಸ ಮಾಡದಿದ್ದಾಗ ಅಧಿಕಾರಿಗಳಿಗೆ ಬೈದಿರಬಹುದು ಅದು ಕೆಲಸದ ವಿಷಯಕ್ಕೆ ಮಾತ್ರ ಸೀಮಿತವಾಗಿದ್ದು ಹಗೆ ತನಮಾಡಿಲ್ಲ ಎಂದರು.
ಭಿನ್ನಾಭಿಪ್ರಾಯ ಇರುವುದು ಸಹಜ ಅದನ್ನು ಒಂದು ಮಾಡಿಕೊಂಡು ಎಲ್ಲ ಬಿಜೆಪಿ ಕಾರ್ಯಕರ್ತರು ಹಗಲು-ರಾತ್ರಿ ಎನ್ನದೇ ಕೆಲಸ ಮಾಡಿ ನನ್ನನ್ನೂ ಗೆಲ್ಲಿಸಿ ಎಂದು ಮನವಿ ಮಾಡಿದರು.


ಈ ಸಂದರ್ಭದಲ್ಲಿ ಅಂಬೇಡ್ಕರ್ ನಿಗಮದ ನಿರ್ದೆಶಕ ಎನ್.ಆರ್ ದೇವಾನಂದ್, ತಾಲ್ಲೂಕು ಬಿಜೆಪಿ ಅದ್ಯಕ್ಷ ಗಣಪತಿ ಬಿಳಗೋಡು, ಹಿರಿಯರಾದ ಉಮೇಶ್ ಕಂಚುಗಾರ್, ಮಂಡಾಣಿ ಮೋಹನ್, ಚಾಲುಕ್ಯ ಬಸವರಾಜ್, ಟೌನ್ ಪಂಚಾಯಿತಿ ಸದಸ್ಯ ಗುರುರಾಜ್ ಎಂ.ಎನ್ ಸುಧಾಕರ್, ಎ.ವಿ. ಮಲ್ಲಿಕಾರ್ಜುನ್, ಗಾಯಿತ್ರಿ ನಾಗರಾಜ್, ಕೃಷ್ಣವೇಣಿ, ಟೌನ್ ಘಟಕದ ಅಧ್ಯಕ್ಷ ಕೋಣೆಮನೆ ಶಿವಕುಮಾರ್, ಹೆಚ್.ಎಸ್. ಮಂಜುನಾಥ್, ಸತ್ಯನಾರಾಯಣ ವಿ ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!