ಶಿಕ್ಷಣ ಕ್ರಾಂತಿಯ ಮೂಲಕ ಶೋಷಣೆ ಮುಕ್ತ ಸಮಾಜವನ್ನು ನಿರ್ಮಿಸಿದವರು ಸಾವಿತ್ರಿಬಾಯಿ ಫುಲೆ ; ಮೂಲೆಗದ್ದೆ ಶ್ರೀಗಳು

0 32

ರಿಪ್ಪನ್‌ಪೇಟೆ: ಸಮಾಜದಲ್ಲಿ ಶೋಷಣೆಯನ್ನು ಹೊಗಲಾಡಿಸುವ ನಿಟ್ಟಿನಲ್ಲಿ ದಲಿತರ ಮತ್ತು ಮಹಿಳೆಯರ ಮೇಲೆ ಶೋಷಣೆಗಳು ನಡೆಯುತ್ತಿದ್ದು ಆದನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಶಿಕ್ಷಣ ಕ್ರಾಂತಿಯ ಮೂಲಕ ಜನಜಾಗೃತಿ ಮೂಡಿಸಿದ ಸಾವಿತ್ರಿಬಾಯಿ ಫುಲೆ ಓರ್ವ ದಿಟ್ಟ ಕ್ರಾಂತಿಕಾರಿ ಮಹಿಳೆಯಾದರು ಎಂದು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಮಹಾಸ್ವಾಮೀಜಿ ಹೇಳಿದರು.

ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದಲ್ಲಿ ಆಯೋಜಿಸಲಾದ ಶಿಕ್ಷಕಿ ಸಾವಿತ್ರಿಬಾಯಿ ಫುಲೆ 45 ನಿಮಿಷದ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಆಶೀರ್ವಚನ ನೀಡಿ, ಈ ಹಿಂದೆಯೂ ಮಹಿಳೆಯರ ಮತ್ತು ದಲಿತರ ಮೇಲೆ ದೌರ್ಜನ್ಯಗಳು ಶೋಷಣೆಗಳು ನಡೆಯುತ್ತಿದ್ದು
ಅದನ್ನು ಮೆಟ್ಟಿನಿಲ್ಲುವುದರೊಂದಿಗೆ ಮುಗ್ದ ಮಹಿಳೆಯರಲ್ಲಿ ಅಕ್ಷರದ ಕ್ರಾಂತಿ ಮಾಡಿ ಸಮಾಜದ ಮುಖ್ಯವಾಹಿನಿಗೆ ತರುವುದರೊಂದಿಗೆ ಸ್ತ್ರಿ ಸಮಾನತೆಯನ್ನು ಬೋಧಿಸಿದ ಪುರುಷ ಪ್ರಧಾನದಂತೆ ಸ್ತ್ರಿಯರಿಗೂ ಸಮಾಜದಲ್ಲಿ ಸಮಾನ ಅವಕಾಶ ಕಲ್ಪಿಸಿದ ಕೀರ್ತಿ ಸಾವಿತ್ರಿಬಾಯಿ ಫುಲೆ ಸಲ್ಲುತ್ತದೆಂದರು.


ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿ ಅಂಭ್ರಯಾಮಠ, ಖ್ಯಾತ ನಾಟಕ ನಿರ್ದೇಶಕ ಸಿನಿಮಾ ನಟ ಏಸು ಪ್ರಕಾಶ್ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಅಂಭ್ರಯಾಮಠ, ಖ್ಯಾತ ನಾಟಕ ನಿರ್ದೇಶಕ ಸಿನಿಮಾ ನಟ ಏಸು ಪ್ರಕಾಶ್, ಪಶು ಇಲಾಖೆಯ ನೌಕರ ಮಲ್ಲಿಕಾರ್ಜುನಯ್ಯ, ತಮ್ಮಣ್ಣಗೌಡ, ಬಿ.ಯುವರಾಜಗೌಡ ಇನ್ನಿತರ ಹಲವರು ಹಾಜರಿದ್ದರು.

Leave A Reply

Your email address will not be published.

error: Content is protected !!