ಸಾಗರ, ತೀರ್ಥಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಅತ್ಯಧಿಕ ಮತಗಳಿಂದ ಜಯಗಳಿಸಲಿದ್ದಾರೆ ; ಕಲಗೋಡು ರತ್ನಾಕರ್

0 67


ಹೊಸನಗರ: ರಾಷ್ಟ್ರದ ಏಕತೆಯಲ್ಲಿ ಒಂದು ಎಂದು ತಿಳಿದು ಜನಸೇವೆ ಮಾಡಿ ಆಡಳಿತ ನಡೆಸುತ್ತಿರುವ ಪಕ್ಷ ಎಂದರೆ ಕಾಂಗ್ರೆಸ್ ಪಕ್ಷ, ಈ ಕಾಂಗ್ರೆಸ್ ಪಕ್ಷ ಸಮುದ್ರವಿದಂತೆ ಈ ಸಮುದ್ರಕ್ಕೆ ಹನಿ-ಹನಿ ನೀರನ್ನು ಸೆಳೆಯುವ ಶಕ್ತಿ ಇದೆ ಈ ಕಾಂಗ್ರೇಸ್ ಪಕ್ಷಕ್ಕೆ ಯಾರು ಬೇಕಾದರೂ ಬರಬಹುದು ಹೋಗಬಹುದು ಎಂದು ಡಾ|| ರಾಜನಂದಿನಿಯ ಬಗ್ಗೆ ಪರೋಕ್ಷವಾಗಿ ಕಲಗೋಡು ರತ್ನಾಕರ್ ವ್ಯಂಗ್ಯ ಮಾಡಿದರು.

ಪಟ್ಟಣದ ಕಾಂಗ್ರೆಸ್ ಕಛೇರಿ (ಗಾಂಧಿಮಂದಿರ)ಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿ, ಸಮುದ್ರದಿಂದ ಒಂದೆರಡು ಹನಿ ನೀರು ಹೋದರೆ ಸಮುದ್ರ ಚಿಂತಿಸುವುದಿಲ್ಲ ಅದೇ ರೀತಿ ಹಾಗೇ ಬಂದು ಹೀಗೆ ಹೋದವರ ಬಗ್ಗೆ ನಮ್ಮ ಪಕ್ಷ ಏಕೆ ಚಿಂತಿಸಬೇಕೆಂದರು.


ಸಿದ್ದಾಂತದಡಿಯಲ್ಲಿ ಕೆಲಸ:

ನಾನು ಕಾಂಗ್ರೆಸ್ ಪಕ್ಷದಲ್ಲಿ 37 ವರ್ಷ ಸಾಮಾನ್ಯ ಕಾರ್ಯಕರ್ತನಾಗಿ ಗ್ರಾಮ ಪಂಚಾಯತಿ ಅಧ್ಯಕ್ಷನಾಗಿ ಸದಸ್ಯನಾಗಿ ತಾಲ್ಲೂಕು ಪಂಚಾಯತಿ ಸದಸ್ಯರಾಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ, ಉಪಾದ್ಯಕ್ಷನಾಗಿ ಸೇವೆ ಸಲ್ಲಿಸಿದ ಅನುಭವದಿಂದ ವಿಧಾನಸಭೆಯ ಸದಸ್ಯರಾಗಲೂ ಅರ್ಜಿ ಸಲ್ಲಿಸಿದ್ದೇನೆ ಆದರೆ ಪಕ್ಷ ಸಾಕಷ್ಟು ಅಧಿಕಾರ ನನಗೆ ನೀಡಿದೆ ಅಧಿಕಾರಕ್ಕಾಗಿ ಖುರ್ಚಿಗಾಗಿ ಎಂದು ಆಸೆ ಪಟ್ಟವನಲ್ಲ ಕಾಂಗ್ರೆಸ್ ಪಕ್ಷ ಬೇಳೂರು ಗೋಪಾಲಕೃಷ್ಣರವರಿಗೆ ಸಾಗರ ಹೊಸನಗರ ವಿಧಾನಸಭೆಯ ಅಭ್ಯರ್ಥಿ ಎಂದು ಘೋಷಿಸಿದೆ ನಾವು ಪಕ್ಷದ ಸಿದ್ದಾಂತದ ಅಡಿಯಲ್ಲಿ ಕೆಲಸ ಮಾಡುತ್ತಿರುವುದರಿಂದ ಅವರ ಜಯಕ್ಕಾಗಿ ಒಟ್ಟಾಗಿ ಹೋರಾಟ ನಡೆಸುತ್ತೇವೆ ಎಂದರು.

ಅತ್ಯಧಿಕ ಮತಗಳ ಅಂತರದಿಂದ ಜಯ :

ಹೊಸನಗರ-ಸಾಗರ ಕ್ಷೇತ್ರ ಹಾಗೂ ತೀರ್ಥಹಳ್ಳಿ-ಹೊಸನಗರ ಕ್ಷೇತ್ರದ ಚುನಾವಣೆಯ ನಾಯಕತ್ವವನ್ನು ನನಗೆ ನೀಡಿದ್ದು ಎರಡು ಕ್ಷೇತ್ರದ ಅಭ್ಯರ್ಥಿಯನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿಕೊಂಡು ಬರುವ ತಾಕ್ಕತ್ತು ನನಗಿದೆ. ಮೇ 13ರ ಚುನಾವಣೆಯ ಫಲಿತಾಂಶದವರೆಗೆ ಕಾಯಿರಿ ಎಂದರು.


ಬಿಜೆಪಿ ಸರ್ಕಾರ ಭ್ರಷ್ಠಾಚಾರದಲ್ಲಿ ಮುಳುಗಿದೆ:

ಸುಮಾರು 4 ವರ್ಷ 10 ತಿಂಗಳು ಕರ್ನಾಟಕದ ಆಡಳಿತ ನಡೆಸುತ್ತಿದ್ದ ಬಿಜೆಪಿ ಸರ್ಕಾರ ಭ್ರಷ್ಟಾಚಾರದಿಂದ ಆಡಳಿತ ನಡೆಸುತ್ತಿದ್ದೆ. ಇವರ ಅವಧಿಯಲ್ಲಿ ಗ್ಯಾಸ್ ಬೆಲೆ 1200, ಎಣ್ಣೆ 200, ದಿನಸಿ ಸಾಮಾಗ್ರಿಗಳ ಬೆಲೆ ಗಗನಕ್ಕೆ ಹೋಗಿದೆ ಜನ ಸಾಮಾನ್ಯರು ಬದುಕುವುದೇ ಕಷ್ಟಕರವಾಗಿದ್ದು ಜನರು ಯಾವಾಗ ಚುನಾವಣೆ ಬರುತ್ತದೆ ಎಂದೆನಿಸಿದೆ ಈ ಬಾರಿಯ ಚುನಾವಣೆಯಲ್ಲಿ ಬಜೆಪಿ ಧೂಳಿಪಟವಾಗಲಿದೆ ಎಂದು, ಇವರು ಮಾಡಿದ ಭ್ರಷ್ಠಾಚಾರಕ್ಕೆ ಸಾರ್ವಜನಿಕ ಸಭೆಗಳಿಗೆ ಜನರು ಬರುವುದಿಲ್ಲ ಎಂದು ತಿಳಿದು ಸಿನಿಮಾ ನಟರ ಮೊರೆ ಹೋಗಿದ್ದಾರೆ ಎಂದು ಬಿಜೆಪಿ ವಿರುದ್ಧ ವ್ಯಂಗ್ಯ ಮಾಡಿದರು.


ಕ್ಷೇತ್ರದ ಜನರಲ್ಲಿ ಹಾಲಪ್ಪನವರು ಕೆಲಸ ಮಾಡದೇ ಕೊನೆಯ ಘಳಿಗೆಯಲ್ಲಿ ಅಲ್ಲಲ್ಲಿ ಗುದ್ದಲಿ ಪೂಜೆ ಮಾಡಿ ಅಭಿವೃದ್ಧಿ ಕೆಲಸ ಮಾಡುವುದು ಬಿಜೆಪಿ ಸರ್ಕಾರದಿಂದ ಮಾತ್ರ ಎಂದು ನಮ್ಮದು ಡಬಲ್ ಎಂಜಿನ್ ಸರ್ಕಾರ ಎಂದು ತಾವೇ ಹೊಗಳಿಕೊಳ್ಳುತ್ತಾ ಹೋಗುತ್ತಿದ್ದು ಇವರಿಗೆ ಈ ಕ್ಷೇತ್ರದ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.


ಸಾರ್ವಜನಿಕರ ಹಣ ಯಾರದ್ದೊ ಜಾತ್ರೆ :

ಭಾರತ ದೇಶದ ಪ್ರದಾನಮಂತ್ರಿಗಳಾದ ನರೇಂದ್ರ ಮೋದಿಯವರು ಕರ್ನಾಟಕದಲ್ಲಿ ಈ ಬಾರಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ ಎಂದು ತಿಳಿದು ತಿಂಗಳಿಗೆ ಮೂರು ಬಾರಿ ಭೇಟಿ ನೀಡುತ್ತಿದ್ದು ಇವರ ಆಗುಹೋಗುಗಳು ಬಂದು ಹೋದ ಖರ್ಚನ್ನು ನಾವು ಇತರೆ ರೀತಿಯಲ್ಲಿ ಸರ್ಕಾರಕ್ಕೆ ಕಟ್ಟುತ್ತಿರುವ ಹಣವನ್ನು ಪೋಲು ಮಾಡುತ್ತಿದ್ದಾರೆ. ಗಾಂಧೀಜಿಯವರ ಉಪ್ಪಿನ ಸತ್ಯಾಗ್ರಹಕ್ಕೂ ಮನ್ನಣೆ ನೀಡದೆ ಉಪ್ಪಿಗೂ ಸಹ ಜಿಎಸ್‌ಟಿ ಹಾಕುತ್ತಿದ್ದು ನಾವು ನೀಡುವ ಹಣದಲ್ಲಿ ಬೇರೆಯವರು ಮಾಜ ಮಾಡುತ್ತಿದ್ದಾರೆ ಇದು ಎಷ್ಟು ಸರಿ ಎಂದು ಪ್ರಶ್ನಿಸಿ ತಮ್ಮ ಸ್ವಂತ ಹಣದಿಂದ ಮೋದಿಯವರನ್ನು ಕರೆಸಿ ಪ್ರಚಾರಪಡಿಸಲಿ ಎಂದರು.


ಈ ಪತ್ರಿಕಾಘೋಷ್ಠಿಯಲ್ಲಿ ಬ್ಲಾಕ್ ಅಧ್ಯಕ್ಷ ಬಿ.ಜಿ.ನಾಗರಾಜ್, ಪ್ರಧಾನ ಕಾರ್ಯದರ್ಶಿ ಸದಾಶಿವ ಶ್ರೇಷ್ಠಿ, ಚಂದ್ರಮೌಳಿ ಗೌಡ, ಪ್ರಭಾಕರ್, ಶ್ರೀನಿವಾಸ್ ಕಾಮತ್, ಸುಮಾ ಸುಬ್ರಹ್ಮಣ್ಯ, ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಹೆಚ್. ಮಹಾಬಲರಾವ್, ಅಂಜನ್ ರಾಜಮೂರ್ತಿ, ಹೆಚ್.ಎಂ ನಿತ್ಯಾನಂದ, ಸಣ್ಣಕ್ಕಿ ಮಂಜು, ಅಶ್ವಿನಿಕುಮಾರ್, ಜಯನಗರ ಶುಭಾಕರ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!