ಹೊಸನಗರವನ್ನು ಮಾದರಿ ತಾಲೂಕನ್ನಾಗಿ ಮಾಡುವುದೇ ನನ್ನ ಮುಖ್ಯ ಗುರಿ ; ಶಾಸಕ ಬೇಳೂರು ಗೋಪಾಲಕೃಷ್ಣ

0 81


ಹೊಸನಗರ: ಇನ್ನೂ ಐದು ವರ್ಷದಲ್ಲಿ ಹೊಸನಗರ ತಾಲ್ಲೂಕನ್ನು ಮಾದರಿ ತಾಲ್ಲೂಕನ್ನಾಗಿ ಮಾಡುವುದೇ ನನ್ನ ಮುಖ್ಯ ಗುರಿಯಾಗಿದ್ದು ಈ ತಾಲ್ಲೂಕಿನ ಜನರು ಯಾವುದೇ ಮೂಲಭೂತ ಸಮಸ್ಯೆಗಳಿಂದ ವಂಚಿತರಾಗದಂತೆ ನೋಡಿಕೊಳ್ಳುವ ಗುರಿ ನನ್ನ ಜವಾಬ್ದಾರಿಯಾಗಿದೆ ಎಂದು ಹೊಸನಗರ ಸಾಗರ ಕ್ಷೇತ್ರದ ಶಾಸಕರಾದ ಬೇಳೂರು ಗೋಪಾಲಕೃಷ್ಣರವರು ಹೇಳಿದರು.

ಪಟ್ಟಣದ ಆರ್ಯ ಈಡಿಗರ ಸಭಾಭವನದ ಆವರಣದಲ್ಲಿ ತಾಲ್ಲೂಕು ಕಾಂಗ್ರೆಸ್ ಪಕ್ಷದ ವತಿಯಿಂದ ನೂತನ ಶಾಸಕರಿಗೆ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿದ್ದು ಅಭಿನಂದನೆ ಸ್ವೀಕರಿಸಿ ಮಾತನಾಡಿ, ಹೊಸನಗರದಲ್ಲಿ ಕುಂಠಿತವಾಗಿರುವ ಕಾಮಗಾರಿಗಳನ್ನು ತಕ್ಷಣದಿಂದಲೇ ಕೈಗೆತ್ತಿಕೊಳ್ಳಲು ಅಧಿಕಾರಿಗಳಿಗೆ ತಿಳಿಸಲಾಗಿದ್ದು 94ಸಿ, 94ಸಿಸಿ ಬಗರ್‌ಹುಕುಂ ಹಾಗೂ ಕಂದಾಯ ಇಲಾಖೆಗೆ ಸಂಬಂಧಿಸಿದ ರೈತರ ಸಮಸ್ಯೆಗಳನ್ನು ಶೀಘ್ರದಲ್ಲಿ ಬಗೆ ಹರಿಸಲಾಗುವುದು ಎಂದರು.


ನಾನು ದ್ವೇಷ ರಾಜಕೀಯ ಮಾಡುವವನಲ್ಲ:

ದ್ವೇಷ ರಾಜಕೀಯ ಮಾಡುವವನು ನಾನಲ್ಲ. ಎಲ್ಲ ವರ್ಗದ ಜನರನ್ನು ಒಂದು ಮಾಡಿಕೊಂಡು ಜನ ಸೇವೆ ಮಾಡುವ ಗುಣವನ್ನು ನಾನು ಹೊಂದಿದ್ದು ಎಲ್ಲ ಪಕ್ಷದ ಕಾರ್ಯಕರ್ತರನ್ನು ಒಂದುಗೂಡಿಸಿಕೊಂಡು ಅಣ್ಣ-ತಮ್ಮಂದಿರಂತೆ ಒಟ್ಟಾಗಿ ಜನರ ಸೇವೆ ಮಾಡೋಣ. ನಾನು ಮತ್ತು ನಮ್ಮ ಕಾರ್ಯಕರ್ತರು ದ್ವೇಷ ರಾಜಕೀಯ ಮಾಡುವುದಿಲ್ಲ ನಮ್ಮ ವಿರೋಧಿಗಳು ದ್ವೇಷ ಸಾಧನೆ ಮಾಡದೇ ನಮ್ಮೊಂದಿಗೆ ಕೈ ಜೋಡಿಸಿದರೆ ಅಭಿವೃದ್ಧಿ ಕೆಲಸ ಮಾಡುವುದು ಸುಲಭವಾಗುತ್ತದೆ. ನಾನು ಹೊಸನಗರ-ಸಾಗರ ಕ್ಷೇತ್ರದ ಜನರ ಸೇವಕನಾಗಿ ನಾನು ಜನರ ಸೇವೆ ಮಾಡಲು ಸಿದ್ಧರಿದ್ದು ನನ್ನ ಜೊತೆ ಕೆಲಸ ಮಾಡಿಸಿಕೊಳ್ಳಲು ಯಾವುದೇ ಮಧ್ಯವರ್ತಿಗಳ ಅವಶ್ಯಕತೆಯಿಲ್ಲ. ನೆರವಾಗಿ ನನ್ನ ಜೊತೆಗೆ ಮಾತನಾಡಿಕೊಂಡು ನಿಮ್ಮ ಸಮಸ್ಯೆಯನ್ನು ಹೇಳಿಕೊಳ್ಳಿ ನನ್ನ ಕೈಯಲ್ಲದ ಸಹಾಯ ಮಾಡುವುದಾದರೆ ಮಾಡಿಕೊಡಕೊಡುತ್ತೇನೆ ಎಂದರು.



ಜನ ಸೇವೆ ಮಾಡಲೆಂದೆ ಬೇಳೂರುರನ್ನು ಜನ ಗೆಲ್ಲಿಸಿದ್ದಾರೆ: ಕಾಗೋಡು ತಿಮ್ಮಪ್ಪ


ಅಭಿನಂದನಾ ಸಮಾರಂಭಕ್ಕೆ ಆಗಮಿಸಿದ ಮಾಜಿ ಕಂದಾಯ ಸಚಿವ ಹಾಗೂ ಬೇಳೂರು ಗೋಪಾಲಕೃಷ್ಣರವರ ಮಾವ ಕಾಗೋಡು ತಿಮ್ಮಪ್ಪನವರು ಮಾತನಾಡಿ, ಆ ದೇವರು ಜನರ ಕಷ್ಟಗಳನ್ನು ಅರಿತು ಬೇಳೂರು ಗೋಪಾಲಕೃಷ್ಣರವರನ್ನು ಜನರ ಸೇವೆ ಮಾಡಲು ಕಳುಹಿಸಿದ್ದಾರೆ ಜನರ ಸುಖ ದುಃಖಗಳನ್ನು ಇವರೊಂದಿಗೆ ಹಂಚಿಕೊಂಡು ಅಭಿವೃದ್ಧಿ ಕೆಲಸ ಮಾಡಲು ಸಹಕರಿಸಿರಿ ಎಂದರು.


ಅಭಿವೃದ್ಧಿಯಲ್ಲಿ ಹೊಸನಗರ ಕ್ಷೇತ್ರ ಮೂಲೆಗುಂಪು: ಹಾಲಗದ್ದೆ ಉಮೇಶ್
ಹೊಸನಗರ ತಾಲ್ಲೂಕನ್ನು ಸಾಗರಕ್ಕೆ ಅರ್ಧ ತೀರ್ಥಹಳ್ಳಿಗೆ ಅರ್ಧ ಸೇರಿಸಿಕೊಂಡು ನಮ್ಮ ಹೊಸನಗರ ಕ್ಷೇತ್ರವನ್ನು ಇಬ್ಬಾಗ ಮಾಡಲಾಗಿದ್ದು ಅಲ್ಲಿಂದ ಇಲ್ಲಿಯವರೆಗೆ ಹೊಸನಗರ ಕ್ಷೇತ್ರವನ್ನು ಮಲತಾಯಿ ಧೋರಣೆಯಿಂದ ನಮ್ಮ ಕ್ಷೇತ್ರ ಹಾಳಾಗಿ ಹೋಗಿದೆ ಸರ್ಕಾರದ ಯಾವುದೇ ಅನುದಾನ ತಂದರೂ ನಮ್ಮ ಕ್ಷೇತ್ರಕ್ಕೆ ಶೂನ್ಯವಾಗಿದ್ದು ಅಭಿವೃದ್ಧಿಯಾಗಿದ್ದು ತಾವು ನೂತನ ಶಾಸಕರಾಗಿ ಆಯ್ಕೆಯಾಗಿದ್ದೀರಿ ನಮ್ಮ ಕ್ಷೇತ್ರಕ್ಕೆ ಮಲತಾಯಿ ಧೋರಣೆ ತೊರಿಸದೇ ಸಮನವಾಗಿ ಅಭಿವೃದ್ಧಿ ಪಡಿಸಿ ಎಂದು ಪಟ್ಟಣ ಪಂಚಾಯತಿ ಸದಸ್ಯರಾದ ಹಾಲಗದ್ದೆ ಉಮೇಶ್‌ರವರು ಸಭೆಯಲ್ಲಿ ಹೇಳಿದರು.

ಈ ಅಭಿನಂದನ ಸಮಾರಂಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಕಲಗೋಡು ರತ್ನಾಕರ್, ತಾಲ್ಲೂಕ್ ಪಂಚಾಯತಿ ಮಾಜಿ ಸದಸ್ಯರಾದ ಚಂದ್ರಮೌಳಿ ಗೌಡ, ಎರಗಿ ಉಮೇಶ್, ಹರಿದ್ರಾವತಿ ಅಶೋಕ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್, ಪ್ರಧಾನ ಕಾರ್ಯದರ್ಶಿ ಸದಾಶಿವ ಶ್ರೇಷ್ಠಿ, ಟೌನ್ ಘಟಕದ ಅಧ್ಯಕ್ಷ ಗುರುರಾಜ್, ಹಿರಿಯರಾದ ಶ್ರೀನಿವಾಸ್ ಕಾಮತ್, ಅಶ್ವಿನಿಕುಮಾರ್, ಸಿಂಥಿಯಾ ಸೆರಾವೋ, ಮಹಾಬಲರಾವ್, ಜಯಶೀಲಪ್ಪ ಗೌಡ, ಎಂ.ಪಿ ಸುರೇಶ್, ಬೃಂದಾವನ ಪ್ರವೀಣ್, ಜಯನಗರ ಗುರು, ಸಣ್ಣಕ್ಕಿ ಮಂಜು, ಜಯನಗರ ಗೋಪಿ, ಮಂಜುನಾಥ್ ಶ್ರೇಷ್ಠಿ, ಚೇತನ್ ದಾಸ್   ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!